Advertisement

Indian Army; ಬ್ರಿಗೇಡಿಯರ್‌ ಮೇಲ್ಪಟ್ಟ ಹುದ್ದೆಗಳಿಗೆ ಏಕರೂಪ ಸಮವಸ್ತ್ರ

01:10 AM May 10, 2023 | Team Udayavani |

ಹೊಸದಿಲ್ಲಿ: ಸಮವಸ್ತ್ರ ವಿಚಾರದಲ್ಲಿ ಕ್ರಾಂತಿ ಕಾರಿ ಹೆಜ್ಜೆ ಇರಿಸಿರುವ ಭಾರತೀಯ ಸೇನೆಯು ಆ. 1ರಿಂದ ಬ್ರಿಗೇಡಿಯರ್‌ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯ ಅಧಿಕಾರಿಗಳಿಗೆ ಒಂದೇ ರೀತಿಯ ಸಮವಸ್ತ್ರದ ನಿಯಮ ಜಾರಿ ಮಾಡಲು ನಿರ್ಧರಿಸಿದೆ. ಕರ್ನಲ್‌ ಮತ್ತು ಅದಕ್ಕೂ ಕೆಳಹಂತದ ಯೋಧರಿಗೆ ಹಿಂದಿನ ಸಮವಸ್ತ್ರವೇ ಮುಂದುವರಿಯಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

Advertisement

ತಲೆಗೆ ಧರಿಸುವ ಶಿರಸ್ತ್ರಾಣ, ಭುಜದಲ್ಲಿ ಧರಿಸುವ ಬ್ಯಾಡ್ಜ್  ಗಳು, ಸಮವಸ್ತ್ರದ ಕಾಲರ್‌ನಲ್ಲಿ ಧರಿಸುವ ಗಾರ್ಜೆಟ್‌ ಪ್ಯಾಚಸ್‌, ಬೆಲ್ಟ್, ಶೂಗಳಿಗೆ ಒಂದು ಪ್ರಮಾಣೀಕೃತ ನಿರ್ದಿಷ್ಟ ರೂಪ ನೀಡಲಾಗುವುದು ಎಂದು ಸೇನೆ ಹೇಳಿದೆ. ಇತ್ತೀಚೆಗೆ ಭಾರತೀಯ ಸೇನಾ ಕಮಾಂಡರ್‌ಗಳ ಸಮಾವೇಶ ನಡೆದಿತ್ತು. ಅದರಲ್ಲಿ ವಿಸ್ತೃತ ಚರ್ಚೆ ನಡೆಸಿದ ಬಳಿಕ ಈ ನಿರ್ಧಾರ ತೆಗೆದು ಕೊಳ್ಳಲಾಗಿದೆ.

ಸದ್ಯ ಇರುವ ನಿಯಮಗಳ ಪ್ರಕಾರ ಅಧಿಕಾರಿಗಳು ಸೇವೆ ಸಲ್ಲಿಸುತ್ತಿರುವ ರೆಜಿಮೆಂಟ್‌ಗಳು, ವಿಭಾಗಗಳಿಗೆ ಅನ್ವಯವಾಗುವಂತೆ ಸಮವಸ್ತ್ರ ವಿನ್ಯಾಸ ಇದೆ.

ಉದ್ದೇಶವೇನು?
ಸೇನಾ ನಾಯಕತ್ವ ವಲಯದಲ್ಲಿ ಒಂದೇ ರೀತಿಯ ಗುರುತು, ಮನೋ ಭಾವ ವನ್ನು ಉತ್ತೇಜಿಸಲು, ಬಲಗೊಳಿಸಲು ಈ ವ್ಯವಸ್ಥೆ ಮಾಡಲಾಗಿದೆ. ಸೇನೆಯ ಬೇರೆಬೇರೆ ರೆಜಿಮೆಂಟ್‌ಗಳ ಗಡಿಗಳನ್ನು ದಾಟಿ ಏಕರೂಪತೆಯನ್ನು ಸಾಧಿಸುವ ಉದ್ದೇಶ ಇದರ ಹಿಂದಿದೆ. ಭಾರತೀಯ ಸೇನೆಯ ಗುಣಲಕ್ಷಣ ಸಮಾನವಾಗಿರುವಂತೆ, ಚೆನ್ನಾಗಿರುವಂತೆ ಮಾಡುವುದು ಇಲ್ಲಿನ ಉದ್ದೇಶ ಎಂದು ಸೇನೆ ಪ್ರತಿಪಾದಿಸಿದೆ. ಹಿರಿಯ ಸೇನಾಧಿಕಾರಿಗಳ ಮಟ್ಟದಲ್ಲಿ ಒಂದೇ ರೀತಿಯ ಸಮವಸ್ತ್ರ ಇದ್ದಲ್ಲಿ ಏಕರೂಪದ ಗುರುತು ವ್ಯವಸ್ಥೆ ಜಾರಿಗೆ ತಂದಂತೆ ಆಗಲಿದೆ. ಜತೆಗೆ ಸಂಘಟನೆ ಯಲ್ಲಿ ಸೇನೆಯಲ್ಲಿ ಸಮಾನತೆ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಉದ್ದೇಶವನ್ನೂ ಹೊಂದಲಾಗಿದೆ.

ಬ್ರಿಗೇಡಿಯರ್‌ ಮತ್ತು ಅದಕ್ಕಿಂತ ಮೇಲ್ಪಟ್ಟ ಅಧಿಕಾರಿಗಳು ಹೆಚ್ಚಿನ ಸಂದರ್ಭ ಗಳಲ್ಲಿ ಸೇನೆಯ ಪ್ರಧಾನ ಕಚೇರಿಯಲ್ಲಿ ಅಥವಾ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಇರಿಸಲಾಗುವ ಕೇಂದ್ರ ಗಳ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸ ಬೇಕಾಗುತ್ತದೆ. ಈ ಸಂದರ್ಭಗಳಲ್ಲಿ ಎಲ್ಲರೂ ಒಟ್ಟು ಸೇರಿ ಕೆಲಸ ಮಾಡ ಬೇಕಾಗುತ್ತದೆ. ಈ ಹಂತದಲ್ಲಿ ಸಮಾನತೆ ಮತ್ತು ಸಮನ್ವಯವನ್ನು ಸಾಧಿಸಲು ಒಂದೇ ರೀತಿಯ ಸಮವಸ್ತ್ರ ನಿಯಮ ಜಾರಿಗೆ ತರಲು ಉದ್ದೇಶಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next