Advertisement
ಬೆಂಗಳೂರು ಮೂಲದ ವೆಂಕಟೇಶ್ ಆಲಿಯಾಸ್ ವೆಂಕಿ (21), ಸಾಗರ್(21) ಮತ್ತು ರಂಜಿತ್ (20) ಬಂಧಿತರು. ಇವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಗಂಗೌಡನಹಳ್ಳಿಯಲ್ಲಿ ಬಂಧಿಸಲಾಗಿದೆ.
ಆರೋಪಿಗಳು ಬೆಂಗಳೂರು, ಮಂಗಳೂರು ಸಹಿತ ರಾಜ್ಯದ ಹಲ ವೆಡೆ ಮನೆ ಕಳ್ಳತನ ನಡೆಸಿರುವುದು ತನಿಖೆ ವೇಳೆ ಗೊತ್ತಾಗಿದೆ. ಕದ್ರಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಭಾಗಿ ಯಾಗಿರುವುದನ್ನೂ ಒಪ್ಪಿಕೊಂಡಿದ್ದಾರೆ. ವೆಂಕಿಯ ಮೇಲೆ 18 ಹಾಗೂ ಸಾಗರ್ ಮೇಲೆ 6 ಕಳವು ಪ್ರಕರಣಗಳು ದಾಖಲಾಗಿವೆ.
Related Articles
ಮನೆ ಮಂದಿ ಬೆಳಗ್ಗೆ 9 ಗಂಟೆ ಸುಮಾರಿಗೆ ಕೆಲಸಕ್ಕೆ ಹೋಗಿ ಸಂಜೆ 5.45ಕ್ಕೆ ವಾಪಸು ಬಂದಾಗ ಕಳವು ನಡೆದಿರುವುದು ಗೊತ್ತಾಗಿತ್ತು. ಕಪಾಟಿನ ಲಾಕರ್ ಮುರಿದು 8 ಚಿನ್ನದ ಉಂಗುರಗಳು, ಬಳೆಗಳು, ಸರ ಗಳು, ಬೆಳ್ಳಿಯ ಆಭರಣಗಳು ಹಾಗೂ 6,000 ರೂ. ನಗದನ್ನು ಕಳ್ಳರು ಒಯ್ದಿದ್ದರು.
Advertisement
ಚಡ್ಡಿಗ್ಯಾಂಗ್‌ನಿಂದಲೂ ಕೃತ್ಯ!ಕೋಡಿಕಲ್‌ನ ವಿವೇಕಾನಂದ ನಗರದ ಒಂದು ಭಾಗದಲ್ಲಿ ಜು. 6ರಂದು ಹಗಲಿನಲ್ಲೇ ವೆಂಕಿ, ಸಾಗರ್ ಮತ್ತು ರಂಜಿತ್ ಕಳವು ನಡೆಸಿದ್ದರೆ, ಜು.7ರ ನಸುಕಿನ ವೇಳೆ ಇನ್ನೊಂದು ಭಾಗದ ಮನೆಗೆ ನುಗ್ಗಿದ್ದ “ಚಡ್ಡಿಗ್ಯಾಂಗ್’ ನವರು ಹಣ ಕದ್ದಿದ್ದರು. ಬಳಿಕ ಇದೇ ಗ್ಯಾಂಗ್‌ನವರು ಜು.9ರಂದು ನಸುಕಿನ ವೇಳೆ ಕೋಟೆಕಣಿಯಲ್ಲಿ ದಂಪತಿಯ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಬಳಿಕ ಉರ್ವ ಪೊಲೀಸರ ಬಲೆಗೆ ಬಿದ್ದಿದ್ದರು. ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಆದೇಶದಂತೆ, ಡಿಸಿಪಿಗಳಾದ ಸಿದ್ದಾರ್ಥ ಗೋಯಲ್ ಮತ್ತು ದಿನೇಶ್ ಕುಮಾರ್ ನಿರ್ದೇಶನದಂತೆ, ಸಹಾಯಕ ಪೊಲೀಸ್ ಆಯುಕ್ತ ಪ್ರತಾಪ್ ಸಿಂಗ್ ತೋರಟ್ ಮಾರ್ಗದರ್ಶನದಂತೆ, ಉರ್ವ ಠಾಣೆ ನಿರೀಕ್ಷಕಿ ಭಾರತಿ ನೇತೃತ್ವದಲ್ಲಿ ಪಿಎಸ್‌ಐಗಳಾದ ಹರೀಶ್ ಎಚ್.ವಿ,, ಅನಿತಾ ಎಚ್.ಬಿ,, ಎಎಸ್‌ಐ ವಿನಯ್ ಕುಮಾರ್, ಸಿಬಂದಿ ವರ್ಗದ ಪುಷ್ಟರಾಜ್, ರಾಮಚಂದ್ರ, ಸತೀಶ್ ಎಚ್.ಕೆ., ಪ್ರಮೋದ್ ಕೆ., ವೆಂಕಟೇಶ್, ಅಭಿಷೇಕ್, ಭಾಸ್ಕರ್, ಯಲ್ಲಾಲಿಂಗ, ಮಮತಾ, ಚಂದ್ರಹಾಸ್, ಶರತ್ ಹಾಗೂ ಮಂಗಳೂರು ನಗರ ಗಣಕಯಂತ್ರ ವಿಭಾಗದ ಸಿಬಂದಿ ಮನೋಜ್ ಅವರು ಆರೋಪಿಗಳ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.