Advertisement
ಬೆಂಬಲ ಸಿಬಂದಿಗಳ ಪಡೆಯಲ್ಲಿ ಆಮೂಲಾಗ್ರ ಬದಲಾವಣೆ ತರಲು ಬಿಸಿಸಿಐ ಬಯಸಿದೆ. ಹಾಗಾಗಿ ಮುಖ್ಯ ಕೋಚ್, ಬ್ಯಾಟಿಂಗ್ ಕೋಚ್, ಬೌಲಿಂಗ್ ಕೋಚ್, ಫೀಲ್ಡಿಂಗ್ ಕೋಚ್, ಫಿಸಿಯೊಥೆರಪಿಸ್ಟ್ ಮತ್ತು ಆಡಳಿತ ವ್ಯವಸ್ಥಾಪಕರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಜುಲೈ 30ರ ಸಂಜೆ 5 ಗಂಟೆಯ ಮೊದಲು ಅರ್ಜಿ ಸಲ್ಲಿಸಬೇಕಾಗಿದೆ.
Related Articles
ಹಾಲಿ ಬೆಂಬಲ ಸಿಬಂದಿಗಳಾದ ಶಾಸಿŒ, ಬೌಲಿಂಗ್ ಕೋಚ್ ಭರತ್ ಅರುಣ್, ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಮತ್ತು ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಅವರಿಗೆ 45 ದಿನಗಳ ವಿಸ್ತರಣಾ ಅವಧಿ ನೀಡಲಾಗಿದೆ. ಅವರೆಲ್ಲರೂ ಆ. 3ರಿಂದ ಸೆ. 3ರವರೆಗೆ ನಡೆಯಲಿರುವ ವೆಸ್ಟ್ ಇಂಡೀಸ್ ಪ್ರವಾಸದವರೆಗೆ ಭಾರತೀಯ ತಂಡದ ಜತೆಗಿರಲಿದ್ದಾರೆ.
Advertisement
ಇವರೆಲ್ಲರೂ ಮತ್ತೆ ಅರ್ಜಿ ಸಲ್ಲಿಸಬಹುದು. ಆದರೆ ಟ್ರೈನರ್ ಮತ್ತು ಫಿಸಿಯೋ ಹುದ್ದೆಗೆ ಹೊಸಬರನ್ನು ಆಯ್ಕೆ ಮಾಡಬೇಕಾಗುತ್ತದೆ. ಭಾರತ ಸೆಮಿಫೈನಲ್‌ನಲ್ಲಿ ಸೋತ ಬಳಿಕ ಶಂಕರ್ ಬಾಬು ಮತ್ತು ಪ್ಯಾಟ್ರಿಕ್ ಫರ್ಹಾರ್ತ್ ಅವರು ಅನುಕ್ರಮವಾಗಿ ಟ್ರೈನರ್ ಮತ್ತು ಫಿಸಿಯೋ ಹುದ್ದೆಯನ್ನು ತ್ಯಜಿಸಿದ್ದರು.
ವೆಸ್ಟ್‌ಇಂಡೀಸ್ ಪ್ರವಾಸದ ಬಳಿಕ ಸೆ. 15ರಿಂದ ಭಾರತದ ತವರಿನ ಋತು ಆರಂಭವಾಗಲಿದೆ. ಮೊದಲ ಸರಣಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿದೆ. ಈ ವೇಳೆ ಎಲ್ಲ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
2017ರಲ್ಲಿ ಶಾಸಿŒ ನೇಮಕಅನಿಲ್ ಕುಂಬ್ಳೆ ವಿವಾದಾತ್ಮಕವಾಗಿ ಹುದ್ದೆ ತ್ಯಜಿಸಿದ ಬಳಿಕ ರವಿಶಾಸಿŒ ಅವರನ್ನು 2017ರಲ್ಲಿ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿತ್ತು. 57ರ ಹರೆಯದ ಅವರು ಆಗಸ್ಟ್ 2014ರಿಂದ ಜೂನ್ 2016ರ ವರೆಗೆ ಕ್ರಿಕೆಟ್ ನಿರ್ದೇಶಕರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಅವರು ಮುಖ್ಯ ಕೋಚ್ ಆಗಿದ್ದ ವೇಳೆ ಭಾರತೀಯ ತಂಡ ಐಸಿಸಿಯ ಪ್ರಮುಖ ಕೂಟಗಳಲ್ಲಿ ಪ್ರಶಸ್ತಿ ಗೆಲ್ಲಲಿಲ್ಲ. ಆದರೆ ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯದಲ್ಲಿ ಚೊಚ್ಚಲ ಬಾರಿ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಿತ್ತು. ಮೂರು ಷರತ್ತುಗಳು
ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಕಡಿಮೆಪಕ್ಷ ಎರಡು ವರ್ಷ ಟೆಸ್ಟ್ ಆಟವಾಡುವ ರಾಷ್ಟ್ರಕ್ಕೆ ತರಬೇತಿ ನೀಡಿರಬೇಕು ಅಥವಾ ಅಸೋಸಿಯೆಟ್ ಸದಸ್ಯ/ ಎ ತಂಡ/ ಐಪಿಎಲ್ ತಂಡಕ್ಕೆ ಮೂರು ವರ್ಷ ತರಬೇತಿ ನೀಡಿರಬೇಕು. ಅರ್ಜಿದಾರರು 30 ಟೆಸ್ಟ್ ಅಥವಾ 50 ಏಕದಿನ ಪಂದ್ಯಗಳನ್ನು ಆಡಿರಬೇಕು. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್‌ಗಳಿಗೆ ಈ ಷರತ್ತು ಅನ್ವಯವಾಗಲಿದೆ. ಆದರೆ ಪಂದ್ಯ ಆಡಿದ ಸಂಖ್ಯೆಗಳಲ್ಲಿ ವ್ಯತ್ಯಾಸವಿರಲಿದೆ. ಈ ಮೂರು ಹುದ್ದೆಗಳಿಗೆ ಅರ್ಜಿ ಹಾಕುವವರು ಕಡಿಮೆಪಕ್ಷ 10 ಟೆಸ್ಟ್ ಅಥವಾ 25 ಏಕದಿನ ಆಡಿರಬೇಕು ಮತ್ತು 60 ವರ್ಷ ದಾಟಿರಬಾರದು.