ಬೆಂಗಳೂರು: ಸಾರ್ವಜನಿಕರ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಇಬ್ಬರು ಆರೋ. ಪಿಗಳನ್ನು ಪುಲಿಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜೆ.ಸಿ.ನಗರದ ಮೊಹಮ್ಮದ್ ಜಬಿ (22) ಮತ್ತು ಭಾರತಿನಗರದ ರೆಯಾನ್(20) ಬಂಧಿತರು.
ಆರೋಪಿಗಳಿಂದ 60 ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಆರೋಪಿಗಳು ಮೇ 22ರಂದು ಬೆಳಗ್ಗೆ ಸುಮಾರು 8.45ಕ್ಕೆ ಬಾಗಲೂರು ಲೇಔಟ್ ನಿವಾಸಿ ಧರ್ಮಲಿಂಗಂ ಎಂಬುವರು ದ್ವಿಚಕ್ರ ವಾಹನದಲ್ಲಿ ಪುಲಿಕೇಶಿ ನಗರದ ಹೇನ್ಸ್ ರಸ್ತೆಯ ಹರಿದ್ರ ಗಣಪತಿ ದೇವಸ್ಥಾನ ಬಳಿ ಬರುವಾಗ, ದ್ವಿಚಕ್ರ ವಾಹನದಲ್ಲಿ ಬಂದು ಧರ್ಮಲಿಂಗಂ ಅವರ ದ್ವಿಚಕ್ರ ವಾಹನ ಅಡ್ಡಗಟ್ಟಿ ಕೀ ಕಿತ್ತುಕೊಂಡಿದ್ದಾರೆ. ಬಳಿಕ ಧರ್ಮಲಿಂಗಂ ಮೊಬೈಲ್ ಮತ್ತು ಪರ್ಸ್ ಕಿತ್ತುಕೊಂಡು ಪರಿಶೀಲಿಸಿದ್ದಾರೆ. ಬಳಿಕ ಮೊಬೈಲ್ ವಾಪಸ್ ಕೊಟ್ಟು ಪರ್ಸ್‌ನೊಂದಿಗೆ ಪರಾರಿ ಯಾಗಿದ್ದರು. ಆರೋಪಿ ಜಬಿ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್, ಎಚ್‌ಎಸ್‌ಆರ್ ಲೇಔಟ್, ಹೆಬ್ಟಾಳ, ಕೆ.ಆರ್.ಪುರ, ಸದಾಶಿವ ನಗರ ಠಾಣೆಗಳಲ್ಲಿ ರಾಬರಿ, ಕಳವು ಕೇಸ್ ದಾಖಲಾಗಿವೆ. ಉಪ್ಪಾರ ಪೇಟೆ ಠಾಣೆಯಲ್ಲಿ ಕೊಲೆ, ಅವಲಹಳ್ಳಿ ಠಾಣೆಯಲ್ಲಿ ಕಳವು, ರಾಬರಿ ಪ್ರಕರಣಗಳಲ್ಲಿ ಭಾಗಿ ಯಾಗಿ ¨ªಾನೆ. ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿ ಜಾಮೀನಿನ ಮೇಲೆ ಹೊರಬಂದು ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾನೆ. ಮತ್ತೂಬ್ಬ ಆರೋಪಿ ರೆಯಾನ್ ವಿರುದ್ಧ ಪುಲಿಕೇಶಿನಗರ ಠಾಣೆಯಲ್ಲಿ ಕೇಸ್‌ದಾಖ ಲಾಗಿದೆ ಎಂದು ಪೊಲೀಸರು ಹೇಳಿದರು.