Advertisement

ಕಳವು ಮಾಲು ಮಾರುತ್ತಿದ್ದವರ ಬಂಧನ

02:44 PM Oct 17, 2021 | Team Udayavani |

ನೆಲಮಂಗಲ: ಕಳವು ಮಾಡಿದ್ದ ಆಟೋಗಳನ್ನು ಮಾರಾಟ ಮಾಡಲು ಬಂದಿದ್ದ ಖದೀಮರ ಖಚಿತ ಮಾಹಿತಿಯ ಜಾಡು ಹಿಡಿದ ಮಾದನಾಯಕನಹಳ್ಳಿ ಪೊಲೀಸ್‌ಠಾಣೆ ಇನ್ಸ್‌ಪೆಕ್ಟರ್‌ ಬಿ.ಎಸ್‌. ಮಂಜುನಾಥ್‌ ಅವರ ತಂಡ ಖದೀಮರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಚಿಕ್ಕಮಗಳೂರು ಜಿಲ್ಲೆಯ ಸಿಂಗಟಗೆರೆ ಗ್ರಾಮದ ಖಲಂದರ್‌(28), ಗುಜರಿವ್ಯಾಪಾರ ಮಾಡಿ ಕೊಂಡಿದ್ದು ಬೆಂಗಳೂರಿನ ತಿಗಳರಪಾಳ್ಯದ ನಿವಾಸಿ ಯಾಗಿದ್ದ, ತಿಪಟೂರು ತಾಲೂಕಿನ ಸಿಂಗೇನಹಳ್ಳಿ ಗ್ರಾಮದ ಮಹಮದ್‌ ಕಲೀಂ (34) ತಿಗಳರಪಾಳ್ಯದ ನಿವಾಸಿಯಾಗಿದ್ದಾನೆ. ಸೀಲಂ ಪೌಲೇಶ್‌ (24) ಮೂಲತಃ ತೆಲಂಗಾಣದ ಗಾರೇಪಲ್ಲಿ ಗ್ರಾಮದವ ನಾಗಿದ್ದು ಬೆಂಗಳೂರಿನ ಯಶವಂತಪುರದ ಬಳಿ ಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದಾನೆ.

ಮೂರು ಮಂದಿ ಸೇರಿಕೊಂಡು ಮಂಡ್ಯ ಹಾಗೂ ನಾಗಮಂಗಲದಲ್ಲಿ ಸರಕು ಸಾಗಣೆ ಮಾಡುವ ಎರಡು ಅಪೇ ಆಟೋಗಳನ್ನು ಕಳ್ಳತನ ಮಾಡಿ ಅವುಗಳನ್ನು ಮಾದನಾಯಕನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮಾರಾಟ ಮಾಡಲು ಮುಂದಾಗಿದ್ದರು, ಕಳವು ಮಾಲುಗಳನ್ನು ಮಾರಾಟ ಮಾಡಲು ಬಂದ ಖದೀಮರನ್ನು ಇನ್ಸ್‌ಪೆಕ್ಟರ್‌ ಬಿಎಸ್‌.ಮಂಜುನಾಥ್‌ ಅವರು ತಂಡ ಬಂಧಿಸಿ ನ್ಯಾಯಾಂಗ ಬಂಧಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ;- ವಿಜಯ ದಶಮಿ ಸಂಭ್ರಮ: ರಾವಣನ ಪ್ರತಿಕೃತಿ ದಹನ

ಮೊದಲ ಆರೋಪಿ ಖಲಂದರ್‌ ಈ ಹಿಂದೆ ವಿವಿಧೆಡೆಗಳಲ್ಲಿ ದೇವಸ್ಥಾನ ಮತ್ತು ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಅಪರಾಧ ಚಟುವಟಿಕೆ ಹಿನ್ನಲೆಯುಳ್ಳವನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಭಿನಂದನೆ: ಮಾದನಾಯನಕಹಳ್ಳಿ ಇನ್ಸ್‌ಪೆಕ್ಟರ್‌ ಬಿಎಸ್‌.ಮಂಜುನಾಥ್‌ ಮತ್ತು ತಂಡವನ್ನು ಡಿವೈಎಸ್‌ಪಿ ಜಗದೀಶ್‌ ಅವರು ಅಭಿನಂದಿಸಿ ಸಿಬ್ಬಂಧಿ ಕಾರ್ಯವೈಖರಿಯನ್ನು ಶ್ಲಾ ಸಿದ್ದಾರೆ. ಸಬ್‌ಇನ್ಸ್‌ಪೆಕ್ಟರ್‌ ಮುರಳಿ, ಸಹಾಯಸಬ್‌ ಇನ್ಸ್‌ ಪೆಕ್ಟರ್‌ ಕಾಳಯ್ಯ, ಸಿಬ್ಬಂದಿ ಮಳಗುಂಡಿ, ನಾರಾಯಣಸ್ವಾಮಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next