Advertisement

ಅರವಿಂದ ಸುಬ್ರಮಣಿಯನ್‌ ಸೇವಾವಧಿ ವರ್ಷ ವಿಸ್ತರಣೆ

06:30 AM Sep 24, 2017 | |

ನವದೆಹಲಿ: ಪ್ರಧಾನಿಯವರ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ರ ಸೇವಾವಧಿಯನ್ನು ಇನ್ನೂ ಒಂದು ವರ್ಷ ಕಾಲ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 

Advertisement

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಈ ಮಾಹಿತಿ ನೀಡಿದ್ದಾರೆ. ಅವರ ಹಾಲಿ ಸೇವಾವಧಿ ಮುಂದಿನ ತಿಂಗಳ 16ಕ್ಕೆ ಮುಕ್ತಾಯವಾಗುವುದರಲ್ಲಿತ್ತು. ಸುಬ್ರಮಣಿ ಯನ್‌ ಪೀಟರ್ಸನ್‌ ಇನ್ಸ್ಟಿಟ್ಯೂಟ್‌ ಆಫ್ ಇಂಟರ್‌ನ್ಯಾಷ ನಲ್‌ ಇಕನಾಮಿಕ್ಸ್‌ನಲ್ಲಿ ಸೀನಿಯರ್‌ ಫೆಲೋ ಆಗಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಅವರು ಸಲಹೆ ಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದು ಸುದ್ದಿಯಾಗಿತ್ತು. ಆದರೆ, ಇದನ್ನು ವಿತ್ತ ಸಚಿವಾಲಯ ತಳ್ಳಿಹಾಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next