ಬಂಗಾರಪೇಟೆ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸು ನನಸು ಮಾಡುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ 156 ಗ್ರಾಪಂಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪನೆ ಮಾಡಲಾಗುತ್ತಿದ್ದು, ಸದ್ಯಕ್ಕೆ 80 ಗ್ರಾಪಂಗಳಲ್ಲಿನಿರ್ಮಾಣ ಮಾಡಲು ಸರ್ಕಾರದ ಅನುಮೋದನೆ ಸಿಕ್ಕಿದ್ದು, ಉಳಿದ ಗ್ರಾಪಂಗಳಲ್ಲಿ ಹಂತ ಹಂತವಾಗಿ ನಿರ್ಮಾಣ ಮಾಡಲಾಗುವುದು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಆರ್. ರವಿಕುಮಾರ್ ಹೇಳಿದರು.
ತಾಲೂಕಿನ ಕಾಮಸಮುದ್ರ ಗ್ರಾಪಂನಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಘನತ್ಯಾಜ್ಯಘಟಕ ಕಟ್ಟಡ ಉದ್ಘಾಟನೆ ಹಾಗೂ “ಸ್ವಚ್ಛೋತ್ಸವ ಆಗಲಿ ನಿತ್ಯೋತ್ಸವ’ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲೆಯನ್ನು ಕಸಮುಕ್ತ ಮಾಡುವ ಉದ್ದೇಶದಿಂದ ಅ.2 ರಂದು ಗಾಂಧೀಜಿಯವರ ಹುಟ್ಟುಹಬ್ಬದ
ಅಂಗವಾಗಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಸ್ವಚ್ಛತೆ ಮಾಸಾಚರಣೆಯಲ್ಲಿ ವೈಯಕ್ತಿಕ ಸ್ವಚ್ಛತೆ,ಶೌಚಾಲಯ ಬಳಕೆ, ಹಸಿಕಸ, ಒಣ ಕಸ ವಿಂಗಡಣೆ ಹಾಗೂ ಕೆಮಿ ಕಲ್ ಕಸ ವಿಲೇವಾರಿ ಬಗ್ಗೆ ಒತ್ತು ಕೊಡಲಾಗುವುದು. ಈ ಬಗ್ಗೆ ಗ್ರಾಪಂ ನೀಡುವ ಸೂಚನೆಗಳನ್ನು ಸಾರ್ವಜನಿಕರು ಪಾಲಿಸಿ ಸಹಕಾರ ನೀಡಬೇಕು ಎಂದರು. ಜಿಪಂ ಉಪ ಕಾರ್ಯದರ್ಶಿ ಆರ್.ಸಂಜೀವಪ್ಪ, ಜಿಪಂಸಹಾಯಕಕಾರ್ಯದರ್ಶಿವೆಂಕಟಾಚಲಪತಿ,ಸಹಾಯಕ ಯೋಜನಾ ನಿರ್ದೇಶಕ ಗೋವಿಂದೇಗೌಡ,ತಾಪಂಇಒಎನ್.ವೆಂಕಟೇಶಪ್ಪ, ಕೆಜಿಎಫ್ ಇಒ ಬಿ.ಎಂ.ಮಂಜುನಾಥ್, ಎಸ್‌ಬಿಎಂ ಜಿಲ್ಲಾ ಸಮಾಲೋಚಕ ಕೆ.ವಿ.ಜಗದೀಶ್, ಪಂಚಾಯತ್ ರಾಜ್ ಇಲಾಖೆಯ ಪ್ರಭಾರಿ ಇಇ ಎಚ್.ಡಿ.ಶೇಷಾದ್ರಿ, ಸಹಾಯಕ ಇಂಜಿನಿಯರ್ ರವಿಚಂದ್ರನ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಎನ್.ಶ್ರೀನಿವಾಸ್, ಎಸ್‌ಇಒ ಜೆ.ಶ್ರೀನಿವಾಸಲು, ತೋಟಗಾರಿಕೆ ಎಡಿ ಶಿವಾರೆಡ್ಡಿ, ಕಾಮಸಮುದ್ರ ಪಿಡಿಒ ಸಿ.ಎಂ.ವಾಣಿ, ಕಾರಹಳ್ಳಿ ಕೆ.ಆರ್.ಸುರೇಶಬಾಬು, ಸೂಲಿಕುಂಟೆ ಶಂಕರ್, ಬಲಮಂದೆ ಮಧುಚಂದ್ರ, ಕೇತಗಾನಹಳ್ಳಿ ಸರಸ್ವತಿ, ಹುನ್ಕುಂದ ದಿವ್ಯಾ,ಕಾರ್ಯದರ್ಶಿ ರಾಜಣ್ಣ ಇದ್ದರು.