Advertisement

ಉಗ್ರರಿಂದ ನಾಶವಾಗಿದ್ದ ಬಸ್ ನಿಲ್ದಾಣದಲ್ಲಿ‘ಗ್ರಂಥಾಲಯ’: ಮಕ್ಕಳಿಗೆ ಸೇನೆಯ ಕೊಡುಗೆ  

04:27 PM Mar 08, 2021 | Team Udayavani |

ಕಾಶ್ಮೀರ: ಸದಾ ಗುಂಡಿನ ಮೊರೆತ, ಉಗ್ರಗಾಮಿಗಳ ಉಪಟಳದಿಂದ ನಲುಗಿದ್ದ ಜಮ್ಮು ಮತ್ತು ಕಾಶ್ಮೀರದಲ್ಲೀಗ ಬದಲಾವಣೆ ಪರ್ವ ಶುರುವಾಗಿದೆ. ಮನೆ ಬಿಟ್ಟು ಹೊರಗೆ ಬರಲು ಭಯ ಪಡುತ್ತಿದ್ದ ಮಕ್ಕಳೀಗ ನೆಮ್ಮದಿಯಾಗಿ ಶಾಲಾ ಕಾಲೇಜುಗಳಿಗೆ ಓಡಾಡುವಂತಾಗಿದೆ. ಇಲ್ಲಿಯ ಮಕ್ಕಳಿಗೋಸ್ಕರ ಪಾಳು ಬಿದ್ದ ಬಸ್ ನಿಲ್ದಾಣದಲ್ಲೊಂದು ಭವ್ಯವಾದ ಗ್ರಂಥಾಲಯ ನಿರ್ಮಾಣಗೊಂಡಿದೆ.

Advertisement

ದಕ್ಷಿಣ ಕಾಶ್ಮೀರದ ಪುಟ್ಟ ಹಳ್ಳಿಯೊಂದರಲ್ಲೀಗ ಸುಂದರವಾದ ಲೈಬ್ರರಿ ಎದ್ದು ನಿಂತಿದೆ. ಭಾರತೀಯ ಸೇನೆಯ ಕಾಯಕಲ್ಪದಿಂದ ಬೀದಿ ಗ್ರಂಥಾಲಯ ಸಿದ್ಧಗೊಂಡಿದೆ. 2016 ರಲ್ಲಿ ದುಷ್ಕರ್ಮಿಗಳ ಬಾಂಬ್ ದಾಳಿಗೆ ನಾಶಗೊಂಡಿದ್ದ ಬಸ್ ನಿಲ್ದಾಣ ವಿದ್ಯಾರ್ಥಿಗಳಿಗೋಸ್ಕರ ಗ್ರಂಥಾಲಯವಾಗಿ ಮಾರ್ಪಟ್ಟಿದೆ. ಯೋಧರ ಈ ಕಾರ್ಯಕ್ಕೆ ‘ಬುಕ್ಸ್ ಆಫ್ ಇಂಡಿಯಾ’ ಸಂಸ್ಥೆ ಕೂಡ ಕೈ ಜೋಡಿಸಿದೆ.

ಪ್ರತಿ ದಿನ ಮುಂಜಾನೆ ಗ್ರಂಥಾಲಯ ತೆರೆಯಲಿದ್ದು, ರಾತ್ರಿ 8 ಗಂಟೆಯ ವರೆಗೆ ವಿದ್ಯಾರ್ಥಿಗಳು ಅಧ್ಯಯನ ನಡೆಸಬಹುದಾಗಿದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಪಠ್ಯ ಹಾಗೂ ಸಂಶೋಧನೆಗೆ ಪೂರಕವಾಗುವ ಗ್ರಂಥ ಭಂಡಾರ ಇಲ್ಲಿ ನೆಲೆಗೊಂಡಿದೆ. ಸಾರ್ವಜನಿಕರಿಗೂ ಕೂಡ ಪ್ರವೇಶ ನೀಡಲಾಗಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸೇನಾಧಿಕಾರಿಗಳು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗ್ರಂಥಾಲಯ ನಿರ್ಮಿಸಿದ್ದೇವೆ. ಶಾಲಾ ಕಾಲೇಜು ಹೋಗುವ ಮಕ್ಕಳು ಇದರ ಲಾಭ ಪಡೆಯಬೇಕು. ಉತ್ತಮ ಶಿಕ್ಷಣ ಪಡೆದು ಮುಂದೆ ಬರಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next