ಶ್ರೀನಗರ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ಸೇನೆ ಪಾಕ್ ಆಕ್ರಮಿತ ಕಾಶ್ಮೀರದ ಒಳಗೆ ನುಗ್ಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪಿಒಕೆಯ ಒಳನುಗ್ಗಿ ತೆಂಗಾಧರ್ ಸೆಕ್ಟರ್ ನ ಭಯೋತ್ಪಾದಕರ ತಾಣಗಳ ಮೇಲೆ ರವಿವಾರ ಭಾರತದ ಸೇನೆ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ನೀಲಂ ಘಾಟ್ ಒಳನುಗ್ಗಿದ ಭಾರತೀಯ ಸೇನೆ ಉಗ್ರರ ಲಾಂಚ್ ಪ್ಯಾಡ್ ಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಈ ದಾಳಿಯಿಂದಾಗಿ ಪಾಕ್ ಕಡೆಯಲ್ಲಿ ಭಾರಿ ಸಾವು ನೋವುಗಳು ಸಂಭವಿಸಿದೆ ಎನ್ನಲಾಗಿದ್ದು, ನಿಖರ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.
ಶನಿವಾರ ರಾತ್ರಿಯಿಂದ ರವಿವಾರ ಮುಂಜಾನೆ ನಾಲ್ಕು ಗಂಟೆಯವರಗೆ ಪಾಕಿಸ್ಥಾನ ಗಡಿ ಭಾಗದ ಕುಪ್ವಾರದಲ್ಲಿ ಭಾರತೀಯ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿತ್ತು. ಭಾರತದ ಪ್ರತಿ ದಾಳಿ ನಡೆಸಿದ್ದರೂ ಕೂಡ ಇಬ್ಬರು ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದ ಒಳಗೆ ನುಗ್ಗಿದೆ.