Advertisement

ಉಗ್ರರಿಗೆ ಅಂಕುಶವೇಕೆ ಹಾಕುತ್ತಿಲ್ಲ?

07:05 AM Sep 15, 2017 | Team Udayavani |

ಗಾಂಧಿನಗರ: ಬುಲೆಟ್‌ ಟ್ರೇನ್‌ ಅಡಿಗಲ್ಲು ಕಾರ್ಯಕ್ರಮಕ್ಕೆ ಆಗಮಿಸಿರುವ ಜಪಾನ್‌ ಪ್ರಧಾನಿ ಶಿಂಜೋ ಅಬೆ ಮತ್ತು ಪ್ರಧಾನಿ ನರೇಂದ್ರ ಮೋದಿ ರಕ್ಷಣೆ, ವ್ಯಾಪಾರ, ವಿಜ್ಞಾನ ಸೇರಿದಂತೆ ಮಹತ್ವದ 15 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ಅಹಮದಾಬಾದ್‌ನಲ್ಲಿ ಬುಲೆಟ್‌ ಟ್ರೇನ್‌ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ, ಗಾಂಧಿನಗರಕ್ಕೆ ಆಗಮಿಸಿದ ಈ ಇಬ್ಬರು ನಾಯಕರು ದ್ವಿಪಕ್ಷೀಯ ಸಂಬಂಧ ಕುರಿತಂತೆ ಮಾತುಕತೆ ನಡೆಸಿದರು. ಶಿಂಜೋ ಅಬೆ ಮತ್ತು ನರೇಂದ್ರ ಮೋದಿ ಅವರು ಮಾತುಕತೆ ವೇಳೆ ಪ್ರಮುಖವಾಗಿ ಭದ್ರತೆ, ವ್ಯಾಪಾರ ಹಾಗೂ ಅಣು ಒಪ್ಪಂದ ಸೇರಿದಂತೆ ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. 

Advertisement

ಇಂಡೋ-ಫೆಸಿಫಿಕ್‌ ಪ್ರದೇಶದಲ್ಲಿ ಚೀನಾದ ಹಿಡಿತ ಹೆಚ್ಚಾಗುತ್ತಿರುವಂತೆಯೇ ಭಾರತ ಮತ್ತು ಜಪಾನ್‌ ದೇಶಗಳು ತನ್ನ ವ್ಯೂಹಾತ್ಮಕ ಸಂಬಂಧವನ್ನು ಇನ್ನಷ್ಟು ಸದೃಢಗೊಳಿಸಲು ಮುಂದಾಗಿವೆ. ಶೇಷವೆಂದರೆ, ಭಾರತ ಮತ್ತು ಚೀನಾ ನಡುವೆ ಹೇಗೆ ವೈಮನಸ್ಸಿದೆಯೋ ಹಾಗೆಯೇ ಜಪಾನ್‌ ಮತ್ತು ಚೀನಾ ನಡುವೆಯೂ ಮುಸುಕಿನ ಯುದ್ಧ ನಡೆಯುತ್ತಲೇ ಇದೆ. ಹೀಗಾಗಿ ಭಾರತ ಮತ್ತು ಜಪಾನ್‌ಗೆ ಈ ದ್ವಿಪಕ್ಷೀಯ ಸಂಬಂಧ ಮಹತ್ವದ್ದಾಗಿದೆ.

ಜಪಾನ್‌ ಪ್ರಧಾನಿ ಶಿಂಜೋ ಅಬೆ ಅವರು ಬುಲೆಟ್‌ ಟ್ರೇನ್‌ಗೆ ಅಡಿಗಲ್ಲು ಹಾಕುವ ದಿಸೆಯಿಂದ ಬಂದಿದ್ದಾರೆ ಎಂದು ಹೇಳುವುದಾದರೂ, ಇದರ ಹಿಂದೆ ಭಾರತ-ಜಪಾನ್‌-ಅಮೆರಿಕ ನಡುವಿನ ಸಂಬಂಧವನ್ನು ಏರುಗತಿಯಲ್ಲಿ ತೆಗೆದುಕೊಂಡು ಹೋಗುವ ಇರಾದೆ ಇದೆ. ಇತ್ತೀಚೆಗಷ್ಟೇ ಈ ಮೂರು ದೇಶಗಳು ಮಲಬಾರ್‌ ಹೆಸರಲ್ಲಿ ನೌಕಾ ಪಡೆಗಳು ಜಂಟಿ ಸಮರಾಭ್ಯಾಸ ನಡೆಸಿದ್ದವು. ಇದು ಚೀನಾದ ಕಣ್ಣು ಕುಕ್ಕಿತ್ತು. ಇದೀಗ ಭಾರತ ಮತ್ತು ಜಪಾನ್‌ 15 ಒಪ್ಪಂದಗಳಿಗೆ ಸಹಿ ಹಾಕುತ್ತಿದ್ದಂತೆ, ಚೀನಾದ ಸರ್ಕಾರಿ ಪ್ರಾಯೋಜಿತ ಪತ್ರಿಕೆಗಳು ಈ ಎರಡೂ ದೇಶಗಳ ವಿರುದ್ಧ ಮಾತಿನ ಸಮರ ಸಾರಿವೆ.

ಉಗ್ರರ ವಿರುದ್ಧ ಜಂಟಿ ಸಮರ: ಭಾರತವನ್ನು ಕಾಡುತ್ತಿರುವ ಪಾಕಿಸ್ತಾನ ಪ್ರಾಯೋಜಿತ ಉಗ್ರರ ಉಪಟಳವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ 2008ರ ಮುಂಬೈ ದಾಳಿ ಹಾಗೂ ಕಳೆದ ವರ್ಷದ ಪಠಾಣ್‌ಕೋs… ದಾಳಿಗೆ ಕಾರಣರಾದವರನ್ನು ಶಿಕ್ಷಿಸಲು ಪಾಕಿಸ್ತಾನಕ್ಕೆ ತಾಕೀತು ಮಾಡಲಾಗಿದೆ. ಅಲ್ಲದೆ ಅಲ್ಲಿನ ಅಲ್‌ಖೈದಾ, ಜೈಷೆ ಎ ಮೊಹಮದ್‌ ಮತ್ತು ಲಷ್ಕರ್‌ ಎ ತೊಯ್ಬಾ ವಿರುದ್ಧ ಒಟ್ಟಾಗಿ ಹೋರಾಡಲು ಉಭಯ ದೇಶಗಳು ನಿರ್ಧರಿಸಿವೆ. ಜಂಟಿ ಹೇಳಿಕೆಯಲ್ಲಿ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದವನ್ನು ಖಂಡಿಸಿ ಜಾಗತಿಕವಾಗಿ ಶಾಂತಿ ನೆಲೆಸುವ ಬಗ್ಗೆ ಒತ್ತು ನೀಡಲು ತೀರ್ಮಾನಿಸಿವೆ. ಜತೆಗೆ, ಭಯೋತ್ಪಾದಕರಿಗೆ ಧನ ಮತ್ತು ನೆಲೆ ನೀಡುತ್ತಿರುವ ದೇಶಗಳನ್ನು ಗುರುತಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ದೇಶಗಳನ್ನು ಒಬ್ಬಂಟಿ ಮಾಡುವಂತೆ ಒತ್ತಾಯಿಸಿವೆ.

ಯಾವ ಯಾವ ಕ್ಷೇತŠಗಳಲ್ಲಿ ಒಪ್ಪಂದ?
1.ವಿಪತ್ತು ನಿರ್ವಹಣಾ ಪ್ರಾಧಿಕಾರ – ಇದರ ಉದ್ದೇಶ ವಿಪತ್ತು ಕಡಿಮೆಗೊಳಿಸುವುದು, ಅನುಭವ- ಜ್ಞಾನ-ನೀತಿಯ ಹಂಚಿಕೆ, ವಿಪತ್ತುಗಳ ನಿಯಂತ್ರಣ

Advertisement

2. ಕೌಶಲ್ಯಾಭಿವೃದ್ಧಿ ದ್ವಿಪಕ್ಷೀಯ ಸಂಬಂಧದ ವೃದ್ಧಿ, ಜಪಾನ್‌ ಭಾಷೆಯ ಶಿಕ್ಷಣ ವಿಷಯದಲ್ಲಿ ಸಹಕಾರ

3. ಸಂಪರ್ಕ – ಭಾರತದ ಈಶಾನ್ಯ ರಾಜ್ಯಗಳ ಅಭಿವೃದ್ಧಿಗಾಗಿ ಮಾಡಿಕೊಂಡಿರುವ ಒಪ್ಪಂದ
4. ಆರ್ಥಿಕತೆ-ವಾಣಿಜ್ಯ – ಭಾರತ ಅಂಚೆ ಮತ್ತು ಜಪಾನ್‌ ಅಂಚೆ ನಡುವೆ ಒಪ್ಪಂದ ಮಾಡಿ ಕೊಂಡು ಈ ಮೂಲಕ ಕೂಲ್‌ ಇಎಂಎಸ್‌ ಸೇವೆಯನ್ನು ಜಾರಿ ಮಾಡುವುದು. ಈ ವ್ಯವಸ್ಥೆ ಯಿಂದ ಜಪಾನ್‌ನಿಂದ ತಾಜಾ ಆಹಾರವನ್ನು ಭಾರತಕ್ಕೆ ತರಿಸಿಕೊಳ್ಳುವುದು. 

5. ಹೂಡಿಕೆ(ಗುಜರಾತ್‌) – ಮೋದಿ ಅವರ ತವರು ರಾಜ್ಯದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡುವುದು.

6. ಗುಜರಾತ್‌ನ ಮಂಡಲ್‌ ಬೆಚಾÅಜ್‌-ಖರೋಜ್‌ಪ್ರದೇಶದಲ್ಲಿ ಮೇಕ್‌ ಇನ್‌ ಇಂಡಿ ಯಾ ಅಡಿಯಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ

7. ವಿಮಾನಯಾನ – ಜಪಾನ್‌ನಿಂದ ಭಾರತಕ್ಕೆ ಮತ್ತು ಇಲ್ಲಿಂದ ಜಪಾನ್‌ಗೆ ಅನಿಯಂತ್ರಿತ ವಿಮಾನಗಳ ಹಾರಾಟ

8. ವಿಜ್ಞಾನ ಮತ್ತು ತಂತ್ರಜ್ಞಾನ – ಥಿಯರೆಟಿಕಲ್‌ ಬಯೋಲಜಿ ಕ್ಷೇತ್ರದಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ನೀಡಲು ಜಂಟಿ ವಿನಿಮಯ ಒಪ್ಪಂದ. ಇದರಲ್ಲಿ ಬೆಂಗಳೂರಿನ ನ್ಯಾಷನಲ್‌ ಸೆಂಟರ್‌ ಫಾರ್‌ ಬಯೋಲಜಿಕಲ್‌ ಸೈನ್ಸಸ್‌ ಸೇರ್ಪಡೆ

9. ಜಪಾನ್‌ ಮತ್ತು ಭಾರತದ ಸಂಶೋಧನಾ ಸಂಸ್ಥೆಗಳಿಂದ ಜಂಟಿಯಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಉತ್ತೇಜನ

10. ಜೀವ ವಿಜ್ಞಾನ ಮತ್ತು ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ಸಂಶೋಧನೆಗಾಗಿ ಜಪಾನ್‌-ಭಾರತದ ಸಂಸ್ಥೆಗಳಿಂದ ಒಡಂಬಡಿಕೆ

11.ಕ್ರೀಡೆ – ಇಂಟರ್‌ನ್ಯಾಷನಲ್‌ ಅಕಾಡೆಮಿಕ್‌ ಆ್ಯಂಡ್‌ ನ್ಪೋರ್ಟ್ಸ್ ವಿನಿಮಯ ಒಪ್ಪಂದ – ಭಾರತ ಮತ್ತು ಜಪಾನ್‌ನ ಶಿಕ್ಷಣ ಸಂಸ್ಥೆಗಳು ಭಾಗಿ

12. ನ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಮತ್ತು ಜಪಾನ್‌ನ ನಿಪ್ಪೋನ್‌ ನ್ಪೋರ್ಟ್ಸ್ ಸೈನ್ಸ್‌ ಯುನಿವರ್ಸಿಟಿ ನಡುವೆ ಒಡಂಬಡಿಕೆ

13. ಲಕ್ಷ್ಮಿಭಾಯಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಫಿಸಿಕಲ್‌ ಎಜುಕೇಶನ್‌ ಮತ್ತು ತ್ಸುಕುಬಾ ವಿಶ್ವವಿದ್ಯಾನಿಲಯದ ನಡುವೆ ಒಪ್ಪಂದ

14. ಕ್ರೀಡಾ ಕ್ಷೇತ್ರದ ಸಂಬಂಧ ಭಾರತ-ಜಪಾನ್‌ ಶಿಕ್ಷಣ ಸಂಸ್ಥೆಗಳಿಂದ ಜಂಟಿ ಸಂಶೋಧನೆ

15. ಅಕಾಡೆಮಿಕ್‌- ಥಿಂಕ್‌ಟ್ಯಾಂಕ್‌ – ಉತ್ತಮವಾದ ಸಂಶೋಧನೆಗಳು ಹೊರಬರುವ ನಿಟ್ಟಿನಲ್ಲಿ ಐಡಿಇ-ಜೆಇಟಿಆರ್‌ಓ ನಡುವೆ ಒಪ್ಪಂದ 

Advertisement

Udayavani is now on Telegram. Click here to join our channel and stay updated with the latest news.

Next