Advertisement

Arkavathi: 25 ವರ್ಷಗಳ ಅಕ್ರಮ ಸುಪ್ರೀಂ ನ್ಯಾಯಮೂರ್ತಿಯವರಿಂದ ತನಿಖೆಯಾಗಲಿ: ಹರಿಪ್ರಸಾದ್‌

01:32 AM Sep 23, 2024 | Team Udayavani |

ಮಂಗಳೂರು: ಅರ್ಕಾವತಿ ಡಿನೋಟಿಫಿಕೇಶನ್‌ ಕುರಿತು ಯಾರೋ ವಿಚಾರಣೆ ಮಾಡಿದರೆ ಸಾಲದು. 25 ವರ್ಷಗಳಲ್ಲಿ ಏನೇನು ಅಕ್ರಮಗಳಾಗಿವೆ ಎಂಬ ಬಗ್ಗೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ತನಿಖೆ ಆಗಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಪ್ರತಿಕ್ರಿಯಿಸಿದ್ದಾರೆ.

Advertisement

ಮಂಗಳೂರಿನಲ್ಲಿ ರವಿವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯವರಿಂದ ಸಂಪೂರ್ಣ ತನಿಖೆ ನಡೆದರೆ ಯಾವುದೇ ಪಕ್ಷದವರಿರಲಿ, ಎಲ್ಲವೂ ಹೊರಗೆ ಬರಲಿದೆ. ಯಾರೆಲ್ಲ ಎಷ್ಟು ಶುಭ್ರರು ಎಂಬುದು ಬಯಲಿಗೆ ಬರಲಿದೆ ಎಂದು ಹೇಳಿದರು. ಹಿಂದಿನ ಸರಕಾರದಲ್ಲಿ ಏನೇನು ನಡೆದಿದೆ ಎಂಬುದನ್ನು ಬಿಜೆಪಿಯವರು ಕೆದಕಿಕೊಂಡು ಬರುತ್ತಿದ್ದಾರೆ.

ಬೊಫೋರ್ಸ್‌ ಕೇಸ್‌ ಎಂದು 30 ವರ್ಷಗಳಿಂದ ಹೇಳಿಕೊಂಡು ಬಂದರು. ಕೆಲವು ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕೆಲವು ಅಕ್ರಮಗಳನ್ನು ಸಕ್ರಮ ಮಾಡಿಕೊಂಡು ಬಂದಿದೆ. ಯಾವುದೇ ಸರಕಾರ ಇರಲಿ – ಕೂಲಂಕಷ ತನಿಖೆಯಾಗಲು ಸುಪ್ರೀಂಕೋರ್ಟ್‌ ನ್ಯಾಯಾಧೀಶರನ್ನು ನೇಮಕ ಮಾಡಿ ತನಿಖೆ ನಡೆಸಬೇಕು ಎಂದರು.

ಶಾಸಕ ಮುನಿರತ್ನ ಬಂಧನ ಪ್ರಕರಣ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣ ದ್ವೇಷ ರಾಜಕಾರಣವೋ, ಇನ್ನೊಂದೋ ಎಂಬುದು ಬದಿಗಿರಲಿ. ಇವೆಲ್ಲ ಸಾಂಕ್ರಾಮಿಕ ರೋಗದಂತೆ ಬಂದಿರುವುದು ನರೇಂದ್ರ ಮೋದಿ ಅವರಿಂದ. ಗುಜರಾತ್‌ನಲ್ಲಿ ಈ ಹಿಂದೆ ಇಂತಹ ಪ್ರಯೋಗ ನಡೆದಿತ್ತು ಎಂದರು.

ಸಭಿಕರ ಸಾಲಲ್ಲಿ ರಾಜಕಾರಣಿಗಳು!
ಪುರಭವನದಲ್ಲಿ ಎಂ.ಜಿ. ಹೆಗಡೆ ಅವರ ಆತ್ಮಕಥನ ಕೃತಿಯನ್ನು ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಬಿಡುಗಡೆ ಮಾಡಬೇಕಿತ್ತು. ಆದರೆ ಚುನಾವಣ ನೀತಿ ಸಂಹಿತೆ ಕಾರಣದಿಂದ ರಾಜಕಾರಣಿಗಳು ವೇದಿಕೆ ಹತ್ತದೆ ಸಭಿಕರ ಸ್ಥಾನದಲ್ಲೇ ಕೂರುವಂತಾಯಿತು. ಬಿ.ಕೆ. ಹರಿಪ್ರಸಾದ್‌ ಪುರಭವನಕ್ಕೆ ಆಗಮಿಸಿದ್ದರು. ಜತೆಗೆ ಮಾಜಿ ಸಚಿವ ರಮಾನಾಥ ರೈ, ವಿ.ಪರಿಷತ್‌ ಸದಸ್ಯ ಐವನ್‌ ಡಿ’ ಸೋಜಾ, ಮಾಜಿ ಶಾಸಕರಾದ ಜೆ.ಆರ್‌. ಲೋಬೊ, ಶಕುಂತಳಾ ಶೆಟ್ಟಿ ಸಹಿತ ಅನೇಕ ಗಣ್ಯರಿದ್ದರು. ನೀತಿ ಸಂಹಿತೆ ನಿಯಮದಿಂದಾಗಿ ಎಲ್ಲರೂ ಸಭಿಕರ ಸ್ಥಾನದಲ್ಲಿ ಕುಳಿತಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next