ಕಾಶ್ಮೀರಕ್ಕೆ ನುಗ್ಗಿ ಉಗ್ರರನ್ನು ರವಾನಿಸಲು ಚಿಮ್ಮು ಹಲಗೆಗಳಂತೆ ಕಾರ್ಯನಿರ್ವಹಿಸುತ್ತಿದ್ದ ಶಿಬಿರಗಳನ್ನು ಗುರಿ ಮಾಡಿಕೊಂಡು ನಡೆಸಿದ ಈ ಕಾರ್ಯಾಚರಣೆಯಲ್ಲಿ ಎಷ್ಟು ಉಗ್ರರು ಮತ್ತು ಪಾಕ್ ಯೋಧರು ಸತ್ತಿದ್ದಾರೆ ಎನ್ನುವ ಅಧಿಕೃತ ಮಾಹಿತಿ ಇನ್ನೂ ಬಹಿರಂಗೊಂಡಿಲ್ಲ. ಆದರೆ ಸುಮಾರು 80ರಷ್ಟು ಉಗ್ರರು ಸತ್ತಿರುವ ಸಾಧ್ಯತೆ ಇದೆ. ಸತ್ತವರ ಶವಗಳನ್ನು ಪಾಕ್ ಸರಕಾರ ಲಾರಿಗಳಲ್ಲಿ ತುಂಬಿಸಿಕೊಂಡು ಹೋಗಿತ್ತು.
Advertisement
2015 ಸೆ. 19ರಂದು ಜೈಶ್ ಉಗ್ರರು ಉರಿಯ ಸೇನಾ ನೆಲೆಗೆ ನುಗ್ಗಿ ಮಲಗಿದ್ದ ಯೋಧರ ಶಿಬಿರದೊಳಗೆ ಗ್ರನೇಡ್ ಎಸೆದು ಮತ್ತು ಗುಂಡಿನ ದಾಳಿ ಮಾಡಿ 18 ಯೋಧರನ್ನು ಸಾಯಿಸಿದ್ದರು. ಇದರ ವಿರುದ್ಧ ಸೇಡು ತೀರಿಸಿಕೊಳ್ಳಲು ಸೇನೆ ನಡೆಸಿದ ಕಾರ್ಯಾಚರಣೆ ಸರ್ಜಿಕಲ್ ಸ್ಟ್ರೈಕ್. ಅಷ್ಟರ ತನಕ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಈ ಮಾದರಿಯ ಸಾಹಸವನ್ನು ಓದಿ ಗೊತ್ತಿದ್ದ ನಮಗೆ ನಮ್ಮ ಸೇನೆಯೂ ಇಂತಹ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ ಎನ್ನುವುದನ್ನು ತೋರಿಸಿಕೊಟ್ಟ ಕಾರ್ಯಾಚರಣೆಯಿದು. ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಯ ಬಳಿಕ ಭಾರತದ ಸೇನೆಯ ಕುರಿತು ಜಗತ್ತಿಗಿದ್ದ ಗ್ರಹಿಕೆ ಬದಲಾಗಿದೆ.
ಸಹಜವಾಗಿಯೇ ಈ ಘಟನೆ ಸಿನೆಮಾ ನಿರ್ಮಾಪಕರನ್ನು ಮತ್ತು ಲೇಖಕರನ್ನು ಆಕರ್ಷಿಸಿದೆ. ಶೌರ್ಯ, ದೇಶಪ್ರೇಮ, ಸಾಹಸ ಮತ್ತಿತರ ಅಂಶಗಳನ್ನೊಳಗೊಂಡಿರುವ ಸರ್ಜಿಕಲ್ ಸ್ಟ್ರೈಕ್ ಕುರಿತಾದ “ಉರಿ’ ಚಿತ್ರ ಹಿಂದಿಯಲ್ಲಿ ತಯಾರಾಗಲಿದೆ. ಇನ್ನೊಂದು ವರ್ಷದಲ್ಲಿ ಈ ಚಿತ್ರ ನಿಮ್ಮ ಊರಿನ ಚಿತ್ರಮಂದಿರಗಳಲ್ಲಿರಬಹುದು. ಇಷ್ಟು ಮಾತ್ರವಲ್ಲದೆ ಸರ್ಜಿಕಲ್ ಸ್ಟ್ರೈಕ್ ಮೇಲೆ ಮೂವರು ಲೇಖಕರು ಈಗಾಗಲೇ ಪುಸ್ತಕಗಳನ್ನು ಬರೆದಿದ್ದಾರೆ. ಈ ಪೈಕಿ ನಿತಿನ್ ಗೋಖಲೆ ಬರೆದಿರುವ “ಇನ್ ಸೆಕ್ಯುರಿಂಗ್ ಇಂಡಿಯಾ ದ ಮೋದಿ ವೇ : ಪಠಾಣ್‌ಕೋಟ್, ಸರ್ಜಿಕಲ್ ಸ್ಟ್ರೈಕ್ಸ್ ಆ್ಯಂಡ್ ಮೋರ್’ಎಂಬ ಪುಸ್ತಕ ಶುಕ್ರವಾರ ದಿಲ್ಲಿಯಲ್ಲಿ ಬಿಡುಗಡೆಯಾಗಲಿದೆ.
Related Articles
Advertisement
ಬದಲಾದ ಸಿದ್ಧಸೂತ್ರ ಪಾಕ್ ಆಕ್ರಮಿತ ಕಾಶ್ಮೀರದೊಳಗೆ
ನುಗ್ಗಿ ನಡೆಸಿದ ಈ ಕಾರ್ಯಾಚರಣೆ ಪಾಕಿಸ್ಥಾನದ ಜತೆಗೆ ಭಾರತ ವ್ಯವಹರಿಸುವ ರೀತಿಯನ್ನು ಕೂಡ ಬದಲಾಯಿಸಿದೆ.
ದಶಕಗಳಿಂದ ಭಾರತ ಮತ್ತು ಪಾಕ್ ರಾಜತಾಂತ್ರಿಕತೆಯ ಸಿದ್ಧಸೂತ್ರವೊಂದನ್ನು ಅನುಸರಿಸುತ್ತಿದ್ದವು. ಪ್ರತಿ ಸಲ ದೊಡ್ಡ ಮಟ್ಟದ ಉಗ್ರ ದಾಳಿಯಾದಾಗ ಭಾರತ ಸರಕಾರ ಪಾಕಿಸ್ಥಾನವನ್ನು ದೂಷಿಸುತವುದು, ರಾಜತಾಂತ್ರಿಕ ಸಂಬಂಧವನ್ನು ಮೊಟಕುಗೊಳಿಸುವುದು, ಪಾಕ್ ಹೈಕಮಿಶರನ್ನು ಕರೆಸಿಕೊಂಡು ಪ್ರತಿಭಟನೆ ಸಲ್ಲಿಸುವುದು ಮತ್ತು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪಾಕ್ ವಿರುದ್ಧ ದೋಷಾರೋಪ ಮಾಡುವುದು ಇದೇ ಈ ಸಿದ್ಧಸೂತ್ರ. ಕೆಲ ಸಮಯದ ಬಳಿಕ ಎಲ್ಲ ಮರೆತು ಹೋಗಿ ಮೊದಲಿನಂತೆ ಮತ್ತು ಮಾತುಕತೆ ಶುರುವಾಗುತ್ತಿತ್ತು. ಮತ್ತೂಮ್ಮೆ ಉಗ್ರರು ಬಂದೆರಗಿದಾಗಲೇ ಸರಕಾರಕ್ಕೆ ಎಚ್ಚರವಾಗುತ್ತಿತ್ತು. ಭಾರತದಿಂದ ಇಷ್ಟು ಮಾತ್ರ ಮಾಡಲು ಸಾಧ್ಯ ಎಂಬ ಭಂಡ ಧೈರ್ಯದಲ್ಲಿ ಪಾಕ್ ಕೂಡ ಉಗ್ರರನ್ನು ತರಬೇತಿ ನೀಡಿ ಕಳುಹಿಸುತ್ತಿತ್ತು.