Advertisement
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ದೇವಲಾಪುರ ಹೋಬಳಿ ನಾಗನಹಳ್ಳಿಯ ಪ್ರದೀಪ ಅಲಿಯಾಸ್ ಕೆಂಚ, ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಅಮೃತೂರು ಹೋಬಳಿ ಹೊಸಕೆರೆ ವಾಸಿ ಜಗದೀಶ ಬಂಧಿತ ಆರೋಪಿಗಳು. ಇವರಿಂದ ಸುಲಿಗೆ ಮಾಡಿದ್ದ 4 ಲಕ್ಷ ಮೌಲ್ಯದ ಟಾಟಾ ಇಂಡಿಕಾ ಕಾರು, 6 ಮೊಬೈಲ್ ಮತ್ತು ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. 2020ರ ಜೂ.16ರಂದು ತಿಪ್ಪಗೊಂಡ ನಹಳ್ಳಿ ಚಿತ್ರಕೂಟ ಕಾಲೇಜು ಬಳಿ ಅರ್ಕಾವತಿ ಹೊಳೆ ಬಳಿ ಡ್ರೈವ್ ಜಿ ಬೈಕ್‌ನಲ್ಲಿ ಬಂದ ಆರೋಪಿಗಳು, ಪೊಲೀಸರೆಂದು ಹೇಳಿ ಅವಿನಾಶ್ ಬಳಿ ಹಣ, ಮೊಬೈಲ್ ಕಸಿದುಕೊಂಡಿದ್ದಾರೆ. ಆನಂತರ ಅವಿನಾಶ್ ಜತೆಗಿದ್ದ ಹುಡುಗಿಯನ್ನು ಟಾಟಾ ಇಂಡಿಕಾ ಕಾರಿನಲ್ಲಿ ಕೂರಿಸಿಕೊಂಡು ಹೋಗಿ ಆಕೆ ಬಳಿಯಿದ್ದ ಚಿನ್ನದ ಸರ ಕಿತ್ತು ಕೊಂಡು ರಾಮನಗರ ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದರು. ಈ ಬಗ್ಗೆ ತಾವರೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Related Articles
Advertisement
ಬೆಂಗಳೂರು ಸುಂಕದಕಟ್ಟೆ ಈರಣ್ಣನಪಾಳ್ಯದ ನಿವಾಸಿ ವಿಜಯ್, ಕೆಬ್ಬೇಹಳ್ಳದ ನಿವಾಸಿ ಧನುಷ್, ಭರತ್, ಜಾಲಹಳ್ಳಿ ಕ್ರಾಸ್ ಎನ್‌ಟಿಟಿಎಫ್ ನಿವಾಸಿ ರೋಹಿತ್ ಅಲಿಯಾಸ್ ಸ್ಟೀಫನ್, ನಾಗರಬಾವಿಯ ಎಂಪಿಎಂ ಲೇಔಟ್ ನಿವಾಸಿ ಸುರೇಶ, ಕೆಂಗುಂಟೆ ವಾಸಿ ಅನಿಲ್ ಹಾಗೂ ಶಿವಮೊಗ್ಗ ಜಿಲ್ಲೆ ಭದ್ರಾವತಿ ಸಂತೆಮೈದಾನ ನಿವಾಸಿ ರಾಬರ್ಟ್ ಬಂಧಿತ ಆರೋಪಿಗಳು. ಪೊಲೀಸರು ಇವರಿಂದ ಬಳಸಿದ ಕಾರು, 16 ಗ್ರಾಂ ತೂಕದ ಚಿನ್ನದ ಸರ, 2 ಮೊಬೈಲ್, ಕೃತ್ಯಕ್ಕೆ ಬಳಸಿದ್ದ ಬೈಕ್‌ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
2020ರ ಆ.18ರಂದು ವೆಂಕಟ್ ಮತ್ತು ಸ್ನೇಹಿತರಾದ ನರೇಶ್, ಜೀವನ್, ನರೇಶ್, ನರೇಶ್ ಮಾಗಡಿ ರಸ್ತೆ ಜೋಗೇಹಳ್ಳಿ ಬಳಿ ಕಾರು ನಿಲ್ಲಿಸಿಕೊಂಡಿದ್ದರು. ಈ ವೇಳೆ ಮೂರು ಬೈಕುಗಳಲ್ಲಿ ಬಂದ 5-6 ಜನ ಇವರ ಮೇಲೆ ಕಾರದ ಪುಡಿ ಎರಚಿ ಮೊಬೈಲ್, ಚಿನ್ನದ ಸರ ಹಾಗೂ ಕಾರನ್ನು ತೆಗೆದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ವೆಂಕಟ್ ದೂರು ದಾಖಲಿಸಿದ್ದರು. ಮಾಗಡಿ ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ತಾವರೆಕೆರೆ ಠಾಣೆ ಸಬ್ ಇನ್ಸ್ ಪೆಕ್ಟರ್ ನರೇಂದ್ರ ಬಾಬು, ಸಿಬ್ಬಂದಿಗಳ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.