ಮುಂಬಯಿ: ಅರ್ಜಿತ್ ಸಿಂಗ್ ಬಾಲಿವುಡ್ ಖ್ಯಾತ ಗಾಯಕರಲ್ಲಿ ಒಬ್ಬರು. ಅರ್ಜಿತ್ ಭಾರತದೆಲ್ಲೆಡೆ ಮ್ಯೂಸಿಕ್ ಕಾನ್ಸರ್ಟ್ ಗಳನ್ನು ನೀಡುತ್ತಾರೆ. ಅವರ ಸಂಗೀತವನ್ನು ಕೇಳಲು ಅಪಾರ ಜನ ಸೇರುತ್ತಾರೆ. ಆದರೆ ಇತ್ತೀಚೆಗೆ ಅವರ ಮ್ಯೂಸಿಕ್ ಕಾನ್ಸರ್ಟ್ ಒಂದಕ್ಕೆ ಇಟ್ಟಿರುವ ಟಿಕೆಟ್ ಬೆಲೆ ನೆಟ್ಟಿಗರಿಗೆ ಟ್ರೋಲ್ ಗೆ ದಾರಿ ಮಾಡಿಕೊಟ್ಟಿದೆ.
ಬಾಲಿವುಡ್ ನಲ್ಲಿ ಲವ್ & ಬ್ರೇಕಪ್ ಹಾಡುಗಳನ್ನು ಹಾಡುತ್ತಲೇ ಜನಪ್ರಿಯರಾಗಿರುವ ಅರ್ಜಿತ್ ಸಿಂಗ್ ಬಹುಬೇಡಿಕೆಯ ಗಾಯಕ. ಎಷ್ಟೋ ಬಾರಿ ನಮ್ಮ ಭಾವನೆಗಳು ಅರ್ಜಿತ್ ಅವರ ಹಾಡುಗಳಿಗೆ ಹೊಂದಿಕೆಯಾಗುತ್ತದೆ. ಲಕ್ಷಾಂತರ ಕೇಳುಗರನ್ನು ಹೊಂದಿರುವ ಅರ್ಜಿತ್ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಷಯಕ್ಕೆ ಟ್ರೋಲ್ ಆಗುತ್ತಿದ್ದಾರೆ.
2023 ರ ಜನವರಿಯಲ್ಲಿ ಪುಣೆಯಲ್ಲಿ ಅರ್ಜಿತ್ ಅವರ ಮ್ಯೂಸಿಕ್ ಕಾನ್ಸರ್ಟ್ ಇದೆ. ಈ ಕಾರ್ಯಕ್ರಮಕ್ಕೆ ಈಗಾಗಲೇ ಬುಕಿಂಗ್ ಕೂಡ ಆರಂಭವಾಗಿದೆ. ಪೇಟಿಎಂ ಇನ್ಸೈಡರ್ ನಲ್ಲಿ ಕಾರ್ಯಕ್ರಮದ ಟಿಕೆಟನ್ನು ಮುಗಂಡವಾಗಿ ಬುಕ್ ಮಾಡಬಹುದು. 999 ರೂ.ನಿಂದ ಒಂದು ಟಿಕೆಟ್ ಬುಕ್ ಬೆಲೆ ಆರಂಭವಾಗುತ್ತದೆ. ಬೇರೆ ಬೇರೆ ಸ್ಟ್ಯಾಂಡ್ ನಲ್ಲಿ ಕೂರಲು ಟಿಕೆಟ್ ಬೆಲೆಯನ್ನು ನಿಗದಿ ಪಡಿಸಲಾಗಿದೆ.
ಸಿಲ್ವರ್ ಸ್ಟ್ಯಾಂಡ್ ನಲ್ಲಿ ಕುಳಿತುಕೊಳ್ಳಲು ಒಬ್ಬರಿಗೆ 1999 ರೂ.ಗೆ ಟಿಕೆಟ್ ಸಿಗುತ್ತದೆ. ಗೋಲ್ಡ್ ಸ್ಟ್ಯಾಂಡ್ ಒಬ್ಬರಿಗೆ 3999 ರೂ. ಪ್ಲ್ಯಾಟಿನಂನಲ್ಲಿ ಬಲಬದಿ ಹಾಗೂ ಎಡಬದಿ ಕೂರಲು 4999 ರೂ. ಟಿಕೆಟ್ ಬೆಲೆಯಿದೆ. ಡೈಮಂಡ್ ಸ್ಟ್ಯಾಂಡ್ ನಲ್ಲಿ ಬಲಬದಿ ಹಾಗೂ ಎಡಬದಿ ಕೂರಲು 8999 ರೂ. ಟಿಕೆಟ್ ಬೆಲೆಯಿದೆ.
Related Articles
ವೇದಿಕೆ ತೀರ ಹತ್ತಿರ ಕುಳಿತುಕೊಳ್ಳುವ ವ್ಯಕ್ತಿ ಅಂದರೆ ಪಿಎಲ್ 1 ಸ್ಟ್ಯಾಂಡ್ ನಲ್ಲಿ ಕೂರಲು ಒಬ್ಬ ವ್ಯಕ್ತಿಗೆ ಬರೋಬ್ಬರಿ 16 ಲಕ್ಷ ರೂ. ಟಿಕೆಟ್ ಬೆಲೆಯನ್ನು ನಿಗದಿಪಡಿಸಲಾಗಿದೆ. ಇದೇ ವಿಚಾರಕ್ಕೆ ಅರ್ಜಿತ್ ಸಿಂಗ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.
ವಿಶೇಷವಾಗಿ ಅಂದರೆ ದುಬಾರಿ ಟಿಕೆಟ್ ಗಳನ್ನು ಬುಕ್ ಮಾಡಿದ ವ್ಯಕ್ತಿಗಳಿಗೆ ವಿಶ್ರಾಂತಿ ಕೋಣೆ ಹಾಗೂ ರಿಫ್ರೆಶ್ ಮೆಂಟ್, ಪಾನೀಯಗಳ ವ್ಯವಸ್ಥೆಯೂವಿರುತ್ತದೆ. ಆದರೆ ಇದೆಲ್ಲವನ್ನು ಬದಿಗಿಟ್ಟು ಅರ್ಜಿತ್ ಅವರ ಅಭಿಮಾನಿಗಳೇ ಟಿಕೆಟ್ ಬೆಲೆಗೆ ಟ್ರೋಲ್ ಮಾಡುತ್ತಿದ್ದಾರೆ.
ಟ್ವಟರ್ ಬಳಕೆದಾರರೊಬ್ಬರು “ನಾನು ಅರ್ಜಿತ್ ಅವರನ್ನು ಇಷ್ಟಪಡುತ್ತೇನೆ. ಆದರೆ ಇಷ್ಟು ಖರ್ಚನ್ನು ಖಂಡಿತ ಮಾಡಲಾರೆ“ ಎಂದಿದ್ದಾರೆ. ಮತ್ತೊಬ್ಬರು ನನ್ನದು ಸ್ಪಾಟಿಫೈ ಖಾತೆ ಕೂಡ ಫ್ರೀಯಾಗಿ ನಡೆಯುತ್ತದೆ. ಒಂದು ಜಾಹೀರಾತು ಬಳಿಕ ಮತ್ತೆ ಹಾಡು ಕೇಳುತ್ತದೆ ಎಂದಿದ್ದಾರೆ. “16 ಲಕ್ಷ ರೂ.ನಲ್ಲಿ ಅರ್ಜಿತ್ ಶೋಬಳಿಕ ನನ್ನ ಮನೆಗೆ ಬಂದು ನನ್ನನು ನಿದ್ರೆ ಮಾಡಿಸಲು ಕರೆದುಕೊಂಡು ಹೋಗಿ ಹಾಡುತ್ತಾ ಒಳ್ಳೆಯ ನಿದ್ರೆ ಮಾಡಿಸಬಹುದು ಎಂದಿದ್ದಾರೆ. 16 ಲಕ್ಷ ರೂ. ಕೊಟ್ಟರೆ ಅರ್ಜಿತ್ ಮಡಿಲಲ್ಲಿ ಕೂರಿಸಿ ಹಾಡು ಹಾಡುತ್ತಾರ? ಎಂದು ತಮಾಷೆ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಅಮೆರಿಕಾದ ಗಾಯಕಿ ಟೇಲರ್ ಸ್ವಿಫ್ಟ್ ಕಾನ್ಸರ್ಟ್ ವೊಂದರ ಟಿಕೆಟ್ ನ್ನು 22 ಲಕ್ಷಕ್ಕೆ ನಿಗದಿಪಡಿಸಿ ಟ್ರೋಲ್ ಗೆ ಒಳಗಾಗಿದ್ದರು.