Advertisement
ಅಂದು ನಾವು ರಾಮಕೃಷ್ಣ ಶೆಣೈಯವರ ತೋಟ ಪ್ರವೇಶಿಸಿದಾಗ ಮಧ್ಯಾಹ್ನ 2 ಗಂಟೆ ದಾಟಿತ್ತು. ಆಗಷ್ಟೇ ಮಳೆ ಸುರಿದು ನಿಂತಿತ್ತು. ಆ ದಿನ ಮಂಗಳೂರಿನಿಂದ ವಾಹನದಲ್ಲಿ ಹೊರಟು ಮೂಡಬಿದಿರೆ ದಾಟಿ, ಕಾರ್ಕಳ ರಸ್ತೆಯಲ್ಲಿ 15 ನಿಮಿಷ ಸಾಗಿ, ತಲಪಿದ್ದು ಬೆಳ್ವಾಯಿ . ಅಲ್ಲಿ ಬಲಕ್ಕೆ ತಿರುಗಿ ಒಂದು ಕಿ.ಮೀ ಕ್ರಮಿಸಿ, ಸಾವಯವ ಕೃಷಿಕ ಶೆಣೈಯವರ ಮನೆ ಮುಟ್ಟಿ¨ªೆವು.
Related Articles
Advertisement
ಅವರ ತೋಟದ ಅಂಚಿನಲ್ಲಿ ಎತ್ತರಕ್ಕೆ ಬೆಳೆದ ಹಲವು ಮರಗಳಿವೆ. ಅವುಗಳ ತರಗೆಲೆ ಬಾಚಿ ತಂದು, ಅಡಿಕೆ ಇತ್ಯಾದಿ ಮರಗಳ ಬುಡದಲ್ಲಿ ರಾಶಿ ಹಾಕುತ್ತಾರೆ. ಮಳೆಗಾಲ ಶುರುವಾದಾಗ, ಆ ತರಗೆಲೆಗಳನ್ನು ಮರಗಳ ಬುಡದಲ್ಲಿ ಹರಡಿ, ಅದರ ಮೇಲೆ ಪೈಪಿನ ಮೂಲಕ ಗೋಬರ್ ಗ್ಯಾಸ್ ಪ್ಲಾಂಟಿನ ಸ್ಲರಿ ಸುರಿಯುತ್ತಾರೆ. ಕ್ರಮೇಣ ಆ ಎಲೆಗಳೆಲ್ಲ ಅÇÉೇ ಕೊಳೆತು ಗೊಬ್ಬರವಾಗುತ್ತದೆ. ಈ ರೀತಿಯಲ್ಲಿ ಬೇರೆಲ್ಲಿಯೋ ಗೊಬ್ಬರ ಮಾಡಿ, ನಂತರ ಅದನ್ನು ಹೊತ್ತು ತಂದು ಮರಗಳ ಬುಡಕ್ಕೆ ಹಾಕುವ ಕೆಲಸ ತಪ್ಪಿಸಿ¨ªಾರೆ.ಶೆಣೈಯವರ ತೋಟದಲ್ಲಿ ಅಲ್ಲಲ್ಲಿ ಗಾಂಧಾರಿ ಮೆಣಸಿನ ಗಿಡಗಳು ಹುಟ್ಟಿ ಬೆಳೆಯುತ್ತಿವೆ. ಈ ಗಿಡಗಳ ತುಂಬ ಮೆಣಸು ಬಿಡುತ್ತದೆ. ಎÇÉೆಲ್ಲಿಂದಲೋ ಹಕ್ಕಿಗಳು ಬಂದು ತಿನ್ನುತ್ತವೆ. ಅವು ತಿಂದು ಉಳಿದದ್ದು ನಮಗೆ ಸಾಕು ಎನ್ನುತ್ತಾರೆ. ಅವರ ಜಮೀನಿನಲ್ಲಿ ನವಿಲುಗಳ ಕಾಟ ಜೋರಾಗಿದೆ ಎಂಬುದನ್ನು ಅವರು ತಿಳಿಸುವ ಬಗೆ ಹೀಗೆ: ಒಮ್ಮೆ ಹರಿವೆ ಬೀಜ ಬಿತ್ತಿ¨ªೆ. ಅವೆಲ್ಲ ಮೊಳೆತು ಐದಾರು ಇಂಚು ಎತ್ತರಕ್ಕೆ ಬೆಳೆದಿದ್ದವು. ಮರುದಿನ ಬೆಳಗ್ಗೆ ನೋಡಿದರೆ, ಒಂದೇ ಒಂದು ಹರಿವೆ ಸಸಿ ಅಲ್ಲಿಲ್ಲ. ನವಿಲುಗಳು ರಾತ್ರಿ ಬಂದು, ಎಲ್ಲ ಸಸಿಗಳನ್ನು ಬೇರು ಸಮೇತ ಕಿತ್ತು ತಿಂದಿದ್ದವು. ಕೃಷಿ, ಎರೆಹುಳ ಗೊಬ್ಬರ ತಯಾರಿ, ಅಜೋಲಾ ಬೆಳೆಸುವುದು, ಜೇನ್ನೋಣ ಸಾಕಣೆ, ಹಸುಪಾಲನೆ ಇವೆಲ್ಲದರಲ್ಲೂ ಪಳಗಿದವರು ರಾಮಕೃಷ್ಣ ಶೆಣೈ. ನಿಮ್ಮ ತೋಟದ ಕೆಲಸಕ್ಕೆ ಕೆಲಸದವರು ಸಿಗುತ್ತಾರೆಯೇ? ಎಂದು ಪ್ರಶ್ನಿಸಿದಾಗ ಅವರ ಪ್ರತಿಕ್ರಿಯೆ: ನಮ್ಮ ಮೂರೂವರೆ ಎಕ್ರೆ ತೋಟದಲ್ಲಿ ಕೆಲಸ ಮಾಡಲು ಕೆಲಸದವರು ಯಾರೂ ಇಲ್ಲ. ನಾನು ಮತ್ತು ಮನೆಯಾಕೆ ರಾಧಿಕಾ ಎಲ್ಲ ಕೆಲಸ ಮಾಡ್ತೇವೆ. ನನಗೆ ಜಿÇÉಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಹಾಕಲು ಕೃಷಿ ಇಲಾಖೆಯ ಅಧಿಕಾರಿಗಳು ಒತ್ತಾಯ ಮಾಡಿದರು. ನಾನು ಯಾವ ಪ್ರಶಸ್ತಿಗೂ ಅರ್ಜಿ ಹಾಕುವುದಿಲ್ಲ. ನನಗೆ ಈ ಪ್ರಶಸ್ತಿಗಳ ಉಸಾಬರಿಯೇ ಬೇಡ. ಯಾಕೆಂದರೆ, ಪ್ರಶಸ್ತಿ ಕೊಟ್ಟ ನಂತರ ನನ್ನನ್ನು ಎÇÉೆಲ್ಲಿಗೋ ಭಾಷಣ ಮಾಡಲು ಕರೀತಾರೆ. ಹಾಗೆ ಹೋಗುತ್ತಿದ್ದರೆ, ನನ್ನ ತೋಟದ ಕೆಲಸಕ್ಕೆ ತೊಂದರೆಯಾಗುತ್ತದೆ ಎಂದು ತನ್ನ ನಿಲುವನ್ನು ವಿವರಿಸುತ್ತಾರೆ ಶೆಣೈ. ಎಲ್ಲದಕ್ಕಿಂತ ಮುಖ್ಯವಾಗಿ ಅವರದು ಅಪ್ಪಟ ಸಾವಯವ ಕೃಷಿ. ತನ್ನ ತೋಟಕ್ಕೆ ಯಾವುದೇ ರಾಸಾಯನಿಕ ಗೊಬ್ಬರ ಅಥವಾ ವಿಷಪೀಡೆನಾಶಕ ಹಾಕುವುದಿಲ್ಲ; ಯಾಕೆಂದರೆ, ಕೃಷಿ ಮಾಡಿ ಯಾರಿಗೂ ವಿಷ ಉಣಿಸಬಾರದು ಎಂಬುದು ಅವರ ಸ್ಪಷ್ಟ ನಿಲುವು. ಇಂತಹ ಶಿಸ್ತು ಮತ್ತು ಕಠಿಣ ದುಡಿಮೆ ಹೇಗೆ ಸಾಧ್ಯವಾಯಿತೆಂದು ಕೇಳಿದಾಗ ಅವರು ತಟ್ಟನೆ ಹೇಳಿದ್ದು: ನಾನು 16 ವರುಷ ಮೂರು ತಿಂಗಳು ಆರ್ಮಿಯಲ್ಲಿ ಕೆಲಸ ಮಾಡಿ ಬಂದವನು. ಅಲ್ಲಿ ಮೈಗೂಡಿಸಿಕೊಂಡ ಶಿಸ್ತನ್ನೇ ಕೃಷಿಯಲ್ಲಿ ಮುಂದುವರಿಸಿದ್ದೇನೆ.
ಕೃಷಿಯಲ್ಲಿ ಲಾಭವಿದೆಯೇ? ಎಂಬ ಕೊನೆಯ ಪ್ರಶ್ನೆಗೆ, 19 ವರುಷಗಳಿಂದ ಕೃಷಿಯನ್ನೇ ಬದುಕಾಗಿಸಿರುವ ಶೆಣೈ ಅವರಿತ್ತ ನೇರ ಉತ್ತರ: ಯಾಕಿಲ್ಲ? ಮೈ ಬಗ್ಗಿಸಿ ಕೆಲಸ ಮಾಡಿದರೆ ಕೈತುಂಬ ಆದಾಯವಿದೆ. – ಅಡೂxರು ಕೃಷ್ಣ ರಾವ್