Advertisement

ಕಾಬೂಲ್ ನಿಂದ ದೆಹಲಿಗೆ ಇಂದು 180 ಮಂದಿ ಏರ್ ಲಿಫ್ಟ್..!

10:43 AM Aug 26, 2021 | Team Udayavani |

ನವ ದೆಹಲಿ : ಆಗಸ್ಟ್ 31 ರ ಗಡುವುಗಿಂತ ಮುಂಚಿತವಾಗಿ ಹಲವಾರು ದೇಶಗಳು ತಮ್ಮ ನಾಗರಿಕರನ್ನು ಸ್ಥಳಾಂತರಿಸಲು ಹರಸಾಹಸ ಪಡುತ್ತಿರುವ ನಡುವೆ  ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್ ಸುತ್ತಮುತ್ತ ಇರುವ ಸುಮಾರು 180 ಜನರನ್ನು ಇಂದು(ಗುರುವಾರ, ಆಗಸ್ಟ್ 26)  ಮಿಲಿಟರಿ ವಿಮಾನದಲ್ಲಿ ಭಾರತಕ್ಕೆ ಕರೆತರುವ ನಿರೀಕ್ಷೆಯಿದೆ  ಎಂದು ಬಲ್ಲ ಮೂಲಗಳು ತಿಳಿಸಿರುವುದಾಗಿ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.

Advertisement

ಅಫ್ಗಾನಿಸ್ತಾನದಲ್ಲಿರುವ ಸಿಖ್ ಹಾಗೂ ಹಿಂದೂ ಧರ್ಮದವರನ್ನು ಒಳಗೊಂಡು, ಮೂಲ ಭಾರತೀಯರನ್ನು  ಭಾರತೀಯ ಮಿಲಿಟರಿ ವಿಮಾನ ಇಂದು ಸುಮಾರು 180 ಮಂದಿಯನ್ನು ಕಾಬೂಲ್ ನಿಂದ ದೆಹಲಿ ತಂದು ಇಳಿಸಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ : ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 46,164 ಕೋವಿಡ್ ಪ್ರಕರಣ ಪತ್ತೆ, ಶೇ.22.7ರಷ್ಟು ಏರಿಕೆ

ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಮತ್ತು ಅಶ್ರಫ್ ಘನಿ ಸರ್ಕಾರ ಪತನಗೊಂಡ ನಂತರ, ಭಾರತವು ಈವರೆಗೆ ‘ಆಪರೇಷನ್ ದೇವಿ ಶಕ್ತಿ’ ಕಾರ್ಯಾಚರಣೆಯ ಭಾಗವಾಗಿ 800 ಜನರನ್ನು ಈಗಾಗಲೇ ಸ್ಥಳಾಂತರಿಸಿದೆ.

ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆ ಮತ್ತೆ ಬಂದ ನಂತರ ಸಾವಿರಾರು ಅಫ್ಘನ್ನರು ದೇಶದಿಂದ ಹೊರಬರಲು ಪ್ರಯತ್ನಿಸುತ್ತಿದ್ದು, ಕಾಬೂಲ್ ವಿಮಾನ ನಿಲ್ದಾಣ ಸಾವಿರಾರು ಮಂದಿಯಿಂದ ಕಿಕ್ಕಿರಿದು ತುಂಬಿವೆ ಎಂದು ವರದಿ ತಿಳಿಸಿದೆ.

Advertisement

ಕಳೆದ ಕೆಲವು ದಿನಗಳಿಂದ, ಅಫ್ಗಾನ್ ರಾಜಧಾನಿ ಹಾಗೂ ಅಫ್ಗಾನ್ ನ ಇತರ ಭಾಗಗಳಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವುದನ್ನು ಗಮನದಲ್ಲಿಟ್ಟುಕೊಂಡು ಭಾರತ ತನ್ನ ನಾಗರಿಕರನ್ನು ಹಾಗೂ ಕಾಬೂಲ್ ನಿಂದ ಸ್ಥಳಾಂತರಿಸುವ ಪ್ರಯತ್ನದಲ್ಲಿದೆ.

ಇದನ್ನೂ ಓದಿ : 1 ರಿಂದ 8ನೇ ತರಗತಿ ಶಾಲೆಗಳನ್ನು ಆರಂಭಿಸುವ ಕುರಿತು ಆ. 30ರಂದು ನಿರ್ಧಾರ: ಬಿ.ಸಿ. ನಾಗೇಶ್

Advertisement

Udayavani is now on Telegram. Click here to join our channel and stay updated with the latest news.

Next