ಮುಂಬಯಿ, ಫೆ. 6: ಕಾಂದಿವಲಿ ಕನ್ನಡ ಸಂಘದ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮವು ಫೆ. 1ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಬಿತಾ ಜಿ. ಪೂಜಾರಿ, ಉಪಾಧ್ಯಕ್ಷೆ ವಾರಿಜಾ ಎಸ್. ಕರ್ಕೇರಉಪಕಾರ್ಯಾಧ್ಯಕ್ಷೆ ಶರ್ಮಿಳಾ ಎಸ್. ಶೆಟ್ಟಿ ಅವರ ನೇತೃತ್ವದಲ್ಲಿ ಕಾಂದಿವಲಿ ಪಶ್ಚಿಮ ಮಹಾವೀರ ನಗರದ ಪಂಚೋಲಿಯ ಶಾಲೆಯಲ್ಲಿ ನಡೆದ ಕಾರ್ಯಕ್ರಮ ಪ್ರಾರಂಭದಲ್ಲಿ ಮಹಿಳಾ ಸದಸ್ಯರಿಂದ ಭಜನಾ ಕಾರ್ಯಕ್ರಮ ನೆರವೇರಿತು.
ಸಂಘದ ಅಧ್ಯಕ್ಷರಾದ ಪೊಲ್ಯ ಜಯಪಾಲ ಶೆಟ್ಟಿ ಅವರು ಕಾರ್ಯಕ್ರಮವನ್ನು ಸಾಂಕೇತಿಕವಾಗಿ ದೀಪ ಪ್ರಜ್ವಲಿಸಿ ಉದ್ಘಾಟಿಸಿ, ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಮಹಿಳಾ ಸದಸ್ಯರ ಉತ್ಸಾಹವನ್ನು ಅಭಿನಂದಿಸಿ, ಕಾಂದಿವಲಿ ಕನ್ನಡ ಸಂಘದ ಮಹಿಳೆಯರ ಪಾತ್ರವನ್ನು ಶ್ಲಾಘಿಸಿ ಶುಭ ಹಾರೈಸಿದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಬಿತಾ ಜಿ. ಪೂಜಾರಿ ಸ್ವಾಗತಿಸಿ, ಮಹಿಳೆಯರಿಗಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಎಣಿಕೆಗೂ ಮೀರಿ ಭಾಗವಹಿಸಿದ ಮಹಿಳಾ ಸದಸ್ಯೆಯರು ಹಾಗೂ ಸ್ಥಳೀಯ ತುಳು-ಕನ್ನಡಿಗರನ್ನು ಅಭಿನಂದಿಸಿದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪರಿಸರದ ವಿವಿಧ ಸಂಘ ಸಂಸ್ಥೆಗಳಲ್ಲಿ ಭಾಗವಹಿಸಿ ಹಾಗೂ ಇತ್ತೀಚೆಗೆ ಕಾಂದಿವಲಿ ಉಪನಗರದಲ್ಲಿ ಜರಗಿದ ಬೊಂಬಾಯಿಡ್ ತುಳುನಾಡು ಕಾರ್ಯಕ್ರಮದಲ್ಲಿ ಕುಣಿತ ಭಜನೆಯ ಮೂಲಕ ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾದ ಮಹಿಳೆಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಕೊನೆಯಲ್ಲಿ ಮಹಿಳಾ ಪದಾಧಿಕಾರಿಗಳು ಉತ್ಸುಕತೆಯಿಂದ ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ವ ಮಹಿಳಾ ಸದಸ್ಯರಿಗೆ ಪರಿಸರದ ತುಳು ಕನ್ನಡ ಮಹಿಳೆಯರಿಗೆ ಅರಸಿನ ಕುಂಕುಮವನ್ನು ಹಚ್ಚಿಕೊಂಡು ಪರಸ್ಪರ ಪ್ರೀತಿ, ಸೌಹಾರ್ದತೆಯಿಂದ ಹರಸಿ ಹಾರೈಸಿದರು. ಕೊನೆಯಲ್ಲಿ ಲಘು ಉಪಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಪ್ರೇಮ್‌ನಾಥ್ ಪಿ. ಕೋಟ್ಯಾನ್, ಗೌರವ ಕೋಶಾಧಿಕಾರಿ ಸುಂದರ ಎಸ್. ಶೆಟ್ಟಿ, ಮಹಿಳಾ ಸದಸ್ಯರುಗಳಾದ ಸರೋಜಾ ಎನ್. ಶೆಟ್ಟಿ, ಸುಮಾ ಎಸ್. ಕುಂದರ್, ಚೇತನಾ ಎಸ್. ಶೆಟ್ಟಿ, ಜಯಂತಿ ಯು. ಸಾಲ್ಯನ್, ಸಲಹೆಗಾರರಾದ ಮಂಜಯ್ಯ ಸಿ. ಅಮೀನ್, ಯಶೋಧಾ ಎಸ್. ಶೆಟ್ಟಿ, ಇತರ ಸದಸ್ಯರು ಉಪಸ್ಥಿತರಿದ್ದರು. ಸಂಘದ ಸದಸ್ಯರು ಹಾಗೂ ಪರಿಸರದ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಚಿತ್ರ-ವರದಿ: ರಮೇಶ್ ಉದ್ಯಾವರ