Advertisement

ಪಾಟ್ನಾ: 2000 ವರ್ಷಗಳಷ್ಟು ಹಳೇಯ ಕುಶಾನರ ಕಾಲದ ಇಟ್ಟಿಗೆ ಗೋಡೆಗಳ ಅವಶೇಷ ಪತ್ತೆ

03:34 PM Jun 04, 2022 | Team Udayavani |

ಪಾಟ್ನಾ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಬಿಹಾರದ ಪಾಟ್ನಾದ ಕುಮ್ರಹಾರ್ ಪ್ರದೇಶದಲ್ಲಿ ಕೊಳದ ಪುನರುಜ್ಜೀವನದ ಕಾಮಗಾರಿಯ ಸ್ಥಳದಲ್ಲಿ ಕನಿಷ್ಠ 2,000 ವರ್ಷಗಳಷ್ಟು ಹಳೆಯದಾದ ಇಟ್ಟಿಗೆ ಗೋಡೆಗಳ ಅವಶೇಷಗಳನ್ನು ಪತ್ತೆ ಮಾಡಿದೆ.

Advertisement

ಪಾಟ್ನಾ ರೈಲ್ವೆ ನಿಲ್ದಾಣದ ಪೂರ್ವಕ್ಕೆ ಆರು ಕಿಮೀ ದೂರದಲ್ಲಿರುವ ಕುಮ್ರಹಾರ್‌ ನಲ್ಲಿ ಗುರುವಾರ ಅಗೆಯುವ ಕಾರ್ಯವನ್ನು ನಡೆಸುತ್ತಿದ್ದಾಗ ಅಧಿಕಾರಿಗಳು ಗೋಡೆಗಳ ಅವಶೇಷಗಳನ್ನು ಪತ್ತೆ ಮಾಡಿದ್ದಾರೆ ಎಂದು ಎಎಸ್‌ಐ-ಪಾಟ್ನಾ ವೃತ್ತದ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಗೌತಮಿ ಭಟ್ಟಾಚಾರ್ಯ ಹೇಳಿದರು. ಇಲ್ಲಿ ಮೌರ್ಯ ಸಾಮ್ರಾಜ್ಯದ ಅವಶೇಷಗಳು ಹಿಂದೆ ಕಂಡುಬಂದಿತ್ತು.

“ಕೇಂದ್ರದ ‘ಮಿಷನ್ ಅಮೃತ್ ಸರೋವರ’ ಉಪಕ್ರಮದ ಭಾಗವಾಗಿ ಎಎಸ್ಐ ರಕ್ಷಿತ ಕೊಳವನ್ನು ಪುನರುಜ್ಜೀವನಗೊಳಿಸುತ್ತಿದೆ. ಕೊಳದ ಒಳಗಿನ ಇಟ್ಟಿಗೆ ಗೋಡೆಗಳು ಗಮನಾರ್ಹವಾದ ಸಂಶೋಧನೆಯಾಗಿದೆ. ಎಎಸ್ಐ ತಜ್ಞರ ತಂಡವು ಗೋಡೆಗಳ ಪುರಾತತ್ತ್ವ ಶಾಸ್ತ್ರದ ಪ್ರಾಮುಖ್ಯತೆಯನ್ನು ವಿಶ್ಲೇಷಿಸುತ್ತಿದೆ” ಎಂದು ಗೌತಮಿ ಭಟ್ಟಾಚಾರ್ಯ ಹೇಳಿದರು.

ಇದನ್ನೂ ಓದಿ:ರಿಷಭ್ ಬ್ಯಾಕ್ ಟು ಬ್ಯಾಕ್ ಸಿನಿಮಾ: ‘ಕಾಂತಾರ’ದ ನಿಗೂಢತೆ ಅರಿಯಲು ದಿನಾಂಕ ಫಿಕ್ಸ್

ಈ ಇಟ್ಟಿಗೆಗಳು ಉತ್ತರ ಭಾರತದ ಬಹುಪಾಲು, ಇಂದಿನ ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾದ ಭಾಗಗಳಲ್ಲಿ ಸುಮಾರು ಕ್ರಿ.ಶ 30 ರಿಂದ ಸುಮಾರು 375 ರವರೆಗೆ ಆಳಿದ ಕುಶಾನ್ ಯುಗಕ್ಕೆ ಸೇರಿದವು ಎಂದು ತೋರುತ್ತದೆ, ಆದರೆ ವಿವರವಾದ ವಿಶ್ಲೇಷಣೆಯ ನಂತರವೇ ಯಾವುದೇ ತೀರ್ಮಾನಕ್ಕೆ ಬರಬಹುದು ಎಂದು ಅವರು ಹೇಳಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next