Advertisement

ಹೊಸ ನೀತಿಗೆ ಒಪ್ಪಿಗೆ

10:07 AM Sep 13, 2018 | Team Udayavani |

ಹೊಸದಿಲ್ಲಿ: ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸಂಪುಟ 15,053 ಕೋಟಿ ರೂ. ಮೌಲ್ಯದ ಹೊಸ ಖರೀದಿ ನೀತಿ ಅಂಗೀಕರಿಸಿದೆ. ಪ್ರಧಾನಮಂತ್ರಿ ಅನ್ನದಾತ ಆಯ್‌ ಸಂಕರ್ಷನ್‌ ಅಭಿಯಾನ (ಪಿಎಂ-ಆಶಾ) ಎಂದು ಅದಕ್ಕೆ ಹೆಸರನ್ನು ಇರಿಸಲಾಗಿದೆ. ಈ ಯೋಜನೆ ವ್ಯಾಪ್ತಿಯಲ್ಲಿ ರಾಜ್ಯ ಸರಕಾರಗಳು ರೈತರಿಗೆ ಅನುಕೂಲಕರವಾದ ರೀತಿಯಲ್ಲಿ ಬೆಂಬಲ ಬೆಲೆ ನೀಡಲು ಅನುಕೂಲ ಕಲ್ಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಬುಧವಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ಕೃಷಿ ಸಚಿವ ರಾಧಾಮೋಹನ್‌ ಸಿಂಗ್‌ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Advertisement

ಹೊಸ ಯೋಜನೆ- ಪಿಎಂ-ಆಶಾ ಯೋಜನೆ ವ್ಯಾಪ್ತಿಯಲ್ಲಿ ರಾಜ್ಯ ಸರಕಾರಗಳಿಗೆ ಮೂರು ಆಯ್ಕೆ ನೀಡಲಾಗಿದೆ. ಹಾಲಿ ದರ ಬೆಂಬಲ ಯೋಜನೆ (ಪಿಎಸ್‌ ಎಸ್‌), ದರ ಕುಸಿತ ಪಾವತಿ ಯೋಜನೆ(ಪ್ರೈಸ್‌ ಡೆμàಶಿಯನ್ಸಿ ಪೇಮೆಂಟ್‌ ಸ್ಕೀಂ),  ಯೋಗಿಕವಾಗಿ ಖಾಸಗಿ ಸಂಸ್ಥೆಗಳು ಬೆಳೆ ಸಂಗ್ರಹಣಾ ಯೋಜನೆ (ಪ್ರೈವೇಟ್‌ ಪ್ರೊಕ್ಯೂರ್‌ವೆುಂಟ್‌ ಸ್ಟಾಕಿಸ್ಟ್ಸ್ ಸ್ಕೀಂ) ಯೋಜನೆಗಳ ವ್ಯಾಪ್ತಿಯಲ್ಲಿ ಬೆಳೆಗಳ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಯಾದಲ್ಲಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ ಸಚಿವ ರಾಧಾಮೋಹನ್‌ ಸಿಂಗ್‌. ಈ ಯೋಜನೆಗಾಗಿ ಮುಂದಿನ 2 ಹಣಕಾಸು ವರ್ಷಗಳಿಗೆ 15,053 ಕೋಟಿ ರೂ.ನಿಗದಿ ಮಾಡಲಾಗಿದೆ. ಈ ಮೊತ್ತದಿಂದ ಮುಂದಿನ ಒಂದು ವರ್ಷದ ಅವಧಿಯಲ್ಲಿ 6,250 ಕೋಟಿ ರೂ. ವಿನಿಯೋಗ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಅನುಗುಣವಾಗಿ ಈ ಯೋಜನೆ ಘೋಷಣೆ ಮಾಡಿರುವುದು ಮಹತ್ವ ಪಡೆದಿದೆ. ಇದೇ ವೇಳೆ ಎಣ್ಣೆ ಕಾಳುಗಳ ಬೆಳೆಗಳಿಗಾಗಿ ಮಧ್ಯಪ್ರದೇಶದಲ್ಲಿ ಜಾರಿಯಲ್ಲಿರುವ ದರ ಕುಸಿತ ಪಾವತಿ ಯೋಜನೆ (ಪಿಡಿಪಿಎಸ್‌) ಅನ್ವಯವೇ ಜಾರಿ ಮಾಡಲಾಗಿದೆ. ಇದಲ್ಲದೆ ಬೆಳೆಗಳ ಸಂಗ್ರಹಣಾ ಸಂಸ್ಥೆಗಳಿಗೆ ನೀಡಲಾಗುವ ಸರಕಾರಿ ಖಾತರಿ ಮಿತಿಯನ್ನು 16,550 ಕೋಟಿ ರೂ.ಗಳಿಗೆ ಏರಿಕೆ ಮಾಡಲಾಗಿದೆ. ರಾಜ್ಯಗಳು ಪ್ರಾಯೋಗಿಕವಾಗಿ ಖಾಸಗಿ ಸಂಸ್ಥೆಗಳ ಮೂಲಕ ಬೆಳೆ ಖರೀದಿ ಕೇಂದ್ರಗಳ ಆರಂಭಕ್ಕೂ ಸಮ್ಮತಿ ಸೂಚಿಸಲಾಗಿದೆ.
13 ಸಾವಿರ ಕಿ.ಮೀ. ವಿದ್ಯುದೀಕರಣ: ಮತ್ತೊಂದು  ಮಹತ್ವದ ತೀರ್ಮಾನದಲ್ಲಿ ದೇಶದಲ್ಲಿ 13 ಸಾವಿರ ಕಿ.ಮೀ. ರೈಲು ಮಾರ್ಗವನ್ನು ವಿದ್ಯುದೀಕರಣ ಮಾಡಲು ಸಂಪುಟ ಅನುಮೋದನೆ ನೀಡಿದೆ. 2021-22ನೇ ಸಾಲಿನಲ್ಲಿ ಈ ಯೋಜನೆ ಮುಕ್ತಾಯವಾಗಲಿದೆ. 
ಇಥೆನಾಲ್‌ ಬೆಲೆ ಹೆಚ್ಚಳ: ಸಕ್ಕರೆ ಕಾರ್ಖಾನೆಗಳಿಂದ ಖರೀದಿ ಮಾಡಲಾಗುವ ಇಥೆನಾಲ್‌ ದರವನ್ನು ಪ್ರತಿ ಹಾಲಿ 47.49 ರೂ.ಗಳಿಂದ 52.43 ರೂ.ಗೆ ಹೆಚ್ಚಿಸಲು ಸಂಪುಟ ಅನುಮೋದನೆ ನೀಡಿದೆ.

ಮಹಾರಾಷ್ಟ್ರದಲ್ಲಿ ವಿಶೇಷ ಯೋಜನೆ
ಮಹಾರಾಷ್ಟ್ರ ಸರಕಾರ ಕೃಷಿ ಉತನ್ನಗಳ ಮಾರಾಟದಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ವಿಶೇಷ ಯೋಜನೆ ರೂಪಿಸಲು ಮುಂದಾಗಿದೆ. ಉತ್ಪನ್ನಗಳ ಖರೀದಿಗೆ ಗೃಹ ಸಹಕಾರ ಸಂಘಗಳಿಗೆ ಉತ್ತೇಜನ ನೀಡಲು ಮುಂದಾಗಿದೆ. ಈ ಬಗ್ಗೆ ಶೀಘ್ರವೇ ಆದೇಶ ಹೊರಡಿಸಲು ಮುಂದಾಗಿದೆ. ರೈತರಿಗೆ ಉತ್ತಮ ಬೆಲೆ ಮತ್ತು ಗ್ರಾಹಕರಿಗೆ ಕೂಡ ಕೈಗೆಟಕುವ ದರದಲ್ಲಿ ವಿವಿಧ ವಸ್ತುಗಳು ಸಿಗುವಂತಾಗಲಿದೆ. ವಿವಿಧ ಗೃಹ ಸಹಕಾರ ಸಂಘಗಳಲ್ಲಿ ನಿಗದಿತ ಸ್ಥಳವನ್ನು ಸ್ವಸಹಾಯ ಸಂಘಗಳಿಗೆ ಮಾರಾಟ ಮತ್ತು ಖರೀದಿಗೆ ಅವಕಾಶ ಕಲ್ಪಿಸಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next