Advertisement

“ಧಾರ್ಮಿಕ ದತ್ತಿ ಪ್ರಕರಣಗಳ ಇತ್ಯರ್ಥಕ್ಕೆ ಹೆಚ್ಚುವರಿ ವಕೀಲರ ನೇಮಕ’

11:02 AM Jul 09, 2020 | mahesh |

ಕೋಟ: ಧಾರ್ಮಿಕ ದತ್ತಿ ದೇಗುಲಗಳ ಕೋಟ್ಯಂತರ ಮೌಲ್ಯದ ಆಸ್ತಿಗಳು ಪರಭಾರೆಯಾಗಿದೆ ಹಾಗೂ ಆಡಳಿತಾಧಿಕಾರಿ ನೇಮಕ ಸಹಿತ ಹಲವಾರು ವಿವಾದಗಳು ನ್ಯಾಯಾಲಯದಲ್ಲಿವೆ. ಇವುಗಳ ಶೀಘ್ರ ಇತ್ಯರ್ಥಕ್ಕಾಗಿ 15 ಮಂದಿ ಹಿರಿಯ ವಕೀಲರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದ್ದು ಪ್ರಕರಣಗಳನ್ನು ಶೀಘ್ರ ಬಗೆಹರಿಸಲಾಗುವುದು ಹಾಗೂ ಯಾವುದೇ ಕಾರಣಕ್ಕೆ ದೇಗುಲಗಳ ಆಸ್ತಿ ಖಾಸಗಿಯವರು ಪರಭಾರೆಯಲ್ಲಿರಲು ಬಿಡುವುದಿಲ್ಲ ಎಂದು ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

ಅವರು ಬುಧವಾರ ಕೋಟದಲ್ಲಿ ಪತ್ರಕರ್ತರೊಂದಿಗೆ ಈ ವಿಚಾರ ತಿಳಿಸಿದರು. ಸಪ್ತಪದಿ ಯೋಜನೆಯನ್ನು ಕೈಬಿಡುವ ಪ್ರಶ್ನೆ ಇಲ್ಲ. ಕೋವಿಡ್ ತೀವ್ರತೆ ಕಡಿಮೆಯಾದ ಮೇಲೆ ಆರೋಗ್ಯ ಇಲಾಖೆಯ ಮಾರ್ಗದರ್ಶನ ಪಡೆದು ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಕಟೀಲು: ಸೂಕ್ತ ರೀತಿಯ ಕ್ರಮ
ಕಟೀಲು ದೇಗುಲದ ಆಡಳಿತದ ವಿಚಾರದಲ್ಲಿ ನಡೆಯುತ್ತಿರುವ ಚರ್ಚೆಯ ಕುರಿತು ಪ್ರಶ್ನಿಸಿದಾಗ, ದೇಗುಲಕ್ಕೆ ಆಡಳಿತಾಧಿಕಾರಿ ನೇಮಕ, ಯಕ್ಷಗಾನ ಮೇಳದ ವಿಚಾರದಲ್ಲಿ ಪರ-ವಿರೋಧದ ಪ್ರಕರಣಗಳು ನ್ಯಾಯಾಲಯದಲ್ಲಿದೆ. ಪ್ರಕರಣ ಇತ್ಯರ್ಥವಾದ ಮೇಲೆ ಸೂಕ್ತ ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next