Advertisement

Model: ಪ್ಲಾಸ್ಟಿಕ್ ಸರ್ಜರಿ ಒಳಗಾಗಿ ಅನಾರೋಗ್ಯ: 79 ದಿನಗಳ ನರಳಾಟದ ಬಳಿಕ ಖ್ಯಾತ ನಟಿ ಮೃತ್ಯು

05:27 PM Sep 02, 2023 | Team Udayavani |

ಬ್ಯೂನಸ್ ಐರಿಸ್: ಪ್ಲಾಸ್ಟಿಕ್ ಸರ್ಜರಿ ಒಳಗಾಗಿದ್ದ ಖ್ಯಾತ ನಟಿ, ರೂಪದರ್ಶಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅರ್ಜೆಂಟೀನಾದ ನಟಿ, ರೂಪದರ್ಶಿ ಮತ್ತು ಟಿವಿ ನಿರೂಪಕಿ ಸಿಲ್ವಿನಾ ಲೂನಾ (43) ಪ್ಲ್ಯಾಸ್ಟಿಕ್ ಸರ್ಜರಿಯಿಂದ ಉಂಟಾದ ಅಡ್ಡ ಪರಿಣಾಮದಿಂದ ಇಹಲೋಕ ತ್ಯಜಿಸಿದ್ದಾರೆ.

Advertisement

ಘಟನೆ ಹಿನ್ನೆಲೆ: 2011 ರಲ್ಲಿ ಸಿಲ್ವಿನಾ ಬ್ಯಾಕ್ ಸರ್ಜರಿ (ಬಟ್ ಲಿಫ್ಟ್) ಸರ್ಜರಿಗೆ ಒಳಗಾಗಿದ್ದರು. ಇದಾದ ಬಳಿಕ ಅವರಿಗೆ ಕಿಡ್ನಿಯಲ್ಲಿ ಸಮಸ್ಯೆ ‌ಕಾಣಿಸಿಕೊಂಡಿತ್ತು.‌ಇದರಿಂದ ಅವರು ಅನಾರೋಗ್ಯಕ್ಕೆ‌ ಒಳಗಾಗಿದ್ದರು. 2015 ರಿಂದ ಅವರಿಗೆ ವಾರಕ್ಕೊಮ್ಮೆ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿತ್ತು.

ಹೈಪರ್‌ಕಾಲ್ಸೆಮಿಯಾದಿಂದ ಬಳಲುತ್ತಿದ್ದ ಅವರು ಇದೇ ವರ್ಷದ ಜೂನ್ ನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ‌ಪಡೆಯುತ್ತಿದ್ದರು. ಒಟ್ಟು 79 ದಿನಗಳು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿ ತಿಳಿಸಿದೆ.

ಆದರೆ ಇತ್ತೀಚೆಗೆ ಅವರ ಆರೋಗ್ಯ ಹದಗೆಟ್ಟಿದ್ದು, ವೆಂಟಿಲೇಟರ್ ಸಪೋರ್ಟ್ ನಲ್ಲಿ ಅವರನ್ನು ಇರಿಸಲಾಗಿತ್ತು. ಅವರ ಕುಟುಂಬದವರ ಸೂಚನೆಯಂತೆ ಅವರ ವೆಂಟಿಲೇಟರ್ ಬೆಂಬಲವನ್ನು ಆಗಸ್ಟ್ 31 ರಂದು ತೆಗೆಯಲಾಗಿದೆ.

ಅರ್ಜೆಂಟೀನಾದ ನ್ಯಾಷನಲ್ ಅಡ್ಮಿನಿಸ್ಟ್ರೇಷನ್ ಆಫ್ ಡ್ರಗ್ಸ್, ಫುಡ್ ಅಂಡ್ ಮೆಡಿಕಲ್ ಟೆಕ್ನಾಲಜಿಯಿಂದ ನಿಷೇಧಿಸಲ್ಪಟ್ಟಿರುವ ಪಾಲಿಮಿಥೈಲ್‌ಮೆಥಾಕ್ರಿಲೇಟ್ ಎಂಬ ಚುಚ್ಚು ಮದ್ದನ್ನು ಸರ್ಜರಿಉ ಸಮಯದಲ್ಲಿ ನಟಿಗೆ‌ ನೀಡಲಾಗಿತ್ತು. ಈ ಕಾರಣದಿಂದ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು ಎಂದು ವರದಿ ತಿಳಿಸಿದೆ.

Advertisement

ಮಿಯಾಮಿಯ ಜಾಕಿ ಗ್ಲೀಸನ್ ಥಿಯೇಟರ್‌ನಲ್ಲಿ 2004 ರ ಎಂಟಿವಿ ವಿಡಿಯೋ ಮ್ಯೂಸಿಕ್ ಅವಾರ್ಡ್ಸ್ ಕಾಣಿಸಿಕೊಂಡಿದ್ದರು. ‘ಎಲ್ ವಗೊನೆಟಾ ಎನ್ ಎಲ್ ಮುಂಡೋ ಡೆಲ್ ಸಿನೆ’, ‘ಸಿನ್ಕ್ರೋನಿಯಾ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next