ಹಾವೇರಿ: ನಗರದಲ್ಲಿ ಮನೆ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ 4.84 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನಗರದಲ್ಲಿ ಮನೆ ಕಳ್ಳತನ ಮಾಡಿದ್ದ ಮಹ್ಮದ್ ಹುಸೇನ್ ಶೇಖ್ (28) ಹಾಗೂ ಮಹ್ಮದ್ ಬೇೆಪಾರಿ(28) ಬಂಧಿತ ಆರೋಪಿಗಳು. ಇತ್ತೀಚೆಗೆ ನಗರದ ಯಾಲಕ್ಕಿ ಓಣಿಯಲ್ಲಿಮನೆ ಕಳ್ಳತನ ಆಗಿರುವ ಕುರಿತು ಪ್ರಕರಣ ದಾಖಲಾದಹಿನ್ನೆಲೆ ಆರೋಪಿಗಳ ಪತ್ತೆಗಾಗಿ ತಂಡ ರಚಿಸಿ ಶೋಧ ಕಾರ್ಯ ನಡೆಸಲಾಗುತ್ತಿತ್ತು. ಶುಕ್ರವಾರ ಹಾನಗಲ್ಲ ರಸ್ತೆಯಹೆದ್ದಾರಿ ಕೆಳ ಸೇತುವೆಯಸಮೀಪ ಆರೋಪಿಗಳು ಸಂಶಯಾಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿ ಠಾಣೆಗೆ ತಂದುವಿಚಾರಿಸಿದಾಗ ಹೆಸರು ಹೇಳು ತಡವಡಿಸಿದ್ದಾರೆ.
ನಂತರ ಸಂಶಯ ಬಂದು ಕುಲಂಕುಷವಾಗಿವಿಚಾರಿಸಿದಾಗ ನಮ್ಮ ಸಂಬಂಧಿ ಸಲೀಂ ಬೇಪಾರಿ(26) ಇವನೊಂದಿಗೆ ಸೇರಿ ಒಟ್ಟು ಮೂರು ಜನರುಹುಬ್ಬಳ್ಳಿಯಿಂದ ಹಾವೇರಿಗೆ ಬಂದು ರಾತ್ರಿ ನಗರದಲ್ಲಿ ಸಂಚರಿಸಿ ಕೀಲಿ ಹಾಕಿದ್ದ ಮನೆಗಳನ್ನು ಯಾರು ಇಲ್ಲದಸಮಯದಲ್ಲಿ ಕಬ್ಬಿಣದ ರಾಡಿನಿಂದ ಮುರಿದು ಕಳ್ಳತನಮಾಡುತ್ತಿದ್ದೇವು ಎಂದು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಕಳ್ಳತನ ಮಾಡಿದ್ದ 15.80 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಮೂರು ಜನರು ಹಂಚಿಕೊಂಡುಕೆಲವು ಮಾರಾಟ ಮಾಡಿ ಬಂದ ಹಣದಲ್ಲಿ ಮಜಾಮಾಡಿ ಉಳಿದ ಬಂಗಾರದ ಆಭರಣಗಳಲ್ಲಿ ಕೆಲವನ್ನುಅಡವು ಇಟ್ಟಿದ್ದಾರೆ. ಇನ್ನು ಕೆಲವು ನಮ್ಮ ಬಳಿಯೇಇವೆ ಎಂದು ಒಪ್ಪಿಕೊಂಡಿದ್ದು, ಆಗ ಅವರ ಜಪ್ತಿಕಾಲಕ್ಕೆ ಹಾಗೂ ಫೈನಾನ್ಸ್‌ನಲ್ಲಿ 50.5 ಗ್ರಾಂ ಬಂಗಾರದ ಆಭರಣಗಳು ಹಾಗೂ 153.2 ಗ್ರಾಂ ಉಮಾಗೋಲ್ಡ್ ಆಭರಣಗಳು ಪತ್ತೆಯಾಗಿವೆ. ಒಟ್ಟು 4.84ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಆರೋಪಿತರಿಂದವಶ ಪಡಿಸಿಕೊಳ್ಳಲಾಗಿದೆ. ಇನ್ನೊಬ್ಬ ಆರೋಪಿಯನ್ನುಗೋವಾ ರಾಜ್ಯದ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಕರಣವನ್ನು ಪತ್ತೆ ಹಚ್ಚುವತಂಡದಲ್ಲಿದ್ದ ಶಹರ ಠಾಣೆಯ ಇನ್‌ಪೆಕ್ಟರ್ ಪ್ರಹ್ಲಾದ್‌ಚನ್ನಗಿರಿ, ಪಿಎಸ್‌ಐ ಎಸ್.ಪಿ.ಹೊಸಮನಿ, ಆರ್.ವಿ.ಸೊಪ್ಪಿನ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಕಾರ್ಯ ಸಾಧನೆಗೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.