Advertisement
ಕೆತ್ತಿಕಲ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ರಸ್ತೆಯಲ್ಲಿ ಬಿರುಕು ಹಾಗೂ ಅದರ ಬದಿಯಲ್ಲಿ ಆಳವಾದ ತೂತು ಕಂಡುಬಂದಿದ್ದರಿಂದ ಈ ಭಾಗ ಕುಸಿಯುವ ಭೀತಿ ವ್ಯಕ್ತವಾಗಿತ್ತು. ಸುಮಾರು 20 ವರ್ಷಗಳ ಮುಂಚೆ ಈ ಭಾಗದಲ್ಲಿ ಕುಸಿತ ಕಂಡುಬಂದಿದ್ದು, ಸ್ವಲ್ಪ ದಿನಗಳ ಕಾಲ ಸಂಚಾರ ಸ್ಥಗಿತ ಗೊಂಡಿತ್ತು. ಇದೀಗ ಮತ್ತೆ ಕುಸಿ ಯುವ ಭೀತಿ ವ್ಯಕ್ತವಾಗಿದ್ದರಿಂದ ಈ ರಸ್ತೆಯಾಗಿ ಸಂಚರಿಸುವ ವಾಹನಗಳಿಗೆ ಅಪಾಯ ಒದಗುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಎಇಇ ಆಗಿರುವ ಯಶವಂತ್ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ನೀರು ಹರಿಯಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅಲ್ಲದೆ ಆಳವಾದ ತೂತನ್ನು ಮುಚ್ಚಲಾಗಿದೆ.
ಕೆತ್ತಿಕಲ್ ಪ್ರದೇಶದಲ್ಲಿ ನೀರು ಹರಿಯುವ ಮೋರಿ ಮುಚ್ಚಿಹೋಗಿದ್ದರಿಂದ ಈ ಸ್ಥಿತಿ ಉಂಟಾಗಿದೆ. ನೀರು ಹರಿ ಯಲು ತೋಡನ್ನು ಬಿಡಿಸಿ ಕೊಟ್ಟ ಕಾರಣ ಆತಂಕವಿಲ್ಲ. ವಾಹನಗಳು ಎಂದಿನಂತೆ ಸಾಗಬಹುದು. ಅಲ್ಲದೆ ಈ ಭಾಗದಲ್ಲಿ ಕುಸಿಯುವ ಆತಂಕವೂ ಇಲ್ಲ. ಆದ್ದರಿಂದ ಯಾರೂ ಆತಂಕಗೊಳ್ಳುವ ಅಗತ್ಯವಿಲ್ಲ.