Advertisement

400ರಷ್ಟು ಉಗ್ರರು ಒಳನುಸುಳಲು ಸಿದ್ಧ

08:56 PM Jan 06, 2021 | mahesh |

ಜಮ್ಮು: ಗಡಿ ನಿಯಂತ್ರಣ ರೇಖೆಯ ಬಳಿ ಸುಮಾರು 400 ಉಗ್ರರು ಲಾಂಚ್‌ ಪ್ಯಾಡ್‌ಗಳಲ್ಲಿ ಸನ್ನದ್ಧ ಸ್ಥಿತಿಯಲ್ಲಿದ್ದಾರೆ. ಭಾರೀ ಚಳಿಯ ದುರ್ಲಾಭ ಪಡೆದು ಭಾರತದೊಳಕ್ಕೆ ನುಸುಳಲು ಕಾದು ನಿಂತಿದ್ದಾರೆ ಎಂಬುದಾಗಿ ಭದ್ರತ ಮೂಲಗಳು ತಿಳಿಸಿವೆ.

Advertisement

ಜಮ್ಮು- ಕಾಶ್ಮೀರದ ಕಣಿವೆಗಳು ಮತ್ತು ಬೆಟ್ಟಗಳು ಹಿಮದಲ್ಲಿ ಆಚ್ಛಾದಿತವಾಗಿರುವಾಗ ಉಗ್ರರನ್ನು ಗಡಿಯಾಚೆಗೆ ಕಳುಹಿಸಲು ಪಾಕಿಸ್ಥಾನ ಪ್ರಯತ್ನಿಸುತ್ತಿದೆ ಎಂದು ಅಲ್ಲಿನ ಉನ್ನತ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಳೆದ ವರ್ಷ 44 ಉಗ್ರರು ಒಳನುಸುಳಿದ್ದರೆ 2019ರಲ್ಲಿ 141 ಉಗ್ರರು ಬಂದಿದ್ದರು. 2018ರಲ್ಲಿ ಈ ಸಂಖ್ಯೆ 143 ಆಗಿತ್ತು. ಬಿಗಿಯಾದ ಗಡಿ ಕಾವಲಿನಿಂದಾಗಿ ವರ್ಷದಿಂದ ವರ್ಷಕ್ಕೆ ಒಳನುಸುಳುವಿಕೆ ಕಡಿಮೆಯಾಗಿದ್ದು, ಇದರಿಂದ ಪಾಕ್‌ ಹತಾಶವಾಗಿದೆ ಎಂದು ಈ ಅಧಿಕಾರಿ ತಿಳಿಸಿದ್ದಾರೆ. ಈ ಹತಾಶೆಯಿಂದಲೇ ಪಾಕ್‌ 2020ರಲ್ಲಿ 5,100 ಬಾರಿ ಕದನ ವಿರಾಮ ಉಲ್ಲಂ ಸಿತ್ತು. 2003ರಲ್ಲಿ ಕದನ ವಿರಾಮ ಜಾರಿಗೆ ಬಂದ ಬಳಿಕ ಇದು ಅತೀ ಹೆಚ್ಚು ಉಲ್ಲಂಘನೆಯಾಗಿದೆ.

175-210 ಉಗ್ರರು ಪೀರ್‌ ಪಂಜಾಲ್‌ನ ಉತ್ತರದಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಸಿದ್ಧವಾಗಿದ್ದರೆ, 119-216 ಮಂದಿ ಪೀರ್‌ ಪಂಜಾಲ್‌ನ ದಕ್ಷಿಣದ ಜಮ್ಮು ಪ್ರದೇಶದಲ್ಲಿದ್ದಾರೆ ಎಂದು ಭದ್ರತ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next