ನವದೆಹಲಿ:ನಾರದ ಲಂಚ ಸ್ವೀಕಾರ ಪ್ರಕರಣದಲ್ಲಿ ಟಿಎಂಸಿಯ ಸಚಿವರಾದ ಫಿರ್ಹಾದ್ ಹಕೀಮ್ ಮತ್ತು ಸುಬ್ರತೋ ಮುಖರ್ಜಿಯನ್ನು ಬಂಧಿಸಿದ ಘಟನೆಯ ನಂತರ ಸೋಮವಾರ(ಮೇ 17) ಕೋಲ್ಕತಾ ಸಿಬಿಐ ಕಚೇರಿಗೆ ಹಾಜರಾದ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿ ನೀಡಿ, ತನ್ನನ್ನು ಬಂಧಿಸಿ ಎಂದು ಹೇಳುವ ಮೂಲಕ ಹೈಡ್ರಾಮಾ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆಗೆ 49 ಶಿಕ್ಷಕರು ಬಲಿ
ನಿಜಾಮ್ ಪ್ಯಾಲೇಸ್ ನಲ್ಲಿರುವ ಸಿಬಿಐ ಕಚೇರಿಗೆ ಆಗಮಿಸಿದ ಮಮತಾ ಸುಮಾರು 45 ನಿಮಿಷಗಳ ಕಾಲ ಚರ್ಚೆ ನಡೆಸಿದ ವೇಳೆ ಅಸಮಾಧಾನಗೊಂಡು ತನ್ನನ್ನು ಬಂಧಿಸಲು ಹೇಳಿರುವುದಾಗಿ ವರದಿ ವಿವರಿಸಿದೆ.
ತೃಣಮೂಲ ಕಾಂಗ್ರೆಸ್ ಸಚಿವರನ್ನು ಬಂಧಿಸಿದ ನಂತರ ಸಿಬಿಐ ಕಚೇರಿಯ ಹೊರಭಾಗದಲ್ಲಿ ಪಕ್ಷದ ಬೆಂಬಲಿಗರು ಗುಂಪುಗೂಡಿದ್ದರು. ಅಲ್ಲದೇ ಸಿಬಿಐ ಕಚೇರಿ ಮೇಲೆ ಕಲ್ಲುತೂರಾಟ ನಡೆಸಿದ ಘಟನೆ ಕೂಡಾ ನಡೆಯಿತು. ನಂತರ ರಾಜ್ಯಪಾಲ ಜಗದೀಪ್ ಧಾನ್ಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಇದು ಕಾನೂನು ಬಾಹಿರ ಅರಾಜಕತೆ ಎಂದು ಆರೋಪಿಸಿ ಮುಂದಿನ ಪರಿಣಾಮಗಳನ್ನು ಎದುರಿಸಬೇಕಾದಿತು ಎಚ್ಚರಿಕೆ ಎಂದು ಹೇಳಿರುವುದಾಗಿ ವರದಿ ತಿಳಿಸಿದೆ.
ನಾರದ ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸೋಮವಾರ(ಮೇ 17) ಪಶ್ಚಿಮಬಂಗಾಳ ಕ್ಯಾಬಿನೆಟ್ ಮಂತ್ರಿಗಳಾದ ಫಿರ್ಹಾದ್ ಹಕೀಮ್ , ಸುಬ್ರತಾ ಮುಖರ್ಜಿ ಹಾಗೂ ಟಿಎಂಸಿ ಶಾಸಕ ಮದನ್ ಮಿತ್ರ, ಪಶ್ಚಿಮಬಂಗಾಳದ ಮಾಜಿ ಸಚಿವ ಸೋವನ್ ಚಟರ್ಜಿಯನ್ನು ಬಂಧಿಸಿತ್ತು.
ನಾರದ ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸೋಮವಾರ ಬಂಧಿತರನ್ನು ಕೋರ್ಟ್ ಗೆ ಹಾಜರುಪಡಿಸುವ ಮೊದಲು ಆರೋಪಪಟ್ಟಿ ಸಲ್ಲಿಸಲಿದೆ ಎಂದು ತಿಳಿಸಿತ್ತು.