Advertisement

ಶಿಕ್ಷಕರ ಭವನ ನಿರ್ವಹಣೆಯಲ್ಲಿ ಅಕ್ರಮ! ಶೂ, ಸಾಕ್ಸ್‌, ಸಮವಸ್ತ್ರ ಖರೀದಿಯಲ್ಲಿ ಅವ್ಯವಹಾರ

12:45 PM Nov 19, 2020 | sudhir |

ಅರಕಲಗೂಡು: ಶಿಕ್ಷಕರ ಭವನ ಹಾಗೂ 255 ಶಾಲೆಗಳಲ್ಲಿ ಶೂ, ಸಾಕ್ಸ್‌, ಸಮವಸ್ತ್ರ, ಇತರೆ ಸಾಮಗ್ರಿಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಿರುವ ಜಿಲ್ಲಾ ಮಟ್ಟದ ಲೆಕ್ಕಾ ತನಿಖಾ ತಂಡ ಡಿಡಿಪಿಐ ಮೂಲಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ 59 ಪುಟ ಒಳಗೊಂಡ ವರದಿಯನ್ನು ನೀಡಿದೆ. ಇದು ಲಕ್ಷಾಂತರ ರೂ. ದುರ್ಬಳಕೆ ಮಾಡಿಕೊಂಡಿಕೊಂಡಿದ್ದಾರೆ ಎನ್ನಲಾದ 10 ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮೂವರು ಕಾರ್ಯದರ್ಶಿ ಒಳಗೊಂಡಂತೆ, ಐವರು (ಶಿಕ್ಷಣ ಇಲಾಖೆ ಕಚೇರಿ) ಸಿಬ್ಬಂದಿಗಳಲ್ಲಿ ನಡುಕ ಹುಟ್ಟಿಸಿದೆ.

Advertisement

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಗೆ ಬರುವ ಪಟ್ಟಣದ ಶಿಕ್ಷಕರ ಭವನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಿಗೆ ವರದಾನವಾಗಿದೆ ಎನ್ನಲಾಗುತ್ತಿದೆ. ಈ ಭವನದಿಂದಾಗಿ ತಾಲೂಕಿಗೆ ಬಿಇಒ ಆಗಿ
ಆಗಮಿಸಲು ಭಾರೀ ಪೈಪೋಟಿಗಳೇ ನಡೆಯುತ್ತಿತ್ತು. ಅಲ್ಲದೆ, ಶಿಕ್ಷಕರ ಸಂಘದ ಪದಾಧಿಕಾರಿಗಳ ಚುನಾವಣೆ, ಯಾವ ಸಾರ್ವತ್ರಿಕ ಚುನಾವಣೆಗೂ ಕಡಿಮೆ ಇಲ್ಲದಂತೆ ನಡೆಯುತ್ತಿದ್ದು, ಭವನ ಒಂದು ರೀತಿ ಅಕ್ಷಯ ಪಾತ್ರೆ ಎಂದೇ ಹೇಳಲಾಗುತ್ತದೆ.

ಜಿಪಂ ಸಭೆಯಲ್ಲಿ ಅವ್ಯವಹಾರ ಸದ್ದು: ಈ ಎಲ್ಲಾ ನ್ಯೂನತೆಗಳನ್ನು ಮನಗಂಡ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ರಾಜಶೇಖರಪ್ಪ, 2018, ಆಗಸ್ಟ್‌,10 ರಂದು ಶಿಕ್ಷಕರ ಭವನದ ಅವ್ಯವಹಾರದ ಬಗ್ಗೆ ತನಿಖೆ ಮಾಡುವಂತೆ ಜಿಲ್ಲಾ ಉಪನಿರ್ದೇಶಕರಿಗೆ ದೂರು ನೀಡಿದ್ದರು. ಇವರ ದೂರಿನನ್ವಯ ಅಧಿಕಾರಿ ಸೋಮನಾಥ ಅವರನ್ನು ತನಿಖೆಗಾಗಿ ನೇಮಿಸಲಾಗಿತ್ತು. ತನಿಖೆ ವೇಳೆ ಭವನದ ಮೇಲಿನ ಭ್ರಷ್ಟಾಚಾರ ಸಾಬೀತಾಗಿತ್ತು. ಇವರ ವರದಿಯಲ್ಲಿಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿ ಸುತ್ತಿದ್ದ ದೇವರಾಜು ಅವರನ್ನು ಅಮಾನತುಗೊಳಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಆಗಿದ್ದ ನಾಗೇಶ ವಿರುದ್ಧ ಕ್ರಮ
ಜರುಗಿಸಲು ಸಾರ್ವತ್ರಿಕ ಶಿಕ್ಷಣ ಇಲಾಖೆಗೆ ತಿಳಿಸಲಾಗಿತ್ತು ಎನ್ನಲಾಗಿದೆ. ಈ ಎಲ್ಲಾ ಗೊಂದಲಗಳನ್ನು ವೀಕ್ಷಿಸುತ್ತಿದ್ದ ಜಿಪಂ ಸದಸ್ಯರು, ಸಾಮಾನ್ಯ ಸಭೆಯಲ್ಲಿ ಈ ಎಲ್ಲಾ ಅವ್ಯವಹಾರದ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು.\

ಇದನ್ನೂ ಓದಿ:ವಿಜಯನಗರ ಜಿಲ್ಲೆ ಹಿಂದೆ ಸಚಿವರ ರಿಯಲ್ಎಸ್ಟೇಟ್ ಅಭಿವೃದ್ಧಿ ತಂತ್ರ :ಕುಡತಿನಿ ಶ್ರೀನಿವಾಸ್

ಆರೋಪಿಗಳ ಎದೆಬಡಿತ ಹೆಚ್ಚಳ: ಈ ಬಗ್ಗೆ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಸಿಇಒ, ವಿಶೇಷ ಲೆಕ್ಕ ತನಿಖೆ ಕೈಗೊಂಡು ವರದಿ ಸಲ್ಲಿಸಲು ರೇಷ್ಮೆ, ಕೃಷಿ ಇಲಾಖೆ ಉಪನಿರ್ದೇಶಕರು ಹಾಗೂ ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ
ನಿರ್ದೇಶಕರ ನೇತೃತ್ವದಲ್ಲಿ ತಂಡ ರಚಿಸಿದ್ದರು. ಈ ತಂಡಈಗ ಸಾರ್ವಜನಿಕ ಶಿಕ್ಷಣಇಲಾಖೆಆಯುಕ್ತರಿಗೆ ತನ್ನ ತನಿಖಾ ವರದಿಯನ್ನು ರವಾನೆ ಮಾಡಿದ್ದು, ಭ್ರಷ್ಟಾಚಾರದ ಆರೋಪವನ್ನು ಹೊತ್ತಿರುವ ಅಧಿಕಾರಿಗಳ ಎದೆಬಡಿತ ಹೆಚ್ಚಾಗುವಂತೆ ಮಾಡಿದೆ.

Advertisement

ಶೂ, ಸಾಕ್ಸ್‌ಗಳಲ್ಲೂ ಭ್ರಷ್ಟಾಚಾರ: ಶಾಲಾ ಮಕ್ಕಳಿಗೆ ಗುಣಮಟ್ಟದ ಶೂ ಮತ್ತು ಸಾಕ್ಸ್‌ ನೀಡಲಿ ಎಂಬ ಕಾರಣಕ್ಕೆ ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಮುಖ್ಯ ಉಪಾಧ್ಯಾಯರು ಅವರ ಖಾತೆಗೆ ಸರ್ಕಾರ ಹಣ ಜಮಾ ಮಾಡಿತ್ತು. ಆದರೆ, ಮಕ್ಕಳ ಶೂ ಖರೀದಿಯಲ್ಲೂ ಅವ್ಯವಹಾರ ವೆಸಗಿರುವುದು ವಿಶೇಷ ಲೆಕ್ಕಾ ತನಿಖಾ ತಂಡದ ವರದಿಯಿಂದ ಬಹಿರಂಗವಾಗಿದೆ.

ಒಂದೊಂದು ದರ ನಿಗದಿ: ಬಹುತೇಕ ಶಾಲೆಗಳು ಭವಾನಿ ಏಜೆನ್ಸಿ, ಕಭೀರ ಖಾನ್‌, ನಾಸಿರ ಖಾನ್‌, ತಹವೀರ ಖಾನ್‌ ಎಂಬುವರ ಏಜೆನ್ಸಿಗಳಿಂದ ಶೂ, ಸಾಕ್ಸ್‌ ಖರೀದಿಸಲಾಗಿದೆ ಎಂದು ದಾಖಲಿಸಲಾಗಿದೆ. ಆದರೆ, ಒಂದೇ ಕಂಪನಿಯು ಒಂದೊಂದು ಶಾಲೆಗೆ
ಒಂದೊಂದು ದರವನ್ನು ನಿಗದಿ ಮಾಡಿರುವುದು ಅನುಮಾನಕ್ಕೆಕಾರಣವಾಗಿದೆ.

ಯಾವುದೇ ಶಾಲೆಗಳು ನಿಯಮಾನುಸಾರಖರೀದಿಸಿಲ್ಲಎಂದುವರದಿಯಲ್ಲಿ ಶಿಕ್ಷಕರಬಣ್ಣವನ್ನುಬಯಲು ಮಾಡಿದೆ. ಸಮಾಜಕ್ಕೆ ಮಾದರಿಯಾಗಬೇಕಾಗಿದ್ದ ಶಿಕ್ಷಕರೇ ಈ ರೀತಿ ಲೋಪ ಮಾಡಿದರೆ ಹೇಗೆ ಎಂಬುವುದು ಸಾರ್ವಜನಿಕರ ಚರ್ಚೆಯಾಗಿದೆ.
ಒಟ್ಟಾರೆ ಶಿಕ್ಷಣ ಇಲಾಖೆಯಲ್ಲಿ ಆಗಿರುವ ಈ ಎಲ್ಲಾ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಶಿಕ್ಷಣ ಇಲಾಖೆ, ಯಾವ ರೀತಿಯಲ್ಲಿ ಕ್ರಮ ಜರುಗಿಸುತ್ತದೆ ಎಂಬುವುದನ್ನುಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next