Advertisement
ಎರಡು ಗ್ರಾಮಗಳ ಕಚೇರಿಅರಂತೋಡು ಗ್ರಾಮ ಕರಣಿಕರ ಕಚೇರಿಯಲ್ಲಿ ಅರಂತೋಡು ಮತ್ತು ತೊಡಿಕಾನ – ಈ ಎರಡು ಗ್ರಾಮಗಳ ಗ್ರಾಮ ಕರಣಿಕರು ಮತ್ತು ಇಬ್ಬರು ಸಹಾಯಕರು ಹೀಗೆ ಒಟ್ಟು 4 ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎರಡು ಗ್ರಾಮಗಳಿಗೆ ಸಂಬಂಧಪಟ್ಟ ಕಡತಗಳು ಇಲ್ಲಿವೆ. ಕಚೇರಿ ಶಿಥಿಲಗೊಂಡ ಪರಿಣಾಮ ಕಡತಗಳಿಗೂ ಅಪಾಯ ಎದುರಾಗಿದೆ.
ಇದು ಬ್ರಿಟಿಷರ ಕಾಲದ ಬಂಗ್ಲೆಯಾಗಿದೆ. ಒಂದು ಶತಮಾನಕ್ಕಿಂತಲೂ ಹಳೆಯ ಕಟ್ಟಡವಿದು. ಸಾಮಂತ ರಾಜರು ಅತ್ತಿತ್ತ ಸಂಚರಿಸುತ್ತಿದ್ದಾಗ ಕಟ್ಟಡದ ಎದುರು ತಮ್ಮ ಕುದುರೆಗಳನ್ನು ಕಟ್ಟಿಹಾಕಿ, ಇಲ್ಲಿ ತಂಗುತ್ತಿದ್ದರು ಎಂಬ ಉಲ್ಲೇಖವಿದೆ. ಕಟ್ಟಡದ ಎದುರು ಕುದುರೆಗಳನ್ನು ಕಟ್ಟುವುದಕ್ಕಾಗಿ ಕಂಬಗಳಿದ್ದವು. ರಸ್ತೆ ವಿಸ್ತರಣೆ ಕಾಮಗಾರಿ
ಸಂದರ್ಭದಲ್ಲಿ ಕುದುರೆ ಕಟ್ಟುವ ಕಂಬಗಳನ್ನು ತೆರವುಗೊಳಿಸಲಾಗಿದೆ. ಗ್ರಾಮಕರಣಿಕರ ಕಚೇರಿಯಿರುವ ಕಟ್ಟಡ ಈತನಕ ವಿದ್ಯುತ್ ಭಾಗ್ಯ ಕಂಡಿಲ್ಲ. ಹರಕು – ಮುರುಕು ಕಟ್ಟಡದಲ್ಲಿ ಸಿಬಂದಿ
ಕತ್ತಲಲ್ಲೇ ಕುಳಿತು ಕೆಲಸ ಮಾಡುತ್ತಾರೆ. ಬೇಸಗೆಯಲ್ಲಿ ಫ್ಯಾನ್ ಹಾಕಲೂ ಅವಕಾಶವಿಲ್ಲದೆ ಸೆಕೆ ಸಹಿಸಿಕೊಂಡೇ ಕಡತಗಳಲ್ಲಿ ಮುಳುಗಿರುತ್ತಾರೆ. ಸೆಕೆ ಜಾಸ್ತಿಯಾದರೆ ಗಾಳಿ ಸೇವನೆಗೆಂದು ಆಗಾಗ ಕಟ್ಟಡದ ಹೊರಗೆ ಬರುತ್ತಾರೆ. ಈ ಕಚೇರಿಗೆ ಶೌಚಾಲಯ ಹಾಗೂ ನೀರಿನ ವ್ಯವಸ್ಥೆಯೂ ಇಲ್ಲ. ಶೌಚಾಲಯಕ್ಕೆ ತೆರಳುವ ಅನಿವಾರ್ಯತೆ ಎದುರಾದರೆ ದೂರದ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯವೇ ಗತಿ.
Related Articles
ತೊಡಿಕಾನ ಗ್ರಾಮಕ್ಕೆ ಪ್ರತ್ಯೇಕ ವಿ.ಎ. ಇದ್ದರೂ ಗ್ರಾಮ ಕರಣಿಕರು ಬಾರದೆ ಅರಂತೋಡಿನ ವಿ.ಎ. ಕಚೇರಿಯಲ್ಲೇ
ಉಳಿದುಕೊಳ್ಳುತ್ತಿದ್ದಾರೆ. ಇದರಿಂದ ಈ ಭಾಗದ ಗ್ರಾಮಸ್ಥರು ತಮ್ಮ ಕಂದಾಯ ಇಲಾಖೆಯ ವ್ಯವಹಾರಕ್ಕೆ ಅರಂತೋಡಿಗೆ ಅಲೆದಾಟ ಮಾಡಬೇಕಾಗಿದೆ. ಅರಂತೋಡು ಗ್ರಾಮ ಕರಣಿಕರ ಕಚೇರಿ ದುರಸ್ತಿ ಮಾಡುವ ಬಗ್ಗೆ ಹಾಗೂ ವಿ.ಎ. ತೊಡಿಕಾನಕ್ಕೆ ಬರುವಂತಾಗಲು ಉಭಯ ಗ್ರಾಮದ ಜನರು ಒತ್ತಾಯಿಸುತ್ತಿದ್ದಾರೆ.
Advertisement
ಬೇಸರದ ವಿಷಯಗ್ರಾಮ ಕರಣಿಕರ ಕಚೇರಿ ತುಂಬಾ ಶಿಥಿಲಗೊಂಡಿದ್ದು, ಸಂಬಂಧಪಟ್ಟ ಇಲಾಖೆಗೆ ನಾವು ಪಂಚಾಯತ್ ವತಿಯಿಂದ ಪತ್ರ ಬರೆದಿದ್ದೇವೆ. ಈ ತನಕ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಇದು ತುಂಬಾ ಬೇಸರದ ವಿಷಯ.
– ನೀಲಾವತಿ ಕೊಡಂಕೇರಿ,ಅರಂತೋಡು ಗ್ರಾ.ಪಂ. ಅಧ್ಯಕ್ಷರು ಜಿಲ್ಲಾಧಿಕಾರಿಗೆ ಪತ್ರ
ಡಿಸಿಗೆ ಪತ್ರ ಬರೆಯುತ್ತೇನೆ. ಅನುದಾನ ದೊರೆತರೆ ದುರಸ್ತಿ ಇಲ್ಲವೆ ಹೊಸ ಕಟ್ಟಡ ನಿರ್ಮಾಣದ ಬಗ್ಗೆ ಆಲೋಚನೆ ಮಾಡುತ್ತೇವೆ.
– ಕುಂಞಮ್ಮ, ತಹಶೀಲ್ದಾರ್, ಸುಳ್ಯ ಶತಮಾನದಷ್ಟು ಹಳೆಯ ಕಟ್ಟಡ
ಸುಳ್ಯಕ್ಕೆ ಹಲವು ತಹಶೀಲ್ದಾರ್‌ಗಳು ಬಂದರೂ ಅರಂತೋಡು ವಿ.ಎ. ಕಚೇರಿ ದುರಸ್ತಿ ಮಾಡಲು ಸಾಧ್ಯವಾಗಿಲ್ಲ. ಇದು ಶತಮಾನದಷ್ಟು ಹಳೆಯ ಕಟ್ಟಡವಾಗಿದೆ.ಯಾವ ವಿ.ಎ.ಗಳೂ ಕಚೇರಿ ದುರಸ್ತಿಗೆ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ.
– ಆಶ್ರಫ್ ಗುಂಡಿ, ಅರಂತೋಡು ತೇಜೇಶ್ವರ್ ಕುಂದಲ್ಪಾಡಿ