ಮಾನವರು ರಚಿಸಿಹರು ಜಾತಿ- ಮತಗಳನು
ಜಾತಿ- ಮತಗಳೆಷ್ಟಾದರೇನು, ನೀತಿಯೊಂದಲ್ಲವೇ?
ನೀತಿ ನಿಯಮದಿ ನಿಲ್ಲೆ ಮಹಾಮಾನವನೆಂದ ನಮ್ಮ ಮೃಡಗಿರಿ ಅನ್ನದಾನೀಶ
ಮಾನವನು ಶಿವ ನಿರ್ಮಿತನಾದರೆ, ಜಾತಿಯು ಮಾನವ ನಿರ್ಮಿತ. ಜಾತಿ- ಮತಗಳೆಷ್ಟಾದರೂ ನೀತಿ- ನಿಯಮಗಳೇ ಮಾನವಧರ್ಮದ ಮೇರುದಂಡವಾಗಿದೆ. ಕಾರ್ಯತತ್ಪರನಾಗಲು ಜೀವನದಲ್ಲಿ ಮೊದಲು ಧೈರ್ಯ ಬೇಕು. ಧೃತಿಯಿಂದ ಸತ್ಕಾರ್ಯಗಳು ಸಿದ್ಧಿಸುತ್ತವೆ. ಶ್ರೇಯಸ್ಸಾಧನೆಯಲ್ಲಿ ಧೃತಿ ಮುಖ್ಯ. ದುರ್ಮಾರ್ಗದತ್ತ ಧೈರ್ಯ ಪ್ರವೃತ್ತರಾದರೆ, ಮಾನವನು ದಾನವನಾಗುವನು. ಸತ್ಯ, ಅಹಿಂಸೆಗಳನ್ನು, ನ್ಯಾಯ- ನೀತಿಗಳನ್ನು ಸಾಧಿಸುವಲ್ಲಿ ಧೃತಿ ಅವಶ್ಯವಾಗಿದೆ.
Advertisement
ಶಿಕ್ಷೆಯಿಂದ ಮನುಷ್ಯನು ಸೇಡಿನ ಭಾವ ಹೊಂದಬಹುದು. ಕ್ಷಮೆಯಿಂದ ಮನಃಪರಿವರ್ತನೆ ಹೊಂದಲು ಸಾಧ್ಯವಿದೆ. ಧೃತಿ, ಕ್ಷಮೆಗಳು ಮನದಟ್ಟಾಗಲು ದಯೆಯ ಅನುಸಂಧಾನ ಪ್ರಮುಖವಾಗಿದೆ. ಬಹಿರಿಂದ್ರಿಯ ನಿಗ್ರಹದಿಂದ ಧೃತಿ, ಕ್ಷಮೆಗಳು ಭದ್ರವಾಗಿರುತ್ತವೆ. ಆರ್ಥಿಕ ಸಮತೆಯನ್ನು ಸಾಧಿಸಲು ಆಸ್ಥೆಯ ವ್ರತವು ಮಹತ್ವದ್ದಾಗಿದೆ. ಇದರಿಂದ ಸಾಮಾಜಿಕ ಜೀವನದಲ್ಲಿ ಕೊರತೆ ಬಾರದು. ಅಭಾವ ಪರಿಸ್ಥಿತಿ ದೂರಾಗುವುದು.
Related Articles
Advertisement