Advertisement

“CM ರೇಸ್‌ನಲ್ಲಿ ನಾನಿಲ್ಲ’: ಬಿ.ಕೆ. ಹರಿಪ್ರಸಾದ್‌

12:22 AM Sep 04, 2024 | Team Udayavani |

ಮಂಗಳೂರು: ನಾನು ಸಿಎಂ ಸ್ಥಾನದ ರೇಸ್‌ನಲ್ಲಿಲ್ಲ. ರೇಸ್‌ನಲ್ಲಿ ಓಡಲು ನಾನು ಕುದುರೆಯೂ ಅಲ್ಲ, ಕತ್ತೆಯೂ ಅಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಹೇಳಿದರು.

Advertisement

ರಾಜ್ಯದಲ್ಲಿ ಸಿಎಂ ಸ್ಥಾನದ ಆಕಾಂಕ್ಷಿ ಎಂಬ ಸಚಿವರು, ಶಾಸಕರ ಬಹಿರಂಗ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ನಾಯಕರು ಇದಕ್ಕೆ ಉತ್ತರ ಕೊಟ್ಟಿದ್ದಾರೆ. ಆದರೆ ಅದೆಲ್ಲ ಎಐಸಿಸಿಯ ತೀರ್ಮಾನ. ಸಿದ್ದರಾಮಯ್ಯ ಅವರ ಪ್ರಕರಣ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು. ಪ್ರಕರಣದ ಸಂಪೂರ್ಣ ತೀರ್ಪು ಬರುತ್ತದೋ? ಇಲ್ಲವೋ ಎಂಬುದು ಗೊತ್ತಿಲ್ಲ. ಇದು ಕಾನೂನಿನ ಹೋರಾಟ. ಇದರಲ್ಲಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ಗೆಲುವು ಖಚಿತ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ನ 135 ಜನ ಶಾಸಕರಿದ್ದಾರೆ. ಇಂಗ್ಲಿಷ್‌ನಲ್ಲಿ “ಒನ್‌ ಅಮಾಂಗ್‌ ಈಕ್ವಲ್‌’ ಅಂತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರವರ ಅನಿಸಿಕೆಗಳು ಆಸೆ ಆಕಾಂಕ್ಷಿಗಳನ್ನು ಹೇಳಿಕೊಳ್ಳಲು ಅವಕಾಶವಿದ್ದು ಅದನ್ನು ವ್ಯಕ್ತಪಡಿಸಿದ್ದಾರೆ ಎಂದರು.

ಕೋವಿಡ್‌ ವೇಳೆ ತಪ್ಪು ನಡೆದಿದ್ದಲ್ಲಿ ಶಿಕ್ಷೆ ಅನುಭವಿಸಿ: ಬಿಜೆಪಿ ಸರಕಾರದ ಸಂದರ್ಭ ನಡೆದಿದೆ ಎನ್ನಲಾದ ಕೋವಿಡ್‌ ಹಗರಣದ ಕುರಿತ ತನಿಖಾ ವರದಿ ಸಲ್ಲಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್‌ ಸಂದರ್ಭ ಡಾ| ಸುಧಾಕರ್‌ ಆರೋಗ್ಯ ಸಚಿವರಾಗಿದ್ದರು. ಈ ಸಂದರ್ಭ ರಾಜ್ಯದಲ್ಲಿ 4 ಲಕ್ಷ ಜನ ಪ್ರಾಣ ಕಳೆದುಕೊಂಡಿದ್ದಾರೆ. ವ್ಯಾಕ್ಸಿನ್‌ ಅವ್ಯವಸ್ಥೆ ಯಾವ ರೀತಿ ಆಗಿತ್ತು ಅನ್ನುವುದನ್ನು ಎಲ್ಲರೂ ನೋಡಿದ್ದಾರೆ. ಆದ್ದರಿಂದ ಅವರು ಅದರ ಬಗ್ಗೆ ಮಾತನಾಡದೆ ಇರುವುದು ಒಳ್ಳೆಯದು. ವರದಿ ಬಂದಿದೆ ಅದರ ಮೂಲಕ ಸತ್ಯ ಏನಿದೆ ಅದು ಹೊರ ಬರಲಿ. ತಪ್ಪು ನಡೆದಿದ್ದರೆ ಶಿಕ್ಷೆ ಅನುಭವಿಸಲು ತಯಾರಾಗಿರಿ ಎಂದರು.

Advertisement

Udayavani is now on Telegram. Click here to join our channel and stay updated with the latest news.