Advertisement
ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ನೆರೂಲ್ ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷ, ಧರ್ಮದರ್ಶಿ ರಮೇಶ್ ಎಂ. ಪೂಜಾರಿ ಅವರು, ಒಡಿಯೂರು ಶ್ರೀಗಳ ಷಷ್ಠ éಬ್ದ ಸಂಭ್ರಮ ಪ್ರಯುಕ್ತ ನವಿಮುಂಬಯಿಯಲ್ಲಿ ಜರಗುವ ಅರ್ವತ್ತು ಕಾರ್ಯಕ್ರಮಗಳ ಉದ್ಘಾಟನೆ ಶ್ರೀ ಶನೀಶ್ವರ ಮಂದಿರದಲ್ಲಿ ನಡೆಯುತ್ತಿರುವುದು ಸಂತೋಷದ ಸಂಗತಿ. ಶನೀಶ್ವರ ಮಂದಿರವು ಒಡಿಯೂರು ಶ್ರೀಗಳಿಗೆ ಬಹಳ ಪ್ರಿಯವಾದ ಕ್ಷೇತ್ರವಾಗಿದೆ. ಮುಂಬಯಿ ಭೇಟಿಯ ಸಂದರ್ಭದಲ್ಲಿ ಅವರು ನೆರುಲ್ ಶನೀಶ್ವರ ಮಂದಿರಕ್ಕೆ ನಿರಂತರ ಭೇಟಿ ನೀಡುತ್ತಾರೆ. ಮುಂದೆ ನಡೆಯಲಿರುವ ಅರ್ವತ್ತು ಕಾರ್ಯಕ್ರಮಗಳು ಯಶಸ್ವಿಯಾಗಲಿ. ಶ್ರೀಗಳ ಈ ಅರುವತ್ತು ದಿನಗಳ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಧಾರ್ಮಿಕ ಹಾಗೂ ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸುವ ವಾಹಿನಿಯಾಗಿ ರಾರಾಜಿಸಲಿ ಎಂದು ಶುಭ ಹಾರೈಸಿದರು.
Related Articles
Advertisement
ಶ್ರೀ ಅಯ್ಯಪ್ಪ ದುರ್ಗಾದೇವಿ ಮಂದಿರ ನೆರುಲ್ ಇದರ ಕಾರ್ಯಾಧ್ಯಕ್ಷ ರವಿ ಆರ್. ಶೆಟ್ಟಿ ಮಾತನಾಡಿ, ಶ್ರೀಗಳ ಷಷ್ಠ éಬ್ದ ಸಂಭ್ರಮ ಕಾರ್ಯಕ್ರಮಕ್ಕೆ ಪೂರ್ಣ ಸಹ ಕಾರ ಇದೆ ಎಂದರು. ಬಿಲ್ಲವರ ಅಸೋಸಿ ಯೇಶನ್ ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್ ಕೆ. ಪೂಜಾರಿ ಮಾತನಾಡಿ, ಶ್ರೀಗಳ ಈ ಕಾರ್ಯ ಕ್ರಮದ ಆಯೋಜಕರು ಒಂದು ದಿನದ ಕಾರ್ಯಕ್ರಮವನ್ನು ಬಿಲ್ಲವರ ಅಸೋಸಿ ಯೇಶನ್ ನವಿಮುಂಬಯಿ ಸ್ಥಳೀಯ ಸಮಿತಿಯ ವತಿಯಿಂದ ನಡೆಸಲು ಅನುವು ಮಾಡಿಕೊಡಬೇಕು ಎಂದರು.
ಪ್ರಾರಂಭದಲ್ಲಿ ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಗೌರವ ಪ್ರಧಾನ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ ಅವರು ಪ್ರಸ್ತಾವಿಸಿ, ಶ್ರೀಗಳ ವತಿಯಿಂದ ಜರಗುವ ಸಮಾಜಪರ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಗುರುದೇವ ಸೇವಾ ಬಳಗದ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಕೃಷ್ಣ ಎಲ್. ಶೆಟ್ಟಿ, ಷಷ್ಠ éಬ್ದ ಕಾರ್ಯಕ್ರಮದ ಮುಂಬಯಿ ಸಮಿತಿಯ ಅಧ್ಯಕ್ಷ ವಾಮಯ್ಯ ಶೆಟ್ಟಿ, ಅದ್ಯಪಾಡಿಗುತ್ತು ಕರುಣಾಕರ ಎಸ್. ಆಳ್ವ, ಯಕ್ಷಗಾನ ಅರ್ಥಧಾರಿ ಕೆ. ಕೆ. ಶೆಟ್ಟಿ, ವಜ್ರ ಮಾತಾ ಮಹಿಳಾ ವಿಕಾಸ ಕೇಂದ್ರ ಮಹಾರಾಷ್ಟ್ರ ಘಟಕದ ಅಧ್ಯಕ್ಷೆ ರೇವತಿ ವಾಮಯ್ಯ ಶೆಟ್ಟಿ, ಮಾಜಿ ಅಧ್ಯಕ್ಷೆ ಸುಹಾಸಿನಿ ಶೆಟ್ಟಿ ಮೊದಲಾದವರು ಶುಭ ಹಾರೈಸಿದರು.
ಕಾರ್ಯಕ್ರಮದ ಸಂಯೋಜಕರಾದ ರಂಗಕಲಾವಿದ ಅನಿಲ್ ಹೆಗ್ಡೆ ಪೆರ್ಡೂರು ನಿರೂಪಿಸಿದರು. ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಪ್ರಭಾಕರ ಎಸ್. ಹೆಗ್ಡೆ ವಂದಿಸಿದರು. ವಿಜಯಲಕ್ಷ್ಮೀ ಶೆಟ್ಟಿ ಹಾಗೂ ಸುಪ್ರಿಯಾ ಅನಿಲ್ ಹೆಗ್ಡೆ ಅವರು ಪ್ರಾರ್ಥನೆಗೈದರು. ವಿ. ಕೆ. ಸುವರ್ಣ ಪಡುಬಿದ್ರಿ, ಜಗದೀಶ್ ಶೆಟ್ಟಿ ಪನ್ವೆಲ್, ತಾರಾನಾಥ ಶೆಟ್ಟಿ ಪುತ್ತೂರು, ರವಿಶಂಕರ್ ಆಚಾರ್ಯ ಮೊದಲಾದವರು ಸಹಕರಿಸಿದರು. ಪ್ರಥಮ ಕಾರ್ಯಕ್ರಮದ ಅಂಗವಾಗಿ ಶ್ರೀ ಶನೀಶ್ವರ ಭಜನ ಮಂಡಳಿ ನೆರುಲ್ ವತಿಯಿಂದ ದಾಸರ ಭಜನ ಕಾರ್ಯಕ್ರಮ ಜರಗಿತು.
ಒಡಿಯೂರು ಕ್ಷೇತ್ರದಲ್ಲಿ ಶ್ರೀಗಳಿಂದ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳು ಅಭಿನಂದನೀಯ. ತುಳುನಾಡಿನಲ್ಲಿ ಸಮಾಜಪರ ಕಾರ್ಯಗಳಿಗಾಗಿ ಪ್ರಸಿದ್ಧಿ ಪಡೆದ ಕ್ಷೇತ್ರಗಳಲ್ಲಿ ಒಡಿಯೂರು ಕ್ಷೇತ್ರವು ಒಂದಾಗಿರುವುದು ಬಹಳ ಸಂತೋಷದ ವಿಷಯವಾಗಿದೆ. ನಾವೆಲ್ಲರು ಒಂದಾಗಿ ಶ್ರೀಗಳ ಈ ಅರ್ವತ್ತು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸೋಣ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯುವಪೀಳಿಗೆಯನ್ನು ಪಾಲ್ಗೊಳ್ಳುವಂತೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳು ಸುಸಂಸ್ಕೃತರಾಗಿ ಬೆಳೆಯಲು ಸಾಧ್ಯವಿದೆ. -ಕೆ. ಡಿ. ಶೆಟ್ಟಿ , ಸಂಸ್ಥಾಪಕರು, ಭವಾನಿ ಫೌಂಡೇಶನ್ ಟ್ರಸ್ಟ್ ಮುಂಬಯಿ
ಚಿತ್ರ-ವರದಿ ಸುಭಾಶ್ ಶಿರಿಯಾ