Advertisement
ಭಾರತೀಯ ಪುರಾತತ್ವ ಇಲಾಖೆ(ಎಎಸ್‌ಐ)ಯ ಮಹಾನಿರ್ದೇಶಕರಾಗಿದ್ದ ಲಾಲ್ ಅವರು, ಅಯೋಧ್ಯೆಯಲ್ಲಿ ನಡೆಸಿದ ಉತ್ಖನನದ ವೇಳೆ ಮಂದಿರದ ಕಂಬಗಳ ಮೇಲೆ ಮಸೀದಿ ನಿರ್ಮಿಸಿರುವುದನ್ನು ಪತ್ತೆ ಹಚ್ಚಿದ್ದರು. ಅವರು ಭಾರತೀಯ ಪುರಾತತ್ವ ಇಲಾಖೆಯ ಅತಿ ಕಿರಿಯ ಮಹಾನಿರ್ದೇಶಕರಲ್ಲಿ ಒಬ್ಬರಾಗಿದ್ದರು. 1968ರಿಂದ 1972ರವರೆಗೆ ಎಎಸ್‌ಐನ ಮಹಾನಿರ್ದೇಶಕರಾಗಿದ್ದರು.
Related Articles
Advertisement
ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಅಧಿಕೃತ ಟ್ವಿಟರ್ ನಲ್ಲಿ ಲಾಲ್ ಅವರಿಗೆ ಗೌರವ ಸಲ್ಲಿಸಿದೆ ಮತ್ತು ಅವರು ಹೋದರೂ ಅವರ ಕೆಲಸಗಳು ಜೀವಂತವಾಗಿದೆ.
ಲಾಲ್ 1921 ರಲ್ಲಿ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಜನಿಸಿದರು. ಅಲಹಾಬಾದ್ ವಿಶ್ವವಿದ್ಯಾನಿಲಯದಿಂದ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ನಂತರ, ಅವರು ಪುರಾತತ್ತ್ವ ಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು.
ಬಿಬಿ ಲಾಲ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.