Advertisement

ಬಳ್ಳಾರಿಯ ಕುಡಿತಿನಿಯಲ್ಲಿ  ಮಿತ್ತಲ್‌ ಸೋಲಾರ್‌ ಘಟಕ

09:58 AM Feb 27, 2017 | |

ನವದೆಹಲಿ: ಜಗತ್ತಿನ ಅತಿ ದೊಡ್ಡ ಉಕ್ಕು ಉತ್ಪಾದಕ ಕಂಪನಿ ಆರ್ಸೆಲರ್‌ ಮಿತ್ತಲ್‌ ಕರ್ನಾಟಕದಲ್ಲಿನ ತನ್ನ ಉಕ್ಕು ಉತ್ಪಾದನಾ ಕೇಂದ್ರದಲ್ಲಿ ಸೋಲಾರ್‌ ಫಾರ್ಮ್ ಸ್ಥಾಪಿಸಲು ಚಿಂತನೆ ನಡೆಸಿದೆ. 

Advertisement

2010ರಲ್ಲಿ ಉದ್ಯಮಿ ಲಕ್ಷ್ಮಿ ಮಿತ್ತಲ್‌ ಅವರ ಕಂಪನಿ ಬಳ್ಳಾರಿಯ ಕುಡಿತಿನಿ 6 ಮೆಟ್ರಿಕ್‌ ಟನ್‌ ಸಾಮ­ರ್ಥ್ಯದ ಉಕ್ಕು ಉತ್ಪಾದನಾ ಕಂಪನಿ ಸ್ಥಾಪನೆಗೆ ಕರ್ನಾ­ಟಕ ಸರ್ಕಾರದೊಂದಿಗೆ ಒಪ್ಪಂದಕ್ಕೆ ಬಂದಿತ್ತು. ಅದರಂತೆ ಕಂಪನಿಗೆ ಸ್ಥಳ ಲಭ್ಯವಾಗಿತ್ತು. ಆದರೆ ಸದ್ಯ ಜಾಗತಿಕ ಮಟ್ಟದಲ್ಲಿ ಹೆಚ್ಚುವರಿ ಉಕ್ಕು ಉತ್ಪಾದನೆ, ಕಚ್ಚಾವಸ್ತುಗಳ ಸಂಪಾದನೆ­ಯಲ್ಲಿ ವಿಳಂಬವಾಗುತ್ತಿರುವುದ­ರಿಂದ ಆ ಸ್ಥಳದಲ್ಲಿ ಸೋಲಾರ್‌ ಸ್ಥಾವರ ನಿರ್ಮಾಣಕ್ಕೆ ಉದ್ದೇಶಿಸಿದೆ. 750 ಮೆ.ವ್ಯಾ. ಸಾಮರ್ಥ್ಯದ ಈ ವಿದ್ಯುತ್‌ ಉತ್ಪಾದನಾ ಕೇಂದ್ರಕ್ಕೆ ಕಂಪನಿ ಸುಮಾರು 43 ಸಾವಿರ ಕೋಟಿ ರೂ. ಬಂಡವಾಳ ಹೂಡಲು ಚಿಂತಿಸಿದೆ. ಈಗಾ­ಗಲೇ ಕಂಪನಿ 2,659 ಎಕರೆ ಖಾಸಗಿ ಜಮೀನನ್ನು ಪಡೆದಿದ್ದು, ಇನ್ನೂ 136.33 ಎಕರೆ ಕರ್ನಾಟಕ ಸರ್ಕಾರದಿಂದ ಹಸ್ತಾಂತರವಾಗಬೇಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next