Advertisement

ನೇಮಕಾತಿ ಅಕ್ರಮ: ತಪ್ಪೆಸಗಿದವರಿಗೆ ಶಿಕ್ಷೆಯಾಗಲಿ

02:59 PM May 04, 2022 | Team Udayavani |

ಗಂಗಾವತಿ: ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ವ್ಯಾಪಕ ಅಕ್ರಮ ನಡೆದಿದ್ದು, ಇದರಲ್ಲಿ ಹಲವು ಸಚಿವರ ಪಾತ್ರವಿದೆ. ಅವರ ತಲೆ ದಂಡ ಖಚಿತವಾಗಿದ್ದು, ಸಚಿವ ಅಶ್ವತ್ಥ ನಾರಾಯಣ ಕೂಡಲೇ ರಾಜೀನಾಮೆ ನೀಡಬೇಕೆಂದು ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಒತ್ತಾಯಿಸಿದರು.

Advertisement

ಅವರು ಸುದ್ದಿಗಾರರೊಂದಿಗೆ ಬಿಜೆಪಿ ಸರಕಾರದ ಅವಧಿಯಲ್ಲಿ ಬಿಜೆಪಿ ಬಹುತೇಕ ಮುಖಂಡರು ನೇಮಕಾತಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದಾರೆ. ಸಿವಿಲ್‌ ಎಂಜಿನಿಯರ್‌, ಪ್ರಾಧ್ಯಾಪಕರು, ಪಿಎಸ್‌ಐ ಹಾಗೂ ನವೋದಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಆಯ್ಕೆಯಂತಹ ಪ್ರಮುಖ ಪರೀಕ್ಷೆಯಲ್ಲಿಯೂ ಬಿಜೆಪಿಯ ಪ್ರಮುಖರು ನಕಲಿ ಮಾಡಿಸಿ ತಮಗೆ ಬೇಕಾದವರಿಗೆ ನೌಕರಿ ಕೊಡಿಸುವ ದಂಧೆ ನಡೆಸಿದ್ದಾರೆ. ನಿಜವಾಗಿ ಶ್ರಮ ವಹಿಸಿ ಓದಿದ ಪ್ರತಿಭಾನ್ವಿತರಿಗೆ ಅನ್ಯಾಯವಾಗಿದೆ. ಸಚಿವ ಅಶ್ವಥ ನಾರಾಯಣ ಅವರ ಸಹೋದರರ ಪಾತ್ರವಿದ್ದು ಸರಕಾರ ಕೂಡಲೇ ನಿವೃತ್ತ ಹೈಕೋರ್ಟ್‌ ನ್ಯಾಯಾಧೀಶರ ರಿಂದ ತನಿಖೆ ನಡೆಸಬೇಕು. ಈ ಹಿಂದೆ ಕೆಪಿಎಸ್ಸಿಯಲ್ಲಿ ನಡೆದ ಹಗರಣದಲ್ಲಿ ನೇಮಕವಾದವರನ್ನು ಕೈ ಬಿಟ್ಟಂತೆ ಈಗಲೂ ಪಿಎಸ್‌ಐ ನೇಮಕಾತಿ ಕೈ ಬಿಡಬೇಕು. ಸಚಿವ ಎಂ.ಟಿ.ಬಿ. ನಾಗರಾಜ ಅವರು ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಹೋಗಿದ್ದು ತಪ್ಪಾಗಿದೆ ಎಂದು ಈಗ ಪಶ್ಚಾತಾಪ ಪಡುತ್ತಿದ್ದಾರೆ. ಬಿಜೆಪಿ ನರಕ ಎಂದು ಎಂಟಿಬಿಯವರಿಗೆ ಈಗ ತಿಳಿದಿದೆ. ಕಾಂಗ್ರೆಸ್‌ ಬಿಟ್ಟೋದವರನ್ನು ವಾಪಸ್‌ ಕರೆದುಕೊಳ್ಳುವ ಕುರಿತು ಮುಖಂಡರಾದ ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯ ಸೇರಿ ಪಕ್ಷದ ಹೈಕಮಾಂಡ್‌ ನಿರ್ಧಾರ ಕೈಗೊಳ್ಳುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next