Advertisement

ಆರ್ಜೆಂಟೀನಾ ಓಪನ್‌: ಥೀಮ್‌ ಮುನ್ನಡೆ, ಫೆರರ್‌ ಔಟ್‌

12:30 AM Feb 16, 2019 | Team Udayavani |

ಬ್ಯೂನಸ್‌ ಐರೆಸ್‌: ಆರ್ಜೆಂಟೀನಾ ಓಪನ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಅಗ್ರ ಶ್ರೇಯಾಂಕದ ಆಸ್ಟ್ರಿಯನ್‌ ಆಟಗಾರ ಡೊಮಿನಿಕ್‌ ಥೀಮ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಆದರೆ ಸ್ಪೇನಿನ ಡೇವಿಡ್‌ ಫೆರರ್‌ ಪರಾಭವಗೊಂಡಿದ್ದಾರೆ. ಹಾಲಿ ಚಾಂಪಿಯನ್‌ ಕೂಡ ಆಗಿರುವ ಡೊಮಿನಿಕ್‌ ಥೀಮ್‌ ಜರ್ಮನಿಯ ಮಾಕ್ಸಿಮಿಲಿಯನ್‌ ಮಾರ್ಟರರ್‌ ಅವರನ್ನು 6-4, 6-4 ಅಂತರದಿಂದ ಪರಾಭವಗೊಳಿಸಿದರು. ಇವರ ಮುಂದಿನ ಎದುರಾಳಿ ಉರುಗ್ವೆಯ ಪಾಬ್ಲೊ ಕ್ಯುವಾಸ್‌. ದಿನದ ಇನ್ನೊಂದು ಪಂದ್ಯದಲ್ಲಿ ಕ್ಯುವಾಸ್‌ ಪೋರ್ಚುಗಲ್‌ನ ಜೋ ಸೂಸ ಅವರನ್ನು 6-4, 7-5ರಿಂದ ಹಿಮ್ಮೆಟ್ಟಿಸಿದರು.

Advertisement

ಡೇವಿಡ್‌ ಫೆರರ್‌ ಅವರನ್ನು ಸ್ಪೇನಿನವರೇ ಆದ ಆಲ್ಬರ್ಟ್‌ ರಮೋಸ್‌ ವಿನೋಲಸ್‌ 3-6, 7-6 (9), 6-3 ಅಂತರದಿಂದ ಸೋಲಿಸಿದರು. ತವರಿನ 4ನೇ ಶ್ರೇಯಾಂಕದ ಆಟಗಾರ ಡೀಗೊ ಶ್ವಾರ್ಟ್ಸ್ಮನ್‌ ಸ್ಲೊವೇನಿಯಾದ ಅಲ್ಜಾಜ್‌ ಬೆಡೇನ್‌ ವಿರುದ್ಧ 6-4, 2-6, 6-2 ಅಂತರದ ಜಯ ಸಾಧಿಸಿದರು. 36ರ ಹರೆಯದ ಡೇವಿಡ್‌ ಫೆರರ್‌ ಈಗಾಗಲೇ ನಿವೃತ್ತಿಯ ಮುನ್ಸೂಚನೆ ನೀಡಿದ್ದು, ಮೇ ತಿಂಗಳಲ್ಲಿ ನಡೆಯುವ ಮ್ಯಾಡ್ರಿಡ್‌ ಓಪನ್‌ ಟೂರ್ನಿಯಲ್ಲಿ ಕೊನೆಯ ಸಲ ಕಾಣಿಸಿಕೊಳ್ಳಲಿದ್ದೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next