Advertisement
ಸಿಬಿಐ ತನಿಖಾ ವರದಿಯನ್ನು ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ಪರಿಶೀಲಿಸಿದೆ. ಘಟನ ಸ್ಥಳದಿಂದ ಸಂತ್ರಸ್ತೆಯ ಒಳ ಉಡುಪಗಳನ್ನು ಮೊದಲಿಗೆ ವಶಪಡಿಸಿಕೊಂಡಿಲ್ಲ. ಹಾಗಾಗಿ ಯಾವ ದಿನಾಂಕದಲ್ಲಿ ಅವುಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂಬುದು ದೃಢಪಟ್ಟಿಲ್ಲ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಈ ಬಗ್ಗೆ ನ್ಯಾಯಪೀಠ ಆತಂಕ ವ್ಯಕ್ತಪಡಿಸಿ, ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆಯೇ ಎಂಬ ಆಯಾಮವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಅದಕ್ಕೆ ಅಗತ್ಯ ಸಮಯವನ್ನು ನೀಡಬೇಕಿದೆ ಎಂದು ನ್ಯಾಯಪೀಠ ಹೇಳಿದೆ.
Related Articles
Advertisement
ಟ್ರೈನಿ ವೈದ್ಯೆ ಕೇಸಿನಲ್ಲಿ ಪ.ಬಂಗಾಲ ಸರಕಾರವನ್ನು ಪ್ರತಿನಿಧಿಸುವ ಮಹಿಳಾ ವಕೀಲರಿಗೆ ಆ್ಯಸಿಡ್ ದಾಳಿಯಂಥ ಬೆದರಿಕೆಗಳು ಬರುತ್ತಿವೆ. ಹಾಗಾಗಿ ವಿಚಾರಣೆಯ ನೇರ ಪ್ರಸಾರ ಮಾಡಬಾರದು ಎಂದು ವಕೀಲ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಆದರೆ ಸಿಜೆಐ ತಡೆ ನೀಡಲು ನಿರಾಕರಿಸಿದ್ದು, ನೇರಪ್ರಸಾರ ಸಾರ್ವಜನಿಕ ಹಿತಾಸಕ್ತಿಗಾಗಿ ಮಾಡುತ್ತಿರುವುದು. ವಕೀಲರಿಗೆ ಬೆದರಿಕೆ ಬಂದರೆ ನಾವು ಮಧ್ಯಪ್ರವೇಶಿಸುತ್ತೇವೆ. ಆದರೆ ನೇರಪ್ರಸಾರಕ್ಕೆ ತಡೆ ನೀಡಲ್ಲ ಎಂದಿದ್ದಾರೆ.