ಯಾಂಕ್ಟನ್ (ಯುಎಸ್‌ಎ): ಆರ್ಚರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕದ ಖಾತೆ ತೆರೆಯುವ ಭಾರತದ ಕನಸು ಶನಿವಾರದ ಎರಡು ಸ್ಪರ್ಧೆಗಳಲ್ಲಿ ಸಾಕಾರಗೊಳ್ಳಲಿಲ್ಲ. ಫೈನಲ್ ತಲುಪಿದ್ದ ವನಿತಾ ಕಂಪೌಂಡ್ ತಂಡ ಮತ್ತು ಮಿಕ್ಸೆಡ್ ತಂಡಗಳೆರಡೂ ಕೊಲಂಬಿಯಾಕ್ಕೆ ಶರಣಾಗಿ ಬೆಳ್ಳಿ ಪದಕಕ್ಕೆ ಸಮಾಧಾನಪಡಬೇಕಾಯಿತು.
ಭಾರತದ ಮಿಶ್ರ ಡಬಲ್ಸ್ ಜೋಡಿಯಾದ ಅಭಿಷೇಕ್ ವರ್ಮ ಮತ್ತು ಜ್ಯೋತಿ ಸುರೇಖಾ ವೆನ್ನಮ್ ಕೊಲಂಬಿಯಾದ ಡೇನಿಯಲ್ ಮುನೋಝ್ – ಸಾರಾ ಲೋಪೆಜ್ ವಿರುದ್ಧ 150-154 ಅಂತರದಿಂದ ಪರಾಭವಗೊಂಡರು.
ಜ್ಯೋತಿ ಸುರೇಖಾ ವೆನ್ನಮ್, ಮುಸ್ಕಾನ್ ಕಿರಾರ್ ಮತ್ತು ಪ್ರಿಯಾ ಗುರ್ಜಾರ್ ಅವರನ್ನೊಳಗೊಂಡ ವನಿತಾ ಕಂಪೌಂಡ್ ತಂಡ ಕೊಲಂಬಿಯಾದ ಸಾರಾ ಲೋಪೆಜ್, ಅಲೆಜಾಂಡ್ರಾ ಉಸ್ಕಿ$Ìಯಾನೊ, ನೋರಾ ವಾಲೆxಜ್ ವಿರುದ್ಧ 224-229 ಅಂಕಗಳ ಅಂತರದಿಂದ ಎಡವಿತು.
ಭಾರತವಿನ್ನು ವೈಯಕ್ತಿಕ ಕಂಪೌಂಡ್ ಹಾಗೂ ರೀಕರ್ವ್ ಸ್ಪರ್ಧೆಯ ಕ್ವಾರ್ಟರ್ ಫೈನಲ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಇಲ್ಲಿ ಮೂವರು ಬಿಲ್ಗಾರರಿದ್ದಾರೆ.
ಇದನ್ನೂ ಓದಿ :ಸುದೀರ್ಮನ್ ಕಪ್ ಬ್ಯಾಡ್ಮಿಂಟನ್: ಭಾರತದ ಎಳೆಯರಿಗೆ ಸವಾಲು