Advertisement

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಗೆ ಡೇಟ್ ಫಿಕ್ಸ್?

03:06 PM Mar 25, 2022 | Team Udayavani |

ಮುಂಬಯಿ: ಬಾಲಿವುಡ್ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರು ಇದೇ ಏಪ್ರಿಲ್ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

ಬಾಲಿವುಡ್ ಜೋಡಿಗಳಾದ ವಿಕ್ಕಿ ಕೌಶಲ್-ಕತ್ರಿನಾ ಕೈಫ್, ಫರ್ಹಾನ್ ಅಖ್ತರ್-ಶಿಬಾನಿ ದಾಂಡೇಕರ್ ಅವರ ವಿವಾಹದ ನಂತರ ಬಾಲಿವುಡ್ ಎದುರು ನೋಡುತ್ತಿರುವ ದೊಡ್ಡ ಮದುವೆ ಇದಾಗಿದೆ.

29 ರ ಹರೆಯದ ಆಲಿಯಾ ಮತ್ತು 39 ರ ಹರೆಯದ ರಣಬೀರ್  ತಮ್ಮ ಸಂಬಂಧದ ಬಗ್ಗೆ ಹೇಳಿಕೊಂಡಿದ್ದರೂ ಮದುವೆಯ ಬಗ್ಗೆ ಮಾತನಾಡುವುದರಿಂದ ದೂರವಿರುತ್ತಾರೆ. ಚಿತ್ರ ಪ್ರೇಮಿಗಳು ಮತ್ತು ಸುದ್ದಿಗಾರರು ಅವರ ಮದುವೆಯ ಸುದ್ದಿ ಕೇಳಲು ಕಾತುರರಾಗಿದ್ದಾರೆ.

ರಣಬೀರ್ ಅವರ ತಾಯಿ ನೀತು ಕಪೂರ್ ಅವರು ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಮಳಿಗೆಯಲ್ಲಿ ಕಾಣಿಸಿಕೊಂಡಿರುವುದು ಆ ಬಳಿಕ ಮನೀಶ್ ಅವರ ಮನೆಗೆ ತೆರಳಿರುವುದು ಮದುವೆಗೆ ಸಿದ್ಧತೆ ನಡೆಯುತ್ತಿರುವ ಸೂಚನೆ ಎಂದು ಊಹಿಸಲಾಗಿದೆ

ತಾರಾ ಜೋಡಿ ಮದುವೆ ಗಾಗಿ ಚಲನಚಿತ್ರಗಳ ಚಿತ್ರೀಕರಣದಿಂದ ದಿನಾಂಕಗಳ ಬಿಡುವನ್ನು ಕೇಳಿದ್ದಾರೆ ಎಂದು ಮೂಲವೊಂದು ತಿಳಿಸಿದೆ.

Advertisement

ಆಲಿಯಾ ಮತ್ತು ರಣಬೀರ್ ಇತ್ತೀಚೆಗೆ ವಾರಣಾಸಿಯಲ್ಲಿ ”ಬ್ರಹ್ಮಾಸ್ತ್ರ” ಚಿತ್ರದ ಕೊನೆಯ ದೃಶ್ಯಗಳನ್ನು ಚಿತ್ರೀಕರಿಸಿ ಮುಂಬೈಗೆ ಮರಳಿದ್ದಾರೆ. ಅವರು ಒಟ್ಟಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅಯನ್ ಮುಖರ್ಜಿ ನಿರ್ದೇಶನದ ಚಿತ್ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next