ಜಮ್ಮು-ಕಾಶ್ಮೀರ: ಇಂದು ಮುಂಜಾನೆ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ಹುತಾತ್ಮನಾಗಿ, ಮತ್ತೊಬ್ಬ ಸೈನಿಕ ಗಂಭೀರ ಗಾಯಗೊಂಡ ಘಟನೆ ಪುಲ್ವಾಮ ಜಿಲ್ಲೆಯ ಕಾಮ್ರಾಝಿಫೋರಾ ಗ್ರಾಮದಲ್ಲಿ ನಡೆದಿದೆ.
ನಸುಕಿನ ವೇಳೆ ಸುಮಾರು 2;30ರ ಸಮಯದಲ್ಲಿ ಭಧ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ಆರಂಭವಾಗಿತ್ತು. ಈ ವೇಳೆ ಓರ್ವ ಉಗ್ರನನ್ನು ಎನ್ ಕೌಂಟರ್ ಮೂಲಕ ಹೊಡೆದುರುಳಿಸಿದರೇ, ಯೋಧರಿಬ್ಬರು ಗಂಭೀರ ಗಾಯಗೊಂಡಿದ್ದರು.
ಗಾಯಗೊಂಡ ಓರ್ವ ಯೋಧ ಶ್ರೀನಗರದ 92 ಬೇಸ್ ಆರ್ಮಿ ಹಾಸ್ಪತ್ರೆಯಲ್ಲಿ ಹುತಾತ್ಮರಾಗಿದ್ದಾರೆ.
ಈ ಸ್ಥಳದಲ್ಲಿ ಇನ್ನು ಕೂಡ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು ಉಗ್ರನ ಶವವನ್ನು ತೆರವುಗೊಳಿಸಲಾಗಿದೆ. ಮಂಗಳವಾರ ಸಂಜೆಯಿಂದಲೇ ಭಾರತೀಯ ಸೇನಾಪಡೆ, ಜಮ್ಮು ಕಾಶ್ಮೀರ ಪೊಲೀಸರು, ಸಿಆರ್ ಪಿಎಫ್ ಯೋಧರು ಈ ಸ್ಥಳದಲ್ಲಿ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದರು.
ಸ್ಥಳದಲ್ಲಿದ್ದ ಏಕೆ47 ರೈಫಲ್, ಗ್ರೆನೇಡ್ಸ್, ಸೇರಿದಂತೆ ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.