ಹೊಸದಿಲ್ಲಿ : ಇದೇ ಜನವರಿ 20ರೊಳಗೆ ಸೇನೆಯ ನಾರ್ತ್ ಕಮಾಂಡ್ ಪಡೆಗೆ ಹೊಸ sniper rifle ಸಿಗಲಿವೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
2019ರ ಫೆಬ್ರವರಿ ಅಥವಾ ಮಾರ್ಚ್ ಒಳಗಾಗಿ ಡಿಆರ್‌ಡಿಓ ದಿಂದ ಸೇನೆ ಆದೇಶಿಸಿರುವ ಕ್ಷಿಪಣಿಗಳು ಮತ್ತು ರಾಕೆಟ್‌ಗಳ ಪೂರೈಕೆಯ ಅಂತಿಮ ಗಡುವು ಗೊತ್ತಾಗಲಿದೆ ಎಂದು ಜನರಲ್ ರಾವತ್ ಅವರು ಇಂದು ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ನಡೆಸಿಕೊಟ್ಟ ವಾರ್ಷಿಕ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ಒಂದೊಮ್ಮೆ ಡಿಆರ್‌ಡಿಓ ತನ್ನ ಅಂತಿಮ ಪೂರೈಕೆ ಗಡುವನ್ನು ನಿಭಾಯಿಸಲು ವಿಫಲವಾದರೆ ಅವುಗಳನ್ನು (ಮಿಸೈಲ್ ಮತ್ತು ರಾಕೆಟ್ ಗಳನ್ನು) ಆಮದಿಸಿಕೊಳ್ಳುವ ಆಯ್ಕೆಯನ್ನು ಕಂಡುಕೊಳ್ಳಲಾಗುವುದು ಎಂದು ಜನರಲ್ ರಾವತ್ ಹೇಳಿದರು.
ಅಂತಾರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯಲ್ಲಿನ ಹಾಲಿ ಸ್ಥಿತಿಗತಿ ಕುರಿತಾಗಿ ಮಾತನಾಡಿದ ರಾವತ್, ಭಾರತದೊಳಗೆ ನುಸುಳಿ ಬರಲು ಪ್ರಕೃತ ಎಲ್‌ಓಸಿಯಲ್ಲಿ ಸುಮಾರು 300 ಉಗ್ರರು ಕಾದುಕೊಂಡಿದ್ದಾರೆ. ಪಾಕಿಸ್ಥಾನ ಮತ್ತು ಚೀನದ ಗಡಿ ಪರಿಸ್ಥಿಗಳನ್ನು ನಾವು ಚೆನ್ನಾಗಿಯೇ ನಿಭಾಯಿಸುತ್ತಿದ್ದೇವೆ’ ಎಂದು ಹೇಳಿದರು.
ಜಮ್ಮು ಕಾಶ್ಮೀರದಲ್ಲಿನ ಪರಿಸ್ಥಿತಿಯು ಇನ್ನಷ್ಟು ಸುಧಾರಿಸಬೇಕಾದ ಅಗತ್ಯವಿದೆ; ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಗೊಳ್ಳುವಂತೆ ಮಾಡುವುದಷ್ಟೇ ನಮ್ಮ ಕೆಲಸವಾಗಿದೆ ಎಂದು ಜನರಲ್ ರಾವತ್ ಹೇಳಿದರು.