Advertisement

ಮಾಸ್‌-ಕ್ಲಾಸ್‌ಗೆ ಒಪ್ಪುವ ಹೂರಣ: ಪ್ರಜ್ವಲ್ ದೇವರಾಜ್ ರ ‘ಅರ್ಜುನ್ ಗೌಡ’ ಟ್ರೇಲರ್

12:29 PM Apr 14, 2021 | Team Udayavani |

“ನಾನು ರಾಮನ ಥರ ಸಹನೆಯಿಂದ ಇರಲ್ಲ, ಕೃಷ್ಣನ ಥರ ಉಪದೇಶನೂ ಮಾಡಲ್ಲ. ನಾನು ಪಕ್ಕಾ ಕ್ಲಾಸ್‌ – ಮಾಸ್‌ ಪವರ್‌ಫ‌ುಲ್‌ ಗೌಡ, ಅರ್ಜುನ್‌ ಗೌಡ’ ಇಂಥದ್ದೊಂದು ಖಡಕ್‌ ಡೈಲಾಗ್‌ನೊಂದಿಗೆ ಕ್ಲಾಸ್‌-ಮಾಸ್‌ ಆಡಿಯನ್ಸ್‌ ಮುಂದೆ “ಅರ್ಜುನ್‌ ಗೌಡ’ನ ಗೆಟಪ್‌ನಲ್ಲಿ ಟ್ರೇಲರ್‌ನಲ್ಲಿ ಈ ವಾರ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ

Advertisement

ನಟ ಪ್ರಜ್ವಲ್‌ ದೇವರಾಜ್‌. “ಇನ್ಸಪೆಕ್ಟರ್  ವಿಕ್ರಂ’ ಚಿತ್ರದ ಸಕ್ಸಸ್‌ ನಂತರ ಪ್ರಜ್ವಲ್‌ ದೇವರಾಜ್‌ ಅಭಿನಯದ “ಅರ್ಜುನ್‌ ಗೌಡ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದು, “ಅರ್ಜುನ್‌ ಗೌಡ’ನ ಫ‌ಸ್ಟ್‌ ಟ್ರೇಲರ್‌ ಇದಾಗಿದೆ.

ಇದನ್ನೂ ಓದಿ:ವೀಲ್‌ಚೇರ್‌ನಲ್ಲಿ ಒಂದು ವಿಭಿನ್ನ ಪ್ರೇಮಕಥೆ

ಇನ್ನು “ಅರ್ಜುನ್‌ ಗೌಡ’ ಟ್ರೇಲರ್‌ನಲ್ಲಿ ಆ್ಯಕ್ಷನ್‌, ಲವ್‌, ರೊಮ್ಯಾನ್ಸ್‌, ಸೆಂಟಿಮೆಂಟ್‌, ಕಾಮಿಡಿ ಹೀಗೆ ಎಲ್ಲ ಎಂಟರ್‌ಟೈನ್ಮೆಂಟ್‌ ಎಲಿಮೆಂಟ್ಸ್‌ಗಳ ಮಿಶ್ರಣವಿದ್ದು, ಟ್ರೇಲರ್‌ನಲ್ಲೇ ಹೇಳಿರುವಂತೆ, ಕ್ಲಾಸ್‌-ಮಾಸ್‌ ಎರಡನೂ ಆಕರ್ಷಿಸುವಂತಹ ಅಂಶಗಳನ್ನು ಟ್ರೇಲರ್ ಝಲಕ್‌ನಲ್ಲಿ ತೋರಿಸಲಾಗಿದೆ.

“ಅರ್ಜುನ್‌ ಗೌಡ’ನ ಛಾಯಾಗ್ರಹಣ, ಸಂಕಲನ ಕಾರ್ಯ, ಹಿನ್ನೆಲೆ ಸಂಗೀತ ಟ್ರೇಲರ್‌ನಲ್ಲಿ ಗಮನ ಸೆಳೆಯುತ್ತದೆ. ಅದ್ಧೂರಿ ಲೊಕೇಶನ್‌ಗಳು ನೋಡುಗರನ್ನು ಆಕರ್ಷಿಸುವಂತಿದೆ. ಹೆಲಿಕ್ಯಾಪ್ಟರ್‌, ಬೋಟ್‌ ಚೇಸಿಂಗ್‌, ಬೈಕ್‌ ರೇಸಿಂಗ್‌, ಮಸ್ತ್ ಆ್ಯಕ್ಷನ್‌ ಸೀನ್‌ಗಳು, ಆ್ಯಕ್ಷನ್‌ ಪ್ರಿಯರಿಗೆ ಇಷ್ಟವಾಗುವಂತಿದೆ.

Advertisement

ಪ್ರಜ್ವಲ್‌ ದೇವರಾಜ್‌ ಜೊತೆಗೆ ಪ್ರಿಯಾಂಕಾ ತಿಮ್ಮೇಶ್‌, ಸ್ಪರ್ಶ ರೇಖಾ, ಸಾಧುಕೋಕಿಲ, ದಿನೇಶ್‌ ಮಂಗಳೂರ್‌, ರಾಜ್‌ ದೀಪಕ್‌ ಶೆಟ್ಟಿ, ರಾಹುಲ್‌ ದೇವ್‌ ಹೀಗೆ ದೊಡ್ಡ ಕಲಾವಿದರ ತಾರಾಗಣ ಚಿತ್ರದ ಟ್ರೇಲರ್‌ನಲ್ಲಿ ಕಾಣುತ್ತಿದೆ. “ರಾಮು ಫಿಲಂಸ್‌’ ಬ್ಯಾನರ್‌ನಲ್ಲಿ ರಾಮು ನಿರ್ಮಾಣದಲ್ಲಿ ಮೂಡಿಬಂದಿರುವ “ಅರ್ಜುನ್‌ ಗೌಡ’ ಚಿತ್ರಕ್ಕೆ ಶಂಕರ್‌ ನಿರ್ದೇಶನವಿದೆ.

Advertisement

Udayavani is now on Telegram. Click here to join our channel and stay updated with the latest news.

Next