Advertisement

North East Delhi ಕ್ಷೇತ್ರದಲ್ಲಿ ಕನ್ಹಯ್ಯ ಕುಮಾರ್‌ಗೆ ಕಾಂಗ್ರೆಸ್‌ ಟಿಕೆಟ್‌

12:27 AM Apr 15, 2024 | Team Udayavani |

ಹೊಸದಿಲ್ಲಿ: ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕ ಕನ್ಹಯ್ಯ ಕುಮಾರ್‌ ಅವರನ್ನು ಈಶಾನ್ಯ ದಿಲ್ಲಿ ಕ್ಷೇತ್ರದಿಂದ ಕಾಂಗ್ರೆಸ್‌ ಕಣಕ್ಕಿಳಿಸಿದೆ. ಅವರು ಚುನಾವಣೆಯಲ್ಲಿ ಬಿಜೆಪಿಯ ಮನೋಜ್‌ ತಿವಾರಿಯನ್ನು ಎದುರಿಸಲಿ ದ್ದಾರೆ. ಕಳೆದ ಚುನಾವಣೆಯಲ್ಲಿ ಕನ್ಹಯ್ಯಕುಮಾರ್‌ ಸಿಪಿಐನಿಂದ ಬಿಹಾರದ ಬೇಗುಸರಾಯ್‌ ಕ್ಷೇತ್ರದಿಂದ ಸ್ಪರ್ಧಿಸಿ, ಬಿಜೆಪಿ ಎದುರು ಸೋತಿದ್ದರು. ಚಾಂದನಿ ಚೌಕ್‌ನಿಂದ ಜೈ ಪ್ರಕಾಶ್‌ ಅಗರ್ವಾಲ್‌, ವಾಯವ್ಯ ದಿಲ್ಲಿ ಕ್ಷೇತ್ರದಿಂದ ಉದಿತ್‌ ರಾಜ್‌ ಅವ ರನ್ನು ಕಾಂಗ್ರೆಸ್‌ ಕಣಕ್ಕಿಸಿದೆ. ದಿಲ್ಲಿಯ 7 ಲೋಕಸಭಾ ಕ್ಷೇತ್ರಗಳ ಪೈಕಿ 3 ಕ್ಷೇತ್ರದಲ್ಲಿ ಕಾಂಗ್ರೆಸ್‌ ಸ್ಪರ್ಧಿಸುತ್ತಿದ್ದು, ಇನ್ನುಳಿದ 4 ಕ್ಷೇತ್ರಗಳಲ್ಲಿ ಆಪ್‌ ಸ್ಪರ್ಧಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next