ಚಂಡೀಗಢ: ಪಂಜಾಬ್‌ನ ಬಂಟಿಂಡಾ ಸೇನಾ ನೆಲೆಯಲ್ಲಿ ಕರ್ನಾಟಕದ ಇಬ್ಬರು ಸೇರಿ ಒಟ್ಟು ನಾಲ್ವರು ಯೋಧರನ್ನು ಹತ್ಯೆ ಮಾಡಿದ ಆರೋಪದಲ್ಲಿ ಸೈನಿಕನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಆತನನ್ನು ಗನ್ನರ್ ದೇಸಾಯಿ ಮೋಹನ್ ಎಂದು ಗುರು ತಿಸಲಾಗಿದೆ. ಈತನಿಂದ ಕದ್ದ ರೈಫಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಎ.12ರಂದು ಕರ್ನಾಟಕದ ಸಾಗರ್ ಬನ್ನೆ, ಮತ್ತು ಸಂತೋಷ್ ಎಂ. ನಾಗಾರಾಲ್ ಹಾಗೂ ಯೋಗೇಶ್ ಕುಮಾರ್ ಜೆ., ಕಮಲೇಶ್ ಆರ್. ಅವರನ್ನು ಕದ್ದ ಐಎನ್‌ಎಸ್‌ಎಎಸ್ ರೈಫಲ್ ಬಳಸಿ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. “ಮೃತ ನಾಲ್ವರು ತನ್ನ ಮೇಲೆ ದೈಹಿಕ ದೌರ್ಜನ್ಯ ನಡೆಸುತ್ತಿದ್ದರು. ವೈಯಕ್ತಿಕ ದ್ವೇಷದಿಂದ ಹತ್ಯೆ ನಡೆಸಲಾಗಿದೆ’ ಎಂದು ವಿಚಾರಣೆ ವೇಳೆ ಆರೋಪಿ ಮೋಹನ್ ತಿಳಿಸಿದ್ದಾನೆ. ಇದಕ್ಕೂ ಮುನ್ನ ಆತ, ಇಬ್ಬರು ಮುಸುಕುಧಾರಿ ಅಪರಿಚಿತರು ಕೈಯಲ್ಲಿ ರೈಫಲ್‌ಗಳನ್ನು ಹಿಡಿದು ದಾಳಿ ನಡೆಸಿದರು ಎಂದು ಕಥೆ ಹಣೆದಿದ್ದ ಎ.10ರಂದು ಬಂಟಿಂಡಾ ಸೇನಾ ನೆಲೆಯಿಂದ ಒಂದು ಐಎನ್‌ಎಸ್‌ಎಎಸ್ ರೈಫಲ್, 28 ಸುತ್ತು ಗುಂಡುಗಳು, 20 ಕಾಟ್ರಿìಜ್‌ಗಳು ಮತ್ತು ಲೈಟ್ ಮೆಶಿನ್ ಗನ್‌ನ(ಎಲ್‌ಎಂಜಿ) 8 ಸುತ್ತು ಗುಂಡುಗಳು ನಾಪತ್ತೆಯಾಗಿದ್ದವು.