Advertisement

Customer’s ಮೊಬೈಲ್‌ ನಂಬರ್‌ ಪಡೆದು ವಂಚಿಸುತ್ತಿದ್ದ ಲಾಡ್ಜ್ ಸಿಬ್ಬಂದಿ ಬಂಧನ

03:58 PM Jan 13, 2024 | Team Udayavani |

ಬೆಂಗಳೂರು: ಯುವತಿಯ ಸೋಗಿನಲ್ಲಿ ವಾಟ್ಸ್‌ಆ್ಯಪ್‌ ಮೂಲಕ ಲೈಂಗಿಕ ವಂಚನೆ ಕೃತ್ಯವೆಸಗುತ್ತಿದ್ದ ಆರೋಪಿಯನ್ನು ಬೆಂಗಳೂರು ಉತ್ತರ ವಿಭಾಗದ ಸಿಇಎನ್‌ ಕ್ರೈಂ ಠಾಣಾ ಪೊಲೀಸರು ಬಂಧಿಸಿದ್ದಾರೆ.

Advertisement

ಬೊಮ್ಮನಹಳ್ಳಿಯ ಹರಿ ಅಲಿಯಾಸ್‌ ನರಹರಿ (27)ಬಂಧಿತ ಆರೋಪಿ.

ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್‌ ವಶಕ್ಕೆ ಪಡೆದು ಕೊಳ್ಳಲಾಗಿದೆ. ಬೊಮ್ಮನಹಳ್ಳಿಯ ಎನ್‌. ಆರ್‌.ಲಾಡ್ಜ್ನಲ್ಲಿ ಕೆಲಸ ಮಾಡುತ್ತಿದ್ದ. ಲಾಡ್ಜ್ಗೆ ಬರುವ ಗ್ರಾಹಕರ ನಂಬರ್‌ ಪಡೆಯುತ್ತಿದ್ದ. ಬಳಿಕ ಹುಡುಗಿಯರ ಸೋಗಿನಲ್ಲಿ ಗ್ರಾಹಕರಿಗೆ ಮೆಸೇಜ್‌ ಮಾಡಿ ಮೋಹದ ಬಲೆಗೆ ಬೀಳಿಸುತ್ತಿದ್ದ.

ಅತ್ತ ಯುವತಿಯೇ ಸಂದೇಶ ಕಳುಹಿಸಿರಬಹುದು ಎಂದು ಭಾವಿಸುತ್ತಿದ್ದ ಲಾಡ್ಜ್ನ ಕೆಲ ಗ್ರಾಹಕರು ತಮ್ಮ ಖಾಸಗಿ ಫೋಟೋಗಳನ್ನು ವಾಟ್ಸ್‌ಆ್ಯಪ್‌ನಲ್ಲೇ ಹಂಚಿಕೊಂಡಿದ್ದರು. ಇದಾದ ಬಳಿಕ ವರಸೆ ಬದಲಿಸುತ್ತಿದ್ದ ಆರೋಪಿಯು ಅದೇ ಪೋಟೋಗಳನ್ನಿಟ್ಟುಕೊಂಡು ಹಣಕ್ಕೆ ಬೇಡಿಕೆಯಿಟ್ಟು ಬ್ಲಾಕ್‌ಮೇಲ್‌ ಮಾಡುತ್ತಿದ್ದ. ಹಣ ಕೊಡದಿದ್ದರೆ ನಿಮ್ಮ ವೈಯಕ್ತಿಕ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವು ದಾಗಿ ಬೆದರಿಸುತ್ತಿದ್ದ. ವಂಚನೆಗೊಳ ಗಾದವರು ಮಾನಕ್ಕೆ ಅಂಜಿ ಠಾಣೆ ಮೆಟ್ಟಿಲೇರಲು ಹಿಂಜರಿಯುತ್ತಿದ್ದರು ಎಂದು ತಿಳಿದು ಬಂದಿದೆ.

ವಂಚನೆಗೊಳಗಾದವನಿಂದ ದೂರು:

Advertisement

ಇದೇ ರೀತಿ ಲಾಡ್ಜ್ಗೆ ಬಂದಿದ್ದ ವ್ಯಕ್ತಿಯೊ ಬ್ಬರನ್ನು ಅನಿತಾ ಎಂಬ ಹೆಸರಿನಲ್ಲಿ ಆರೋಪಿ ಸಂಪರ್ಕಿಸಿದ್ದ. ಕಳೆದ ಒಂದು ತಿಂಗಳಿನಿಂದ ಅವರಿಗೆ ಅನೈತಿಕ ಸಂಬಂಧದ ಸಂದೇಶವನ್ನು ಕಳುಹಿಸಿದ್ದ. ನಂತರ ಅನೈತಿಕ ಸಂಬಂಧದ ಕುರಿತು ಮಾಡಿದ ಸಂದೇಶಗಳನ್ನು ವೈರಲ್‌ ಮಾಡುವುದಾಗಿ ಬೆದರಿಸಿದ್ದ. ಆತಂಕಗೊಂಡ ವ್ಯಕ್ತಿ ಹಂತ-ಹಂತವಾಗಿ ಒಟ್ಟು 1.10 ಲಕ್ಷ ರೂ. ಅನ್ನು ಆನ್‌ಲೈನ್‌ ನಲ್ಲಿ ಆತನಿಗೆ ನೀಡಿದ್ದರು. ಇಷ್ಟಕ್ಕೆ ಸುಮ್ಮನಾಗದ ಆರೋಪಿಯು ಮತ್ತೆ ದುಡ್ಡಿಗೆ ಬೇಡಿಕೆಯಿಟ್ಟಾಗ ವಂಚನೆಗೊಳಗಾದ ವ್ಯಕ್ತಿ ಈ ಬಗ್ಗೆ ಉತ್ತರ ವಿಭಾಗದ ಸಿಇಎನ್‌ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದರು.

ಆರೋಪಿಯು ಸಿಕ್ಕಿಬಿದ್ದಿದ್ದು ಹೇಗೆ?:

ಸಿಇಎನ್‌ ಠಾಣೆ ಪೊಲೀಸರು ತಾಂತ್ರಿಕ ಕಾರ್ಯಾಚರಣೆ ನಡೆಸಿದಾಗ ಆರೋಪಿ ನರಹರಿಯು ಅನಿತಾ ಎಂಬ ಯುವ ತಿಯ ಹೆಸರಿನಲ್ಲಿ ನಕಲಿ ವ್ಯಾಟ್ಸ್‌ಆ್ಯಪ್‌ ಖಾತೆ ಸೃಷ್ಟಿಸಿ ಆ ಖಾತೆಗೆ ಹುಡುಗಿಯ ಭಾವಚಿತ್ರವನ್ನು ಅಪ್‌ಲೋಡ್‌ ಮಾಡಿ ದೂರುದಾರರ ಜತೆ ಚಾಟ್‌ ಮಾಡಿ ರುವುದು ಗೊತ್ತಾಗಿದೆ. ಬಳಿಕ ದೂರು ದಾರರ ಫೋಟೋಗಳನ್ನು ಸಂಗ್ರಹಿಸಿ ಆ ಫೋಟೋವನ್ನು ಅಶ್ಲೀಲ ಚಿತ್ರದ ಜೊತೆಗೆ ಮಾಫ್ì ಮಾಡಿ ದುಡ್ಡಿಗೆ ಬೇಡಿಕೆಯಿಟ್ಟಿದ್ದ. ದೂರುದಾರರಿಂದ ಲಪಟಾಯಿಸಿದ ಹಣವನ್ನು ಸ್ನೇಹಿತರ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು, ಎಟಿಎಂ ಮೂಲಕ ಡ್ರಾ ಮಾಡಿಕೊಂಡಿದ್ದ. ಈ ರೀತಿಯಾಗಿ ಸಂಪಾದಿಸಿದ ಲಕ್ಷಾಂತರ ರೂ. ಬಳಸಿ ವಿಲಾಸಿ ಜೀವನ ನಡೆಸುತ್ತಿದ್ದ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಆರೋಪಿ ನರಹರಿಯು ವಿವಿಧ ಬ್ಯಾಂಕ್‌ ಖಾತೆಗಳಲ್ಲಿ ನಡೆಸಿದ ಹಣಕಾಸಿನ ವಹಿವಾಟಿನ ಜಾಡು ಹಿಡಿದು ಹೊರಟ ಖಾಕಿಗೆ ಆತ ಲಾಡ್ಜ್ವೊಂದರಲ್ಲಿ ಕೆಲಸ ಮಾಡುತ್ತಿರುವ ಸಂಗತಿ ಗೊತ್ತಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next