Advertisement

ಸೈನಿಕ ಹುಳು ಕಾಟಕ್ಕೆ ರೈತರು ಕಂಗಾಲು

07:14 AM May 30, 2020 | Lakshmi GovindaRaj |

ನೆಲಮಂಗಲ: ಕೋವಿಡ್‌ 19 ವೈರಸ್‌ ಜೊತೆ ಮೆಕ್ಕೆಜೋಳ ಬೆಳೆದ ರೈತರಿಗೆ ಸೈನಿಕ ಹುಳುವಿನ ಕಾಟ ಶುರುವಾಗಿದೆ. ಸಣ್ಣಗಿಡಗಳಗೆ ದಾಳಿ ಮಾಡಿರುವ ಹುಳುವಿನ ನಿಯಂತ್ರಣಕ್ಕೆ ಔಷಧ ದೊರೆಯುತ್ತಿಲ್ಲ. ಅಧಿಕಾರಿಗಳು ಕೂಡ ತಮ್ಮ  ಜವಾಬ್ದಾರಿ ಮರೆತು ಬೇಜವಾಬ್ದಾರಿ ತೋರಿದ್ದಾರೆ ಎಂದು ತಾಲೂಕಿನ ರೈತರು ದೂರಿದ್ದಾರೆ.

Advertisement

ಸರಕಾರ ನೀಡಿದ ಮೆಕ್ಕೆಜೋಳದ ಬಿತ್ತನೆ ಬೀಜ  ಈಗಾಗಲೇ ಐದಾರು ಎಲೆಗಳಷ್ಟು ಬೆಳವಣಿಗೆಯಾಗಿದ್ದು, ಗಿಡದ ಸುಳಿಗೆ ಸೈನಿಕ ಹುಳು ಕತ್ತರಿ  ಹಾಕುತ್ತಿರುವುದರಿಂದ ರೈತರು ಬೆಳೆ ನಾಶದ ಆತಂಕದಲ್ಲಿದ್ದಾರೆ. ರೈತರ ನೆರವಿಗೆ ಬರಬೇಕಿದ್ದ ಸರ್ಕಾರ ಕೂಡ ಕೈಕಟ್ಟಿ ಕುಳಿತಿದೆ. ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೆ ಔಷಧ ಸರಬ ರಾಜಾಗಬೇಕಿತ್ತು. ಆದರೆ ಈವರೆಗೂ ಔಷಧಿ  ಸರಬರಾಜಾಗಿಲ್ಲ ಎಂದು ರೈತರು ಆತಂಕ ವ್ಯಕ್ತ ಪಡಿಸಿದ್ದಾರೆ.

ರೈತರ ಅಲೆದಾಟ: ಸೈನಿಕ ಹುಳು ನಿಯಂತ್ರಣಕ್ಕೆ ಔಷಧಿ ಪಡೆಯಲು ಪ್ರತಿನಿತ್ಯ ರೈತ ಸಂಪರ್ಕ ಕೇಂದ್ರಕ್ಕೆ ರೈತರು ಅಲೆದಾಡು ತಿದ್ದಾರೆ. ಆದರೆ ಅಧಿಕಾರಿಗಳು ತೀವ್ರತೆಯ ಬಗ್ಗೆ ಮನವರಿಕೆ ಮಾಡಿಕೊಂಡು ಔಷಧ ತರಿಸುವ ಯತ್ನಮಾಡಿಲ್ಲ. ಕೃಷಿ ಇಲಾಖೆ ಯಿಂದ ಸೈನಿಕ ಹುಳು ನಿಯಂತ್ರಣ ಮಾಡಲು ಸಲಹೆಗಳು ಹಾಗೂ ಔಷದ ಬಗ್ಗೆ ಕರಪತ್ರ ಹಂಚಲಾಗಿದೆ. ಆದರೆ ಔಷಧ ಮಾತ್ರ ಸಿಗುತಿಲ್ಲ.

ಸೈನಿಕ ಹುಳುವಿನ ಅಪಾಯ: ಸೈನಿಕ ಹುಳು ಭಾರತದಲ್ಲಿ ಮೆಕ್ಕೆಜೋಳ, ಸಜ್ಜೆ, ಕಬ್ಬು ಬೆಳೆ ಗಳಿಗೆ ಹಾನಿ ಮಾಡುತ್ತದೆ. ಮರಿಹುಳುಗಳು ಪ್ರಮುಖವಾಗಿ ಎಳೆಗಿಡ ಹೆಚ್ಚಾಗಿ ತಿನ್ನುತ್ತವೆ. ಪ್ರೌಢ ಹೆಣ್ಣು ಪಂತಗ ಎಲೆಯ ಮೇಲೆ 100 ರಿಂದ 200  ಮೊಟ್ಟೆ ಇಡುತ್ತದೆ. ಅದರ ಆಯಸ್ಸು 36 ರಿಂದ 42 ದಿನಗಳು ಅಷ್ಟರಲ್ಲಿ ಗಿಡವನ್ನು ಸಂಪೂರ್ಣ ನಾಶ ಮಾಡಿರುತ್ತದೆ.

ಔಷಧವಿಲ್ಲ: ಸೈನಿಕ ಹುಳು ನಿಯಂತ್ರಣಕ್ಕೆ ಇಲಾಖೆ ಸೂಚಿಸಿ ರುವ ಮೇಟಾರೈಜಿ ಯಮ್‌ ರಿಲೆ, ಬ್ಯಾಸಿಲಸ್‌ ಥುರೆಂಜಿ ಯನಸಸ್‌, ಸ್ಪೈನೊಟ ರ್ಯಾಮ್‌, ಕ್ಲೊರಾಂಟ್ರಿನೀಲಿಪ್ರೋಲ್‌ ಇತ್ಯಾದಿ ಔಷಧಗಳನ್ನು ಇಲಾಖೆ ಸರಬರಾಜು  ಮಾಡುತ್ತಿಲ್ಲ. ಹೀಗಾಗಿ ರೈತರು ಪರದಾಡುತಿದ್ದಾರೆ. ಅಲ್ಲದೆ ರೈತರು ಜಾನು ವಾರಿಗೆ ಹಾಕ ಲಾಗಿರುವ ಮೆಕ್ಕೆಜೋಳದ ಹುಳುನಾಶಕ್ಕೆ ಪರ್ಯಾಯ ವಿಷಕಾರಿ ಔಷಧ ಸಿಂಪಡಣೆ ಮಾಡಲಾಗುತ್ತಿದ್ದು,

Advertisement

ಬೆಳೆ ನಾಶದ ಜಾನು ವಾರುಗಳಿಗೂ  ಅಪಾಯ ಎದುರಾಗಿದೆ. ನೆಲಮಂಗಲದಲ್ಲಿ 350 ಕೆ.ಜಿ.ಗಳಷ್ಟು ಮೆಕ್ಕೆ ಜೋಳದ ಬಿತ್ತನೆ ಬೀಜ ಖರೀದಿಸಿದರೆ, ಜಿಲ್ಲೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಕೆ.ಜಿ. ಬಿತ್ತನೆ ಬೀಜ ಖರೀದಿಯಾಗಿದೆ. ಈಗಾಗಲೇ ಶೇ.90ರಷ್ಟು ಗಿಡಗಳು ಐದಾರು  ಎಲೆಗಳಷ್ಟು ಬೆಳವಣಿಗೆಯಾಗಿದ್ದು, ಹುಳುಗಳು ಬಿದ್ದಿವೆ. ಆದರೆ ಅಧಿಕಾರಿ ಗಳು ಮಾತ್ರ ಮಾಹಿತಿಯಿಲ್ಲ ಎನ್ನುತ್ತಿದ್ದಾರೆ.

ರಾಜ್ಯದಲ್ಲಿ ಯಾವ ಭಾಗದಲ್ಲಿಯೂ ಔಷಧ ಸರಬರಾಜಿಲ್ಲ. ಹುಳುವಿನ ಸಮಸ್ಯೆ ಬಗ್ಗೆ ಮಾಹಿತಿಯಿಲ್ಲ. ಸಮಸ್ಯೆ ಎದುರಾಗಿದ್ದರೆ ಇನ್ನೂ ಎರಡು ದಿನದಲ್ಲಿ ವ್ಯವಸ್ಥೆ ಮಾಡುವ ಪ್ರಯತ್ನ ಮಾಡುತ್ತೇನೆ.
-ಸುಶೀಲಮ್ಮ, ಕೃಷಿ ಇಲಾಖೆ ತಾಲೂಕು ಸಹಾಯಕ ನಿರ್ದೇಶಕಿ

Advertisement

Udayavani is now on Telegram. Click here to join our channel and stay updated with the latest news.

Next