Advertisement

ಮಸೂದ್‌ನನ್ನು ಅರೆಸ್ಟ್‌ ಮಾಡಿ,ಇಲ್ಲ ನಾವೇ ಮಾಡ್ತೇವೆ:ಪಾಕಿಗೆ ಅಮರೀಂದರ್

11:41 AM Feb 19, 2019 | udayavani editorial |

ಹೊಸದಿಲ್ಲಿ : “40 ಭಾರತೀಯ ಯೋಧರನ್ನು ಬಲಿಪಡೆದಿರುವ ಪುಲ್ವಾಮಾ ಉಗ್ರ ದಾಳಿ ತನ್ನದೇ ಕೃತ್ಯ ಎಂದು ಹೇಳಿಕೊಂಡಿರುವ ಪಾಕ್‌ ಮೂಲದ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ಪಾಕಿಸ್ಥಾನದ ಬಹಾವಲಪುರದಲ್ಲಿ ಇದ್ದಾನೆ; ಆತನನ್ನು ಕೂಡಲೇ ಅರೆಸ್ಟ್‌ ಮಾಡಿ; ಇಲ್ಲವೇ ಭಾರತವೇ ಆತನನ್ನು ಸೆರೆ ಹಿಡಿಯುತ್ತದೆ” ಎಂದು ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ಗೆ ಎಚ್ಚರಿಕೆ ಕೊಟ್ಟಿದ್ದಾರೆ. ಅಂತೆಯೇ ಪಾಕ್‌ ವಿರುದ್ಧ ಅತ್ಯಂತ ಕಠಿನ ಕ್ರಮವನ್ನು ಆಗ್ರಹಿಸಿದ್ದಾರೆ. 

Advertisement

‘ಪುಲ್ವಾಮಾ ದಾಳಿಯಲ್ಲಿ ಪಾಕಿಸ್ಥಾನದ ಯಾವುದೇ ಕೈವಾಡವಿಲ್ಲ’ ಎಂದು 40 ಭಾರತೀಯ ಯೋಧರ ಸಾವಿಗೆ ಪಶ್ಚಾತ್ತಾಪ ಪಡದೇ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿಕೆ ನೀಡಿದ್ದ ತಾಸಿನೊಳಗೆ ಉಗ್ರ ಪ್ರತಿಕ್ರಿಯೆ ನೀಡಿರುವ ಸಿಎಂ ಅಮರೀಂದರ್‌ ಸಿಂಗ್‌,  “ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು’ ಎನ್ನುವ ರೀತಿಯಲ್ಲಿ ಪಾಕ್‌ ಜತೆಗೆ ಅತ್ಯಂತ ನಿಷ್ಠುರವಾಗಿ ವ್ಯವಹರಿಸಬೇಕಾಗಿದೆ” ಎಂದು ಹೇಳಿದರು. 

”ಪುಲ್ವಾಮಾ ಉಗ್ರ ದಾಳಿಗೆ ಪಾಕ್‌ ಮೂಲದ ಜೈಶ್‌ ಎ ಮೊಹಮ್ಮದ್‌ ಹೊಣೆ ಹೊತ್ತಿದೆ; ಈ ಕೃತ್ಯವನ್ನು ಅದು ಐಎಸ್‌ಐ ನೆರವಿನಲ್ಲಿ ಎಸಗಿದೆ. ಪಾಕಿಸ್ಥಾನದ ಬಹಾವಲಪುರದಲ್ಲೇ ಇರುವ ಆತನನ್ನು ನೀವು (ಪಾಕಿಸ್ಥಾನ) ಕೂಡಲೇ ಅರೆಸ್ಟ್‌ ಮಾಡಿ; ಇಲ್ಲದಿದ್ದರೆ ನಾವೇ ಆ ಕೆಲಸವನ್ನು ಮಾಡುತ್ತೇವೆ” ಎಂದು ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಟ್ಟಿಟರ್‌ನಲ್ಲಿ ಬರೆದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next