Advertisement

ಕೆನಡಾದತ್ತ ಐಟಿ ನೌಕ ರರ ಚಿತ್ತ

07:30 AM Mar 15, 2018 | Team Udayavani |

ಟೊರಾಂಟೋ:  ಉದ್ಯೋಗ ಅರಸಿ ಅಮೆರಿಕ ಪ್ರಯಾಣ ಬೆಳೆಸುವ ಭಾರತೀಯರ ಎಚ್‌1ಬಿ ವೀಸಾ ತಲೆನೋವು ಮುಂದುವರಿದಿದೆ. ಆದರೆ, ಈ ನಡುವೆಯೇ ಭಾರತ ಸೇರಿದಂತೆ ವಿದೇಶಿ ಟೆಕ್ಕಿಗಳಿಗೆ ಅವಕಾಶಗಳೇನು ಕೊರತೆ ಆದಂತಿಲ್ಲ. ಅತ್ತ ಕೆನಡಾ ಕೈಬೀಸುತ್ತಿರುವುದು ಒಳ್ಳೆಯ ಅವಕಾಶ ತೆರೆದುಕೊಳ್ಳುವ ಸಾಧ್ಯತೆ ಇದೆ ಎನ್ನುವ ನಿರೀಕ್ಷೆಯಲ್ಲಿ ಟೆಕಿಗಳಿದ್ದಾರೆ. 

Advertisement

“ದ ಹಿಂದುಸ್ತಾನ್‌ ಟೈಮ್ಸ್‌’ ಪತ್ರಿಕೆ ವರದಿ ಮಾಡಿರುವ ಪ್ರಕಾರ  ಕೆನಡಾ ಕಳೆದ ಜೂನ್‌ನಲ್ಲಿ ಆರಂಭಿಸಿದ ಗ್ಲೋಬಲ್‌ ಸ್ಕಿಲ್‌ ಯೋಜನೆ ಯಡಿ ಡಿಸೆಂಬರ್‌ 31ರ ತನಕ  ಹೆಚ್ಚುಕಡಿಮೆ 4,400 ಅರ್ಜಿಗಳಿಗೆ ಒಪ್ಪಿಗೆ ನೀಡಿದೆ. ಈ ಮೂಲಕ ವಿದೇಶಿ ವೃತ್ತಿಪರ ಹಾಗೂ ವ್ಯವಸ್ಥಾಪಕ ಕೌಶಲ್ಯ ಹೊಂದಿರುವ ವಿದೇಶಿಗರು ಅವಕಾಶವನ್ನು ಕಂಡು ಕೊಳ್ಳುತ್ತಿದ್ದಾರೆ. ಈ ಮೂಲಕ ಭಾರತೀಯರು ಬೇಡಿಕೆ ಉಳಿಸಿ ಕೊಳ್ಳುವಲ್ಲಿ ಯಶಸ್ವಿ ಯಾಗುತ್ತಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಈ ಬಗ್ಗೆ ಇ-ಮೇಲ್‌ ಪ್ರತಿಕ್ರಿಯೆ ನೀಡಿರುವ ಕೆನಡಾ ವಕ್ತಾರ ಲಿಂಡ್ಸೆ ವೆಂಪ್‌, “ಜಾಗತಿಕ ಮಟ್ಟದಲ್ಲಿ ಕಂಪನಿಗಳು ಕೌಶಲ್ಯ ಇರುವ ಉದ್ಯೋಗಿಗಳ ಹುಡುಕಾಟದಲ್ಲಿ ಸ್ಪರ್ಧೆ ಯಲ್ಲಿವೆ. ಯುರೋಪಿಯನ್‌ ರಾಷ್ಟ್ರಗಳು ಹಾಗೂ ಅಮೆರಿಕ ಕೂಡ ಈ ಸ್ಪರ್ಧೆಯಲ್ಲಿದ್ದು, ಇದರಿಂದ ಭಾರತ ಸೇರಿ ವಿದೇಶಿ ಉದ್ಯೋಗಿ ಗಳಿಗೆ ಬೇಡಿಕೆ ಜಾಸ್ತಿ ಇದೆ’ ಎಂದಿದ್ದಾರೆ.

ಸಿಂಗಾಪುರದಲ್ಲಿ ಇನ್ನಷ್ಟು ಬಿಗಿ: ಇವೆಲ್ಲದರ ನಡುವೆ ಇದೀಗ ಸಿಂಗಾಪುರದಲ್ಲಿ ವಿದೇಶಿ ವೃತ್ತಿಪರ ಹಾಗೂ ಕೌಶಲ್ಯ ಹೊಂದಿರುವ ಪ್ರತಿಭೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅವಕಾಶ ನೀಡುವ ಪ್ರಕ್ರಿಯೆಯ ನಿಯಮಾ ವಳಿಯನ್ನು ಇನ್ನಷ್ಟು ಬಿಗಿಗೊಳಿಸಲಾಗುತ್ತಿದೆ. ಇದರಿಂದಾಗಿ ಭಾರತೀಯರು ಸೇರಿದಂತೆ ವಿದೇಶಿ ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next