Advertisement

Arrested: ಮನೆ ಕಳವು ಮಾಡುತ್ತಿದ್ದ ಆಟೋ ಚಾಲಕನ ಬಂಧನ

11:07 AM Feb 28, 2024 | Team Udayavani |

ಬೆಂಗಳೂರು:  ಮನೆ ಕಳವು ಮಾಡುವುದನ್ನೇ ಪ್ರವೃತ್ತಿಯನ್ನಾಗಿಸಿಕೊಂಡಿದ್ದ ಆಟೋ ಚಾಲಕನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಗುರಪ್ಪನಪಾಳ್ಯ ನಿವಾಸಿ ಆಟೋ ಚಾಲಕ ಮುನಿಯಪ್ಪ(4ತ್ರ) ಬಂಧಿತ. ಆರೋಪಿಯಿಂದ 7.78 ಲಕ್ಷ ರೂ. ಮೌಲ್ಯದ 132 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು. ಆರೋಪಿ ಇತ್ತೀಚೆಗೆ ಠಾಣೆ ವ್ಯಾಪ್ತಿ ಯಲ್ಲಿ ಮನೆಯ ಬಾಗಿಲು ಮುರಿದು, ಮನೆಯ ಲ್ಲಿಟ್ಟಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿªದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಈತನ ಬಂಧನದಿಂದ ವಿವಿಧ ಠಾಣೆಯಲ್ಲಿ ದಾಖಲಾಗಿದ್ದ  ಪ್ರಕರಣಗಳು ಪತ್ತೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next