Advertisement
ಮಂಗಳವಾರ ಪಟ್ಟಣದ ಗಾಂಧಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಬಿಜೆಪಿ ಪಕ್ಷದವರು ಸುಳ್ಳು ಕಾರ್ಡ್ ಕೊಟ್ಟಿದ್ದೀವಿ ಎಂದು ಕೇಸ್ ಹಾಕಿದ್ದರು. ಅಷ್ಟೇ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಕೂಡ ಗ್ಯಾರಂಟಿ ಬಗ್ಗೆ ಅಪಹಾಸ್ಯ ಮಾಡಿದ್ದರು. ಆದರೆ ಈಗ ಮೋದಿ ಕೂಡ ಗ್ಯಾರಂಟಿ ನೀಡಲು ಮುಂದಾಗಿದ್ದಾರೆ. ರಾಜಸ್ತಾನ್ ಸೇರಿ ಇತರ ಕಡೆಯಲ್ಲಿ ಬಿಜೆಪಿ ಕೂಡ ಗ್ಯಾರೆಂಟಿ ಭರವಸೆ ನೀಡಿತ್ತು ಎಂದರು.
Related Articles
Advertisement
ಹುಟ್ಟಿನಿಂದ ನಾವು ನಮ್ಮ ಸಂಪ್ರದಾಯವನ್ನು ನಡೆದುಕೊಂಡು ಬಂದಿದ್ದೇವೆ. ನಮ್ಮ ನಂಬಿಕೆ ಬಗ್ಗೆ ಮಾತನಾಡುವುದಕ್ಕೆ ಆರಗ ಜ್ಞಾನೇಂದ್ರ ಹಾಗೂ ಸಂದೇಶ್ ಜವಳಿ ಯಾರು? ಕೋದಂಡರಾಮ ದೇವಸ್ಥಾನ ನಾವು ಅಭಿವೃದ್ಧಿ ಮಾಡಿದರೆ ಇವರಿಗೇನು ಸಮಸ್ಯೆ? ಈಗಾಗಲೇ ಮುಜರಾಯಿ ಇಲಾಖೆ ಸಚಿವರು 50 ಲಕ್ಷ ಹಣ ನೀಡಿದ್ದಾರೆ. ಈಗಾಗಲೇ ಹಲವು ದೇವಸ್ಥಾನಗಳಿಗೆ ನಾನು ಖಾಸಗಿಯಾಗಿ ಹಣ ನೀಡಿದ್ದೇನೆ ಹಾಗಾಗಿ ಎಲ್ಲಾ ದೇವಸ್ಥಾನಕ್ಕೆ ಹೋಗಿ ಕೋದಂಡ ರಾಮ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ನಡೆಸಲಿದ್ದೇವೆ. ಆರಗ ಎಷ್ಟು ಹಣ ದೇವಸ್ಥಾನಗಳಿಗೆ ನೀಡಿದ್ದಾರೆ ಎಂದು ತಿಳಿಸಲಿ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯನವರ ಬಜೆಟ್ ಅದ್ಭುತವಾಗಿದೆ. ಜ್ಞಾನೇಂದ್ರ ಹಾಗೂ ಅವರ ಪಕ್ಷ ಬಡವರ ಪರ ನಿಂತಿದ್ದು ಯಾವಾಗ? ತೀರ್ಥಹಳ್ಳಿಗೆ ಅವರು ಶಾಸಕ ಆಗಿರುವುದು ದುರಂತ, ಶಾಸನ ಸಭೆ ನಡೆಯುತ್ತಿದ್ದರೆ ಇಲ್ಲಿ ವೈಕುಂಠ ಸಮಾರಾಧನೆಗೆ ಬರುತ್ತಾರೆ. ಇವರನ್ನು ಶಾಸಕರಾಗಿ ಆಯ್ಕೆ ಮಾಡಿದ್ದೂ ಯಾವ ಕಾರಣಕ್ಕೆ? ಜನರ ಸಮಸ್ಯೆ ಕೇಳಬೇಕಾದ ಶಾಸಕರು ಇಲ್ಲಿ ವೈಕುಂಠ ಸಮಾರಾಧನೆಗೆ ಬರುವುದು ಯಾವ ನ್ಯಾಯ? ಎಂದು ಆರಗ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಕೆಸ್ತೂರು ಮಂಜುನಾಥ್, ಮೂಡುಬಾ ರಾಘವೇಂದ್ರ, ಗೀತಾ ರಮೇಶ್, ರಹಮತುಲ್ಲ ಅಸಾದಿ, ಮಂಜುಳಾ ನಾಗೇಂದ್ರ, ಅಮರನಾಥ್ ಶೆಟ್ಟಿ, ಆದರ್ಶ ಹುಂಚದಕಟ್ಟೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.