Advertisement

“ರಾಜ್ಯದಲ್ಲಿ ವಿಧಿವಿಜ್ಞಾನ ವಿವಿ’: ಸಚಿವ ಆರಗ ಜ್ಞಾನೇಂದ್ರ

11:20 PM Dec 14, 2022 | Team Udayavani |

ಚಿತ್ರದುರ್ಗ: ರಾಜ್ಯದಲ್ಲಿ ಅಂತಾರಾಷ್ಟ್ರೀಯ ಮಾದರಿಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆಗೆ ಕೇಂದ್ರ ಗೃಹ ಸಚಿವರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

ಹಿರಿಯೂರು ತಾ| ಐಮಂಗಲ ಪೊಲೀಸ್‌ ತರಬೇತಿ ಶಾಲೆಯಲ್ಲಿ ಬುಧವಾರ ಕಾನ್‌ಸ್ಟೆಬಲ್‌ ನಿರ್ಗಮನ ಪಥ ಸಂಚಲನದಲ್ಲಿ ಅವರು ಮಾತನಾಡಿದರು. ಸಿಎಂ ಅವರೊಂದಿಗೆ ಚರ್ಚಿಸಿ ಈ ವಿವಿ ಸ್ಥಾಪನೆಗೆ ಅಗತ್ಯ ಸ್ಥಳ ನಿಗದಿ ಮಾಡಿ ಶೀಘ್ರದಲ್ಲೇ ಮತ್ತೂಮ್ಮೆ ಕೇಂದ್ರ ಸರಕಾರದೊಡನೆ ಚರ್ಚಿಸಲಾಗುವುದು.

ರಾಜ್ಯದ ಪೊಲೀಸ್‌ ನೇಮಕಾತಿ ಹಗರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಐಪಿಎಸ್‌ ಅಧಿಕಾರಿಯಿಂದ ಹಿಡಿದು ಕಾನ್‌ಸ್ಟೆಬಲ್‌ವರೆಗಿನವರನ್ನು ಬಂ ಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next