Advertisement

Bantwal; ತಲೆಮರೆಸಿಕೊಂಡಿದ್ದ ಯುಪಿ ಮೂಲದ 18 ಮಂದಿಯ ಸೆರೆ

09:24 PM Feb 06, 2024 | Team Udayavani |

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಪ್ರಕರಣವೊಂದಕ್ಕೆ ಸಂಬಂಧಿಸಿ ಕಳೆದ 5 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಉತ್ತರಪ್ರದೇಶ ಮೂಲದ 18 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಉತ್ತರಪ್ರದೇಶದ ಬಲಿಯಾ ಜಿಲ್ಲೆ ಹಾಗೂ ಘಾಜೀಯಾಪುರ ಮೂಲದ ಪೀಯುಶ್‌ ಕುಮಾರ್‌, ವಿನಯ್‌ ಕುಮಾರ್‌, ಬ್ರಿಜಿ ನಾರಾಯಣ, ರವೀಂದ್ರ, ಕೃಪಶಂಕರ್‌, ವಿವೇಕ್‌ ರಾಮ್‌, ಬದ್ಧ ರಾಮ್‌, ನಂದಿನಿ ರಾಮ್‌, ಕಿಶೋರ್‌ಕುಮಾರ್‌, ಶಾಮ್‌ ಬಿಹಾರಿ ರಾಮ್‌, ಪ್ರೇಮಾಚಂದ ರಾಮ್‌, ಸತೇಂದ್ರ, ಭಗವಾನ್‌ ರಾಮ್‌, ಉಮೇಶ್‌ ರಾಮ್‌, ರಾಸ್‌ ಬಿಹಾರಿ ರಾಮ್‌, ಭಗೀರಥಿ ಚೌಧರಿ, ಸುನೀಲ್‌ ರಾಮ್‌ ಹಾಗೂ ನಂದಿಹಳ ರಾಮ್‌ ಬಂಧಿತರು.

ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್‌ ಇನ್‌ಸ್ಪೆಕ್ಟರ್‌ ಶಿವಕುಮಾರ ಬಿ. ಹಾಗೂ ಪಿಎಸ್‌ಐ ಹರೀಶ್‌ ಎಂ.ಆರ್‌. ಮಾರ್ಗದರ್ಶನದಲ್ಲಿ ಪಿಎಸ್‌ಐ ಮೂರ್ತಿ, ಹೆಡ್‌ ಕಾನ್ಸ್‌ಟೆಬಲ್‌ ಗಣೇಶ್‌ ಪ್ರಸಾದ್‌, ಕಾನ್ಸ್‌ಟೆಬಲ್‌ ಯೋಗೇಶ್‌, ಡಿಎಲ್‌ ವಿಜಯ್‌ ಕುಮಾರ್‌, ಸುರೇಶ್‌ ಉಪ್ಪಾರ ಅವರ ತಂಡ ಉತ್ತರಪ್ರದೇಶದಲ್ಲಿ ವಶಕ್ಕೆ ಪಡೆದಿದೆ.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ದಂಡ ವಿಧಿಸಿ ಪ್ರಕರಣ ಮುಕ್ತಾಯ ಗೊಳಿಸಿದೆ. ಆರೋಪಿಗಳು ಅಕ್ರಮ ಮರಳುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ಬಿಡುಗಡೆಗೊಂಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next